ತಾಳಿಕೋಟೆ, ಶ್ರೀ ವಿರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆ (ರಿ) ತಾಳಿಕೋಟಿಯಲ್ಲಿ ಉಚಿತ ನೃತ್ಯ ತರಬೇತಿ ಅಲ್ಲಿ ಪ್ರವೇಶ ಪಡೆದುಕೊಂಡು ಶ್ರೀ ವಿನೋದಕುಮಾರ ಚಿಕ್ಕಮಠ ಇವರ ಹತ್ತಿರ ಭರತನಾಟ್ಯ ಹಾಗೂ ಜಾನಪದ ನೃತ್ಯ ತರಬೇತಿ ಪಡೆಯುತ್ತಿದ್ದ ಕುಮಾರಿ ಅಂಬಿಕಾ ಬಡಿಗೇರ್ ನೃತ್ಯ ಸತತ ಪ್ರಯತ್ನದಿಂದ ನೃತ್ಯ ತರಗತಿ ಜೊತೆಗೆ ನೃತ್ಯ ಪ್ರದರ್ಶನ ನೀಡಿ ಜನರ ಗಮನ ಸೆಳೆದಿರುವುದು ವಿಶೇಷ.
ಅಂಬಿಕಾ ಬಡಿಗೇರ್ ಬಡತನದ ಕುಟುಂಬದಲ್ಲಿ ಜನಿಸಿದ ವಿದ್ಯಾರ್ಥಿನಿ ನೃತ್ಯ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ವಿದ್ಯಾರ್ಥಿನಿ ಈಗ ಪ್ರತಮ ಪಿಯುಸಿ ಶ್ರೀ ಎಚ್ ಎಸ್ ಪಾಟೀಲ್ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ತಾಳಿಕೋಟಿ ಓದುತ್ತಿರುವ ವಿದ್ಯಾರ್ಥಿನಿಯಾಗಿದ್ದಾಳೆ.
ಈ ನಾಟ್ಯ ಪ್ರತಿಭೆಗೆ ಇಂದು ಕಲಬುರ್ಗಿ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ಶ್ರೀ ಮಹೇಂದ್ರ ಶಿವಾಚಾರ್ಯ ಕಲ್ಯಾಣ ಮಂಟಪದಲ್ಲಿ ಜರುಗುವ ವಿಶ್ವ ದರ್ಶನ ಕನ್ನಡ ದಿನಪತ್ರಿಕೆಯ ೬ ವಾರ್ಷಿಕೋತ್ಸವ ಹಾಗೂ ಸರ್ವಧರ್ಮದ ಭಾವ್ಯಕ್ಯತೆಯ ೭ನೇ ರಾಜ್ಯ ಸಮ್ಮೇಳನ ಭರತನಾಟ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಈ ವಿದ್ಯಾರ್ಥಿನಿಗೆ "ಕರುನಾಡ ನಾಟ್ಯ ಕಣ್ಮಣಿ ರಾಜ್ಯ ಪ್ರಸ್ತಿ ನಿಡಿ ಗೌರವಿಸುತ್ತಿರುವದಾಗಿ ಡಾ. ಎಸ್.ಎಸ್. ಪಾಟಿಲ್ ತಿಳಿಸಿದ್ದಾರೆ.
"ಕರುನಾಡ ನಾಟ್ಯ ಕಣ್ಮಣಿ ರಾಜ್ಯ ಪ್ರಶಸ್ತಿ ಆಯ್ಕೆ ಆಗಿದ್ದಕ್ಕೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿನೋದಕುಮಾರ ಚಿಕ್ಕಮಠ ಎಲ್ಲ ಪದಾಧಿಕಾರಿಗಳು ಹಾಗೂ ತಾಳಿಕೋಟಿಯ ಗನ್ಯ ಮಾನ್ಯರು ಅಭಿನಂದಿಸಿದ್ದಾರೆ.