Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ಈಶ್ವರ ಮಾರುತಿ ಗುಡಜ ಅವರಿಗೆ ಪ್ರತಿಷ್ಠಿತ ’ಸಮಾಜ ಸೇವಾ ರತ್ನ’ ಪ್ರಶಸ್ತಿ

 

 

ಘಟಪ್ರಭಾ : ಸಾಮಾಜಿಕ ಸೇವೆ, ಜನಪರ ಹೋರಾಟ ಹಾಗೂ ಸಮಾಜದ ಶೋಷಿತ, ಹಿಂದುಳಿದ ಮತ್ತು ಅಸಹಾಯಕರ ಪರವಾಗಿ ನಿರಂತರವಾಗಿ ಧ್ವನಿ ಎತ್ತುತ್ತಿರುವ ಸಮಾಜ ಸೇವಕ ಈಶ್ವರ ಮಾರುತಿ ಗುಡಜ್ ಅವರ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಪ್ರತಿಷ್ಠಿತ ’ಸಮಾಜ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಆಫ್ ಕರ್ನಾಟಕ (ರಿ.) (ಆ-ಒಂಏ) ವತಿಯಿಂದ ನವೆಂಬರ್ ೫, ೨೦೨೬ ರಂದು ಬೆಳಗಾವಿಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಸಂಘಟನೆಯ ಅಧ್ಯಕ್ಷರಾದ ಡಾ. ಸುನೀಲ್ ಕುಂಬಾರ ಅವರು ಈಶ್ವರ ಮಾರುತಿ ಗುಡಜ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.

ಈ ಕಾರ್ಯಕ್ರಮದಲ್ಲಿ ಡಾ.  ಹರಿದ್ವಾರ ಅಘೋರಿ ಅಮ್ಮಾಜಿ, ಜೀ ಕನ್ನಡ ವಾಹಿನಿಯ ಕಾಮಿಡಿ ಸ್ಟಾರ್ ಲಯಾ ಕೋಕಿಲ, ಬಿಗ್ ಬಾಸ್ ಕನ್ನಡ ಸೀಸನ್ ೪ರ ವಿಜೇತ ಹಾಗೂ ಕನ್ನಡ ಚಿತ್ರನಟ ಪ್ರಥಮ್, ಭ್ರಷ್ಟಾಚಾರ ನಿಗ್ರಹ ದಳದ ರಾಷ್ಟ್ರೀಯ ಅಧ್ಯಕ್ಷರಾದ ಪ್ರವೀಣ ಹಿರೇಮಠ ಸೇರಿದಂತೆ ಹಲವು ಗಣ್ಯರು, ಪ್ರಮುಖರು ಹಾಗೂ ಮಾಧ್ಯಮ ಕ್ಷೇತ್ರದ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಸಮಾಜದಲ್ಲಿ ಅನ್ಯಾಯ, ಶೋಷಣೆ ಹಾಗೂ ಅಸಮಾನತೆಗಳ ವಿರುದ್ಧ ಧ್ವನಿ ಎತ್ತುತ್ತಾ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿರುವ ಗುಡಜ್ ಅವರ ಸೇವಾ ಮನೋಭಾವನೆಗೆ ಈ ಪ್ರಶಸ್ತಿ ಮತ್ತೊಂದು ಗೌರವದ ಗರಿಯಾಗಿದೆ.

ಪ್ರಶಸ್ತಿ ಎಂಬುದು ಕೇವಲ ಗೌರವದ ಸಂಕೇತವಲ್ಲ, ಅದು ಸಮಾಜದ ಬಗ್ಗೆ ಇರುವ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುವ ಪ್ರೇರಣೆಯಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಬೇಕು ಎಂಬ ಆಶಯದೊಂದಿಗೆ ಅವರ ಸಮಾಜಮುಖಿ ಕಾರ್ಯಗಳು ಮುಂದುವರಿಯಲಿ ಎಂಬುದು ಗಣ್ಯರ ಆಶಯವಾಗಿದೆ.

ಒಟ್ಟಾರೆ, ಸಮಾಜಮುಖಿ ಚಿಂತನೆ, ಜನಪರ ಕಾಳಜಿ ಹಾಗೂ ನಿರಂತರ ಹೋರಾಟದ ಹಾದಿಯಲ್ಲಿ ಸಾಗುತ್ತಿರುವ ಈಶ್ವರ ಮಾರುತಿ ಗುಡಜ್ ಅವರಿಗೆ ಸಂದಿರುವ ’ಸಮಾಜ ಸೇವಾ ರತ್ನ’ ಪ್ರಶಸ್ತಿ ಅವರ ಸಾಮಾಜಿಕ ಸೇವೆಗೆ ಸಂದ ಮಹತ್ವದ ಗೌರವವಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಾವಸಾರ ಬ್ಯಾಂಕಿನ ನೂತನ ಅಧ್ಯಕ್ಷ ಅರವಿಂದ ಹಂಚಾಟೆ ಅವರಿಗೆ ಸನ್ಮಾನಇಂದು ಮಿಣಜಗಿ ಶ್ರೀ ಗುರುಪಾದೇಶ್ವರ ರಥೋತ್ಸವನಗರದಲ್ಲಿ ಹಣತೆ ಖರೀದಿಗೆ ಮುಗಿಬಿದ್ದ ಮಹಿಳೆಯರುಕೊಲ್ಲಾಪುರದ ಮಹಾಲಕ್ಷ್ಮೀ ಹಾಗೂ ಜ್ಯೋತಿಬಾ ದೇವರ ದರ್ಶನ ಪಡೆದ ಲಕ್ಷ್ಮೀ ಹೆಬ್ಬಾಳಕರ್ಸರ್ಕಾರ ಸತತವಾಗಿ ರೈತರಿಗೆ  ಅನ್ಯಾಯ ಮಾಡಿದೆ,ರೈತರ ಹೋರಾಟದ ಫಲ 3600/- ರೂ ಮೊದಲ ಕಂತು ನಿಗದಿ.ಮಹಿಳಾ ಸ್ಪಂದನ ಕಾರ್ಯಕ್ರಮ ಆಯೋಜನೆ ಕಡ್ಡಾಯ ಮಹಿಳೆಯರಿಗೆ ಸರ್ಕಾರಿ ಯೋಜನೆಗಳ ಅರಿವು ಮೂಡಿಸಿ : ನಾಗಲಕ್ಷ್ಮಿ ಚೌಧರಿಜೆಡಿಎಸ್‌ನ ಬೆಳಗಾವಿ ಮಹಾನಗರ ಜಿಲ್ಲಾಧ್ಯಕ್ಷರಾಗಿ ವಿಠ್ಠಲ ಗಡ್ಡಿ ನೇಮಕಮಹಿಳಾ ಸಮಸ್ಯೆಗಳ ನಿರ್ಲಕ್ಷ್ಯ ಸಹಿಸುವುದಿಲ್ಲ: ನಾಗಲಕ್ಷ್ಮೀ ಚೌಧರಿಪಿ ಕೆ ಪಿ ಎಸ್ ವಕ್ಕುಂದ ಅಧ್ಯಕ್ಷರಾಗಿ ಗಜದಂಡ ಮಲ್ಲೇಶಪ್ಪ ಸುತಗಟ್ಟಿ ಮೂರನೇ ಬಾರಿಗೆ ಅವಿರೋಧ ಆಯ್ಕೆ – ಉಪಾಧ್ಯಕ್ಷರಾಗಿ ಬಸನಗೌಡ ಹುಲೆಪ್ಪನವರ ಪ್ರಥಮ ಬಾರಿಗೆ ಅವಿರೋಧ ಆಯ್ಕೆಯುವಕರು ಹೆಚ್ಚಿನ ಸಂಖ್ಯೆಯಲ್ಲಿ ದೇಶಸೇವೆಗೆ ಆಕರ್ಷಿತರಾಗಲು ನಿರ್ಧಾರ ಸಹಕಾರಿ: ಜಗದೀಶ ಪೂಜೇರಿ