ಹಸಿರು ಕ್ರಾಂತಿ ವರದಿ ಇಂಡಿ
ತಾಲೂಕಿನ ಚಣ್ಣೆಗಾಂವ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಇಂಡಿಯ ಸ್ಪಂದನಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಬೃಹತ್ ಆರೋಗ್ಯ ಉಚಿತ ತಪಾಸಣೆ ಶಿಬಿರ ಆ.30 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ.
ಶಿಬಿರದಲ್ಲಿ ಬಿಪಿ, ಶುಗರ್, ಮೈಕೈನೋವು, ಮಂಡಿ ನೋವು, ಫಿಸಿಯೋಥೆರಪಿ ಸೇರಿದಂತೆ ಹೆಣ್ಣುಮಕ್ಕಳ ಗುಪ್ತ ಸಮಾಲೋಚನೆಯು ತಜ್ಞ ವೈದ್ಯರಿಂದ ನಡೆಸಲಾಗುವುದು ಎಂದು ಸ್ಪಂದನಾ ಸೂಪರ್ ಸ್ಪೇಷಲಿಟಿ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಲಕ್ಷ್ಮೀಕಾಂತ ಮೇತ್ರಿ ತಿಳಿಸಿದ್ದಾರೆ.
ಶಿಬಿರ ಪ್ರಯೋಜನ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊ.9886088099 ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.