ತಾಳಿಕೋಟೆ, ಧಾರವಾಡದ ನಾಟ್ಯ ಸ್ಪೂರ್ತಿ ಆರ್ಟ್ ಮತ್ತು ಕಲ್ಚರಲ್ ಅಕಾಡೆಮಿ (ರಿ.) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಧಾರವಾಡದಲ್ಲಿ ಆಯೋಜಿಸಿದ್ದ ೨೦೨೬ನೇ ಸಾಲಿನ ಬಸವಶ್ರೀ ಹಾಗೂ ಕರುನಾಡ ಸಾಧನಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಾಳಿಕೋಟೆಯ ಶ್ರೀ ಸಂಗಮೇಶ್ವರ ಪ್ರೌಢಶಾಲೆಯ ಹಿಂದಿ ವಿಷಯದ ಹಿರಿಯ ಶಿಕ್ಷಕ ಬಿ.ಐ. ಹಿರೆಹೊಳಿ ಅವರಿಗೆ ಕರುನಾಡ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ರೇವಣಸಿದ್ದೇಶ್ವರ ಮಠದ ಶ್ರೀ ಡಾ. ಬಸವರಾಜ ದೇವರು, ಮನಸೂರು ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಆಶೀರ್ವದಿಸಿದರು.
ಈ ಸಮಯದಲ್ಲಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಸಿ. ಬೆಲ್ಲದ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ನೃತ್ಯ ನಿರ್ದೇಶಕ ಸದಾನಂದ ಸ. ಬಂಗೆಣ್ಣವರ, ಕಾರ್ಯದರ್ಶಿ ಮಂಜುನಾಥ ಕಾದ್ರೋಳ್ಳಿ, ಸಾಹಿತಿ ಡಾ. ಎಚ್.ಬಿ. ನಡುವಿನಕೇರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಪ್ರಶಸ್ತಿ ಪುರಸ್ಕೃತರಾದ ಬಿ.ಐ. ಹಿರೆಹೊಳಿ ಅವರಿಗೆ ಎಸ್.ಎಸ್. ವಿದ್ಯಾಸಂಸ್ಥೆಯ ಅಧ್ಯಕ್ಷ ಎಚ್.ಎಸ್. ಪಾಟೀಲ, ಆಡಳಿತಾಧಿಕಾರಿ ಕಿರಣ್ ಎಚ್. ಪಾಟೀಲ, ಕಾರ್ಯದರ್ಶಿ ಸಚಿನ್ ಎಚ್. ಪಾಟೀಲ, ಪ್ರೌಢಶಾಲೆಯ ಮುಖ್ಯಸ್ಥ ಅಶೋಕ ಕಟ್ಟಿ, ಪ್ರಾಥಮಿಕ ಶಾಲೆಯ ಮುಖ್ಯಸ್ಥ ಜೆ.ಎಂ. ಕೊಣ್ಣೂರ ಹಾಗೂ ಸಂಸ್ಥೆಯ ಸಮಸ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಗಣ್ಯರು ಹಾಗೂ ಹಿರಿಯರು ಅಭಿನಂದನೆ ಸಲ್ಲಿಸಿದ್ದಾರೆ.