ಬೀಳಗಿ- ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯನ್ನು ಪತಿ ಸ್ಟೀಲ್ ರಾಡ್‌ದಿಂದ ಹೊಡೆದು ಕುತ್ತಿಗೆಗೆ ಸೀರೆ ಬಿಗಿದು ಜಂತಿಗೆ ನೇಣು ಹಾಕಿ ಕೊಲೆ ಮಾಡಿರುವ ಘಟನೆ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ.
ಭಾಗ್ಯಶ್ರೀ ಅನೈತಿಕ ಸಂಬಂಧ ಹೊಂದಿರುವ ಶಂಕೆಯಿಂದ ಜಗಳ ನಡೆದಿದೆ ಎಂದು ಹೇಳಲಾಗುತ್ತಿದೆ. ಪತಿಯಿಂದ ಕೊಲೆಯಾದ ದುರ್ದೈವಿ ಪತ್ನಿ ಭಾಗ್ಯಶ್ರೀ ಜಿಗಳೂರ (೨೩). ಕೊಲೆ ಮಾಡಿ ನೇಣು ಹಾಕಿದ ಪತಿ ಪ್ರವೀಣ ಜಗಳೂರ (೨೯). ಕೊಲೆಯಾದ ಸ್ಥಳದಲ್ಲಿದ್ದ ಪತಿ, ಭಾಗ್ಯಶ್ರೀ ನೇಣು ಬಿಗಿದ ಸ್ಥಿತಿಯಲ್ಲಿ ಆತ್ಮಹತ್ಯೆ ಎಂದು ಬಿಂಬಿಸುವ ಉದ್ದೇಶದಿಂದ
ಮೊಬೈಲ್‌ನಲ್ಲಿ ವಿಡಿಯೋ ಚಿತ್ರಿಕರಿಸಿ ಪತ್ನಿಯ ಸಂಬಂಕರಿಗೆ ಕಳುಹಿಸಿದ್ದಾನೆ,ಇವರಿಬ್ಬರು ಮದುವೆಯಾಗಿ ಆರು ವರ್ಷ ಕಳೆದಿದ್ದು ಇವರಿಗೆ ಒಂದು ಗಂಡು ಮಗುವಿದೆ. ಈ ಹಿಂದೆ ಪತಿ, ಪತ್ನಿಯ ಮಧ್ಯೆ ಜಗಳ ನಡೆದಿದ್ದು, ಕೆಲ ದಿನಗಳ ಹಿಂದೆ ಭಾಗ್ಯಶ್ರೀ ತವರು ಮನೆಗೆ ತೆರಳಿದ್ದರು. ತವರು ಮನೆಯಿಂದ ಹೆಂಡತಿ ಕರೆ ತಂದಿದ್ದ ಪತಿ ಪ್ರವೀಣ ಹಾಗೂ ಭಾಗ್ಯಶ್ರೀ ಮಧ್ಯೆ ಮತ್ತೆ
ಜಗಳವಾಗಿತ್ತು ಎಂದು ತಿಳಿದುಬಂದಿದೆ. ಭಾಗ್ಯಶ್ರೀ ಕುಟುಂಬದವರು ಕೊಲೆ ಆರೋಪ ಮಾಡಿ ಪ್ರವೀಣ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ. ಕೊಲೆ ಮಾಡಿದ ಆರೋಪಿ ಪ್ರವೀಣನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಘಟನಾ ಸ್ಥಳಕ್ಕೆ ಎಸ್ ಪಿ ಸಿದ್ಧಾರ್ಥ ಗೋಯಲ್, ಹೆಚ್ಚುವರಿ ಎಸ್‌ಪಿ ಜಗದೀಶ ಎಂ, ಹಾಗೂ ಡಿವೈಎಸ್ಪಿ ಗಜಾನನ ಸುತಾರ, ಸಿಪಿಐ ಹಣಮಂತ ಸನಮನಿ ಭೇಟಿ ನೀಡಿದ್ದಾರೆ. ಬೀಳಗಿ ಪೊಲೀಸರು ತನಿಖೆ ನಡೆಸಿದ್ದಾರೆ.
