ಬೆಳಗಾವಿ;
ಗೃಹಸ್ಥ ಜೀವನದ ಮಹತ್ವ, ಶರಣರ ವಚನಗಳಲ್ಲಿ ಸತಿ ಪತಿ ಧರ್ಮ ಮತ್ತು ಅವರಲ್ಲಿರಬೇಕಾದ ಸಮಾನತೆ ಕುರಿತಾಗಿ ವಚನಗಳನ್ನು ಉದಾಹರಿಸುವದರ ಮೂಲಕ ಕರಡಿಗುದ್ದಿಯ ಪ್ರೌಢಶಾಲಾ ಶಿಕ್ಷಕರಾಗಿರುವ ಶ್ರೀಮತಿ ಗಂಗಾ ಚಕ್ರಸಾಲಿಯವರು ತಿಳಿಸಿದರು.
ಮಹಾಂತೇಶ ನಗರದ ಡಾ. ಫ.ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಆಯೋಜಿಸಿದ ದಾಂಪತ್ಯ ಜೀವನ ಕುರಿತು ಉಪನ್ಯಾಸದಲ್ಲಿ ಮಾತನಾಡಿದ ಅವರು ದಾಂಪತ್ಯದಲ್ಲಿ ಸತಿ ಪತಿಗಳಿಬ್ಬರ ನಡುವೆ ಇರಬೇಕಾದ ನಂಬಿಕೆ, ಸಹಬಾಳ್ವೆ, ಹೊಂದಾಣಿಕೆ, ತಾಳ್ಮೆ, ಸ್ವೀಕಾರ ಮನೋಭಾವ ಇತ್ಯಾದಿ ವಿಷಯಗಳ ಕುರಿತಾಗಿ ಮಾತನಾಡಿದರು.
ಆರoಭದಲ್ಲಿ ಮಹಾದೇವಿ ಅರಳಿ ವಚನ ಪ್ರಾಥ೯ನೆ ನಡೆಸಿಕೊಟ್ಟರು. ಶಿವಕುಮಾರ ಪಾಟೀಲ ಹಾಗೂ ಮಹದೇವ ಕೆoಪಿಗೌಡರ ವಚನಗಳನ್ನು ಪ್ರಸ್ತುತಪಡಿಸಿದರು. ಎಂ. ವೈ. ಮೆಣಸಿನಕಾಯಿ ಅತಿಥಿಗಳನ್ನು ಪರಿಚಯಸಿದರು. ನೂತನ ದoಪತಿಗಳಾದ ಶಿವಕುಮಾರ ಹಾಗೂ ಮೀನಾಕ್ಷಿ ಅರಳಿಯವರನ್ನು ಇದೇ ಸoದಭ೯ದಲ್ಲಿ ಸತ್ಕರಿಸಲಾಯಿತು. ಅಧ್ಯಕ್ಷತೆಯನ್ನು ಈರಣ್ಣ ದೇಯಣ್ಣವರು ವಹಿಸಿದರು. ಮುಖ್ಯ ಅತಿಥಿಯಾಗಿ ಜ್ಯೋತಿ ಬಾದಾಮಿ, ದಾಸೋಹ ಸೇವೆಯನ್ನು ವಿಜಯ ಹುದಲಿಮಠ ಸಲ್ಲಿಸಿದರು. ಸುರೇಶ ನರಗುoದ ಸ್ವಾಗತಿಸಿದರು. ಸoಗಮೇಶ ಅರಳಿ ನಿರೂಪಿಸಿದರು.
ಕಾಯ೯ಕ್ರಮದಲ್ಲಿ ಸುಜಾತಾ ಮತ್ತಿಕಟ್ಟಿ, ನೇತ್ರಾ ರಾಮಾಪೂರಿ, ಅಕ್ಕಮಹಾದೇವಿ ತೆಗ್ಗಿ, ಲಕ್ಸ್ಮಿ ಜೇವಣಿ, ಶಿವಾನoದ ನಾಯಕ, ಸಿದ್ದಪ್ಪ ಸಾರಾಪೂರಿ, ಬಸವರಾಜ ಬಿಜ್ಜರಗಿ, ಶಶಿಭೂಷಣ ಪಾಟೀಲ, ಆನoದ ಕರಕಿ, ಲಕ್ಷ್ಮೀಕಾಂತ ಗುರವ, ವಿ. ಕೆ. ಪಾಟೀಲ, ಶೇಖರ ವಾಲಿ ಇಟಗಿ, ವಿರೂಪಾಕ್ಸಿ ದೂಡ್ಡಮನಿ, ಶಂಕರಪ್ಪ ಮೆಣಸಗಿ, ಮ.ಬಿ. ಖಾಡೆ, ಗುರಸಿದ್ದಪ್ಪ ರೇವಣ್ಣವರ, ಸುದೀರ ರಘಶೆಟ್ಟಿ, ಮ.ಬ. ಕರಿಕಟ್ಟಿ ಇತರರು ಇದ್ದರು.