ತಾಳಿಕೋಟೆ,ಜು,೨೪ : ವಿಜಯಪುರ ಜಿಲ್ಲೆಯ ಕನ್ನೂರಿನ ಶಾಂತಿಕುಟಿರದಲ್ಲಿ ಸಪ್ಟೆಂಬರ್ ೮ ರಿಂದ ೧೪ ರವರೆಗೆ ಜರುಗಲಿರುವ ಜ್ಞಾನಯಜ್ಞ ಕಾರ್ಯಕ್ರಮಕ್ಕೆ ಶ್ರೀ ಖಾಸ್ಗತೇಶ್ವರ ಮಠದ ಪೀಠಾದಿಪತಿ ಬಾಲಶಿವಯೋಗಿ ಶ್ರೀ ಸಿದ್ದಲಿಂಗದೇವರಿಗೆ ಆಹ್ವಾನಿಸಲಾಗಿದೆ.
ಕಾರ್ಯಕ್ರಮ ಕುರಿತು ಆಹ್ವಾನ ನೀಡಲು ಆಗಮಿಸಿದ ಶಾಂತಿಕುಟಿರದ ಮುಖ್ಯ ಸೇವಕರಾದ ಶ್ರೀಕೃಷ್ಣ ಅವರು ಆಹ್ವಾನ ಪತ್ರಿಕೆ ನೀಡಿ ಸಪ್ಟೆಂಬರ್ ೧೩ ರಂದು ಆಗಮಿಸಲು ಶ್ರೀಗಳು ತಿಳಿಸಿದಾಗ ಶ್ರೀಗಳು ಅಂದು ಮುಂಜಾನೆಯ ಕಾರ್ಯಕ್ರಮಕ್ಕೆ ಆಗಮಿಸಲು ಒಪ್ಪಿಕೊಂಡರಲ್ಲದೇ ಮುಖ್ಯ ಸೇವಕರಾದ ಕೃಷ್ಣ ಅವರಿಗೆ ಶ್ರೀ ಸಿದ್ದಲಿಂಗದೇವರು ಸನ್ಮಾನಿಸಿ ಗೌರವಿಸಿದರು.
ಈ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವರಿ ಮುರುಘೇಶ ವಿರಕ್ತಮಠ, ಹಿರಿಯ ಪತ್ರಕರ್ತರಾದ ಜಿ.ಟಿ. ಘೋರ್ಪಡೆ, ಗುರುದತ್ತ ಮಂಗಲ ಕಾರ್ಯಾಲಯದ ಮಾಲಿಕರಾದ ಸಂಜೀವ ತಿಕೋಟ, ಮಲ್ಲಪ್ಪ ಸಾವಕಾರ, ಮೋತಿಲಾಲ್ ಕನ್ನೂರ, ಕೃಷ್ಣಾ ಮೊದಲಾದವರು ಉಪಸ್ತಿತರಿದ್ದರು.
