ಸಂಕೇಶ್ವರ : ಸ್ಥಳೀಯ ಪುರಸಭೆಯ ಮಾಲೀಕತ್ವದ ವಾಣಿಜ್ಯ ಮಳಿಗೆಗಳ ಬಾಡಿಗೆ ಸರಿಯಾಗಿ ಪಾವತಿಸದೆ ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡ ಕಾರಣ ಪುರಸಭೆಯ ಅಧಿಕಾರಿಗಳು ಮಳಿಗೆಗಳಿಗೆ ಬೀಗ ಹಾಕಿದರು.
ಪಟ್ಟಣದ ಚನ್ನಮ್ಮ ಸರ್ಕಲ್ ಬಳಿಯ ಪುರಸಭೆಯ ಮೂರು ವಾಣಿಜ್ಯ ಮಳಿಗೆಗಳಿಗೆ ಪುರಸಭೆಯ ಕಂದಾಯ ಅಧಿಕಾರಿಗಳು ಮಳಿಗೆಯ ವರ್ತಕರ ಮುಂದೆಯೇ ಅವರ ವಸ್ತುಗಳನ್ನು ಪಟ್ಟಿ ಮಾಡಿ ಮುಖ್ಯಾಧಿಕಾರಿಗಳಾದ ಪ್ರಕಾಶ ಮಠದ ಆದೇಶದಂತೆ ಸೀಲ್ ಮಾಡಿ ನೋಟಿಸ್ ಅಂಟಿಸಿದರು.
ಪುರಸಭೆಯ ಮುಖ್ಯಾಧಿಕಾರಿಗಳಾದ ಪ್ರಕಾಶ ಮಠದ ಮಾತನಾಡಿ, ಕಳೆದ 2012-13 ರಿಂದ 2026-27 ಸಾಲಿನ ವರೆಗೆ ಸರಿಯಾಗಿ ಬಾಡಿಗೆ ಕಟ್ಟಿಲ್ಲ, ಹಾಗೂ ಮೂರು ಬಾರಿ ನೋಟಿಸ್ ನೀಡಿದರು ಸಹ ಬಾಕಿ ಮೊತ್ತವನ್ನು ಪಾವತಿಸಿಲ್ಲದ ಕಾರಣ ಕರ್ನಾಟಕ ಮುನಶಿಪಾಲಟಿಗಳ ಅಧಿನಿಯಮ ಪ್ರಕಾರ ಮಳಿಗೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಅಲ್ಲಿರುವ ಸರಕು ಹಾಗೂ ಪೀಠೋಪಕರಣ ಮತ್ತು ವಸ್ತುಗಳನ್ನು ಜಪ್ತಿ ಮಾಡಿ, ಜಪ್ತಿ ಮಾಡಿದ ವಸ್ತುಗಳ ವಿವರಗಳನ್ನು ನೀಡಿ ನೋಟಿಸ್ ಅಂಟಿಸಲಾಗಿದೆ.
ಎಂದು ತಿಳಿಸಿದರು.
ಈ ಕಾರ್ಯಾಚರಣೆಯಲ್ಲಿ ಪುರಸಭೆಯ ಕಂದಾಯ ಹಾಗೂ ಜಪ್ತಿ ಅಧಿಕಾರಿಗಳಾದ ವಿನಾಯಕ ಬಬಲೇಶ್ವರ, ಕಂದಾಯ ನೀರೀಕ್ಷಕರಾದ ಸೌರಭ ಸೇದುಂರೆ, ವಸೂಲಿ ಸಹಾಯಕರಾದ ಅಶೋಕ ಹೆಗ್ಗಡೆ, ಬಿ.ಎಸ್.ಕಾಕೋಳಿ ಸಿಬ್ಬಂದಿಗಳಾದ ರಾಜು ಪಾಟೀಲ, ಆನಂದ ಟೆಂಬರೆ, ಅಶ್ವೀನಿ ವಾಗಮೋಡೆ, ನಾಗವೇನಿ ಹುಲೋಳಿ, ಪ್ರಜ್ಜಲ್ ಭೋಸಲೆ, ಗ್ರಾಮಲೆಕ್ಕಾಧಿಕಾರಿ ಎನ್.ಆರ್.ಪಾಟೀಲ, ಪೋಲಿಸ ಅಧಿಕಾರಿಗಳು ಹಾಜರಿದ್ದರು.
