Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಮಹಿಳೆಯರು ಬರಲಿ:  ಸುಮಾ ಕಿತ್ತೂರ

ಜಿಲ್ಲಾ ಲೇಖಕಿಯರ ಸಂಘದ ವಾರ್ಷಿಕೋತ್ಸವ: ಪ್ರಶಸ್ತಿ ಪುರಸ್ಕೃತರಿಗೆ ಗೌರವ ಸನ್ಮಾನ


 
ಬೆಳಗಾವಿ: ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಿನ ಮಹಿಳೆಯರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಓದು, ಬರವಣಿಗೆ ಮತ್ತು ಸೃಜನಶೀಲ ಚಟುವಟಿಕೆಗಳ ಮೂಲಕ ಸಮಾಜದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಸುಮಾ ಕಿತ್ತೂರ ಹೇಳಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಲೇಖಕಿಯರ ಸಂಘದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪುರಸ್ಕೃತರ ಗೌರವ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಲೇಖಕಿಯರ ಸಂಘದಲ್ಲಿ 50ಕ್ಕೂ ಹೆಚ್ಚು ಸಾಧಕಿಯರು ಸದಸ್ಯರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಿ ಸನ್ಮಾನಿಸುವುದು ಅವರ ಸಾಧನೆಗೆ ಸಲ್ಲಿಸುವ ಸೂಕ್ತ ಗೌರವವಾಗಿದೆ. ರಾಜ್ಯದಾದ್ಯಂತ ಜಿಲ್ಲೆಯ ಕವಯಿತ್ರಿಯರು ಹಾಗೂ ಲೇಖಕಿಯರು ತಮ್ಮ ಸಾಹಿತ್ಯ ಪ್ರತಿಭೆಯಿಂದ ವಿಶೇಷ ಹೆಸರು ಮಾಡಿದ್ದು, ಎಲ್ಲ ಸಾಹಿತಿಗಳ ಸಹಕಾರದಿಂದ ಸಂಘವು ಕಳೆದ ಎರಡು ವರ್ಷಗಳಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸಿದೆ ಎಂದು ತಿಳಿಸಿದರು.

ಹೊಸ ತಲೆಮಾರಿನ ಲೇಖಕಿಯರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸಂಘವು ನಿರಂತರವಾಗಿ ವಿವಿಧ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿಯೂ ಇಂತಹ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದರು.

 ಸಾಹಿತಿಗಳಾದ ಪ್ರೇಮಾ ತಹಶೀಲ್ದಾರ ಅವರು ಮಾತನಾಡಿ, ಜಿಲ್ಲಾ ಲೇಖಕಿಯರ ಸಂಘದ  25 ವರ್ಷ ಸುಧೀರ್ಘ ಹಾದಿಯನ್ನು  ಮೆಲುಕು ಹಾಕಿದ ಅವರು, ಹಿರಿಯ ಸಾಹಿತಿ ಆಶಾ ಕಡಪಟ್ಟಿಯವರ ಧೈರ್ಯ ಪರಿಶ್ರಮವನ್ನು ಸ್ಮರಿಸಿದರು. ಸಾಹಿತ್ಯ ಮತ್ತು ರಂಗಭೂಮಿ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಮಹತ್ವದೆ. ಸಾಹಿತ್ಯವೆಂಬುದು “ "ಬದುಕಿನ ನಿರ್ವಚನವೇ"ಸಾಹಿತ್ಯ “ಸಾಹಿತ್ಯದಲ್ಲಿ ಪ್ರಸ್ತುತತೆ ವಸ್ತುವಾಗಬೇಕೆಂದೂ, ಓದಿನೊಂದಿಗೆ ಬರಹ ಪ್ರಭುದ್ಧವಾಗಲಿ, ಬದುಕು ಬರಹ ಒಂದೇ ಆಗಿರಬೇಕು. ಮಾನವೀಯತೆಗೆ ಪ್ರೇರಕವಾದ ಸಾಹಿತ್ಯವಿರಲಿ ಎಂದು  ಹೇಳಿದರು.

 ಕಾರ್ಯದರ್ಶಿ ಆಶಾ ಯಮಕನಮರಡಿ  ಪ್ರಾಸ್ತಾವಿಕ ಮಾತನಾಡಿದ ಅವರು,  ಹಿರಿಯರ ಸರಳತೆ, ಸಲಹೆ ,ವೇದಿಕೆಯನ್ನು ಬಳಸಿಕೊಂಡು ಕಲಿಯುತ್ತಾ ಸಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡರು. ಸಂಸ್ಥಾಪಕಿ ಆಶಾ ಕಡಪಟ್ಟಿಯವರನ್ನು ನೆನೆಯುತ್ತಾ ತನು.. ಮನ. ಧನ... ಅರ್ಪಿಸಿ ದುಡಿದಾಗ ಸಂಘಗಳು ಬೆಳೆಯುತ್ತವೆ ಎಂದರು.

ರಂಗ ಕಲಾಶ್ರೀ ಪುರಸ್ಕೃತರು ಹಾಗೂ ಹಿರಿಯ ರಂಗ ಕಲಾವಿದೆ ಕಸ್ತೂರೆವ್ವಾ ಮಣ್ಣಿಕೇರಿ ಇವರು ಮಾತನಾಡಿ, ಸಾಹಿತ್ಯ ಮತ್ತು ರಂಗಭೂಮಿ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಮಹತ್ವದಾಗಿದೆ ಸಾಹಿತ್ಯ, ಸಂಸ್ಕೃತಿ ಹಾಗೂ ರಂಗಭೂಮಿಯ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಸುತ್ತಮುತ್ತಲಿನ ಜಗತ್ತನ್ನು ಸಾಹಿತಿಗಳು ಆಳವಾಗಿ ಗಮನಿಸಬೇಕು. ಹೊಸದನ್ನು ಮತ್ತು ಪ್ರಸ್ತುತ ಪರಿಸ್ಥಿತಿಯನ್ನು ತಿಳಿಸಲು ಇದು ಪೂರಕವಾಗಿರುತ್ತದೆ ಎಂದರು.

ಸಂಘದ ಅಧ್ಯಕ್ಷರಾದಸುಮಾ ಕಿತ್ತೂರ ಅವರ ಅಧ್ಯಕ್ಷತೆಯ ಸಮಾರಂಭದಲ್ಲಿ ‘ರಜತ ಶ್ರೀಗಂಧ’ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು. ಇದೇ ವೇಳೆ  ಸಹಕಾರ್ಯದರ್ಶಿ ಲಲಿತಾ ಕ್ಯಾಸೆನ್ನವರ,  ವಾರ್ಷಿಕ ವರದಿ ವಾಚನ ಮಾಡುತ್ತಾ ವರ್ಷವಿಡಿ ನಡೆದ ವಿವಿಧ ಚಟುವಟಿಕೆ, ದತ್ತಿದಾನ ಕಾರ್ಯಕ್ರಮಗಳು, ಬಹುಮಾನ, ಪ್ರಶಸ್ತಿ ವಿತರಣೆ ಎಲ್ಲವನ್ನೂ ವಿವರವಾಗಿ ಓದಿದರು.

ರಂಗ ಕಲಾಶ್ರೀ ಪುರಸ್ಕೃತರು ಹಾಗೂ ಹಿರಿಯ ರಂಗ ಕಲಾವಿದೆ ಕಸ್ತೂರೆವ್ವಾ ಮಣ್ಣಿಕೇರಿ ಇವರಿಗೆ ಸಾಹಿತಿಗಳಾದ ಹಮೀದಾಬೇಗಂ ಅವರು  ಬಾಬುರಾವ್  ಕಮಾಲ ಸಾಹೇಬ್ ದೇಸಾಯಿ ರಂಗ ಕಲಾವಿದರು ಇವರ  ಸ್ಮರಣಾರ್ಥ ದತ್ತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ದಾನಿಗಳಾದ ಶ್ರೀಮತಿ ಹಮೀದಾ ಬೇಗಂ ದೇಸಾಯಿ ಉಪಸ್ಥಿತರಿದ್ದರು.

ಇದೇ ವೇಳೆ ಪುಸ್ತಕ ಪ್ರಶಸ್ತಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದ ಶಿರೀಶ ಜೋಶಿ ರಂಗಕರ್ಮಿಗಳು ಬೆಳಗಾವಿ ಮತ್ತು ಸ .ರಾ. ಸುಳಕೂಡೆ ಹಿರಿಯ ಸಾಹಿತಿಗಳು ಬೆಳಗಾವಿ ಇವರನ್ನು  ಸನ್ಮಾನಿಸಲಾಯಿತು.   ಕಥಾಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.


ಉಪಾಧ್ಯಕ್ಷರಾದ ವಾಸಂತಿ ಮೇಳೆದ ಸ್ವಾಗತಿಸಿದರು.   ರಾಜೇಶ್ವರಿ ಹೆಗಡೆ ,ಸುಪ್ರಿಯಾ ದೇಶಪಾಂಡೆ ಸಾಧಕರ ಪರಿಚಯಿಸಿದರು. ಜಿಲ್ಲಾ ಲೇಖಕಿಯರ ಸಂಘದ ಸದಸ್ಯರಾದ ಅಜೀವ , ಹಿರಿಯ ಸಾಹಿತಿಗಳಾದ ಬಸವರಾಜ ಜಗಜಂಪಿ , ಶ್ರೀರಂಗ ಜೋಶಿ, ನೀಲಗಂಗಾ ಚರಂತಿಮಠ, ಜ್ಯೋತಿ ಬದಾಮಿ ,ಹೇಮಾ ಸೋನೊಳ್ಳಿ, ಜಯಶೀಲಾ ಬ್ಯಾಕೋಡ, ಶೈಲಜಾ ಭಿಂಗೆ,  ಸುನಿತಾ ನಂದೆನ್ನವರ,   ಸುಪ್ರಿಯಾ ದೇಶಪಾಂಡೆ ,ಲಲಿತಾ ಪರ್ವತರಾವ್, ಅನಿತಾ ಮಾಲಗತ್ತಿ , ಶ್ವೇತಾ ನರಗುಂದ ಬೆಳಗಾವಿಯ ಎಲ್ಲಾ ಸಾಹಿತಿಗಳು ಇತರರು ಇದ್ದರು . ಡಾ .ಹಿರೇಮಠ ನಿರೂಪಿಸಿದರು. ಸುನಂದಾ ಹಾಲಭಾವಿಯವರು ವಂದಿಸಿದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
-ಬರವಣಿಗೆ ಸುಲಭ ಕೃತಿ ರೂಪದಲ್ಲಿ ಹೊರತರುವದು ಕಠಿಣ -ಸಾಹಿತಿ ಪಾರ್ವತಿ ತುಪ್ಪದ ಅಭಿಮತ ಸೊಳ್ಳೆ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರಕ್ಕೆ ಕರೆ: ನಂದಿನಿಶಿವಶರಣ ಹಡಪದ ಅಪ್ಪಣ್ಣ ಜಯಂತಿ; ಅರ್ಥಪೂರ್ಣ ಆಚರಣೆ ಸಿದ್ಧತೆಗೆ ತಹಶೀಲ್ದಾರ ವಿಶ್ವಜೀತ್ ಮೆಹೆತಾ ಸೂಚನೆಎಸ್‌ಎಸ್‌ಎಲ್‌ಸಿ ಸಾಧಕರಿಗೆ ಪ್ರತಿಭಾ ಪುರಸ್ಕಾರ; ಶೇ.100 ಫಲಿತಾಂಶ ಸಾಧಿಸಿದ ಶಿಕ್ಷಕರಿಗೆ ಸನ್ಮಾನನೀಟ್-2026: ಕಲ್ಯಾಣ ಕರ್ನಾಟಕದಲ್ಲಿ ಪ್ರಥಮ ಸ್ಥಾನ ಪಡೆದ ಬಳ್ಳಾರಿಯ ಸಾಯಿ ಶ್ರಾವ್ಯಸಿ ಎಂ  ಪ್ರವಾಸದಲ್ಲಿ ವೈದ್ಯಕೀಯ ಭದ್ರತಾ ಲೋಪ ಆರೋಪ: ಡಿಎಚ್‌ಒಗೆ ನೋಟಿಸಜನ್ಮದಿನದ ಪ್ರಯುಕ್ತ ಹೆಲ್ಮೆಟ್ ನೀಡುತ್ತಿರುವದು ಜನೋಪಯೋಗಿ ಕಾರ್ಯ  : ಶಾಸಕ ಪಾಟೀಲ ದಲಿತ ಸಮೀತಿಗೆ ಮಹಮ್ಮದ ನೇಮಕಎಚ್. ಎಚ್. ಗುನ್ನಾಪುರ ಉಪತಹಶೀಲ್ದಾರಾಗಿ ನೇಮಕಬಳ್ಳಾರಿಯಲ್ಲಿ ಎಐಎಂಐಎಂ ಸಂಘಟನೆ ಬಲಪಡಿಸಲು ಸದಸ್ಯತ್ವ ಅಭಿಯಾನ: ಲತೀಫ್‌ಖಾನ್ ಫಠಾನ್