Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿಮಾ ನೌಕರರ ಸಂಘದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ





ಬಳ್ಳಾರಿ. ಮಾ. 08:  ಶಾಲಾ ಮಕ್ಕಳು ಮತ್ತು ಎಲ್ಲಾ ಶಾಲಾ ಮಹಿಳಾ ಶಿಕ್ಷಕರ ಸಿಬ್ಬಂದಿಗೆ ಮಹಿಳಾ ದಿನಾಚರಣೆಯ ಉದ್ದೇಶ ಮತ್ತು ನಮ್ಮ  ಸಂಘಟನೆ ಅಖಿಲ ಭಾರತ ವಿಮಾ ನೌಕರರ ಸಂಘ (AIIEA) ಸಮಾಜ ಮುಖಿ ಯಾಗಿ ಕೆಲಸ ನಿರ್ವಹಿಸುವ ಗುರಿ ಹೊಂದಿದೆ ಎಂದು ಕಾರ್ಯದರ್ಶಿಗಳಾದ ಕಾಂ.ಡಿ.ವಿ. ಸೂರ್ಯನಾರಾಯಣ ಅವರು ತಿಳಿಸಿದರು.

ಅವರು ನಗರದ  ಬಿಸ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ವಿಮಾ ನೌಕರರ ಸಂಘ ಎಲ್. ಐ.ಸಿ. ಶಾಖೆ 2, ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಬಿಸಿಲಹಳಿಯ ಸರ್ಕಾರಿ  ಶಾಲಾ ಮಕ್ಕಳ ಅನುಕೂಲಕ್ಕಾಗಿ 32" ಇಂಚಿನ ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿಯನ್ನು ಕೊಡುಗೆ ನೀಡುವುದರ  ಮೂಲಕ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿ, ಡಿಜಿಟಲೀಕರಣದ ಯುಗದಲ್ಲಿ ಶಾಲಾ ಮಕ್ಕಳ ದಕ್ಷತೆಯನ್ನು ಹೆಚ್ಚಿಸಲು ಇದು ಅಗತ್ಯವಾಗಿತ್ತು. ಎಲ್ಲಾ ವರ್ಗದ ಉದ್ಯೋಗಿಗಳು ಮತ್ತು ಮಹಿಳಾ ಉದ್ಯೋಗಿಗಳು AIIEA ಯ ನಿಜವಾದ ಸಂಪ್ರದಾಯಕ್ಕೆ ಆಚರಣೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.


 ಕಾರ್ಯಕ್ರಮದಲ್ಲಿ ಶಾಲೆಯ  ಮುಖ್ಯೋಪಾಧ್ಯಾಯರಾದ  ಸಿರಾಜ್ ಪಾಷಾ ನಮ್ಮೆಲ್ಲರನ್ನೂ ಸ್ವಾಗತಿಸಿ, ಸಂಘಟನೆಯ ಸಾಮಾಜಿಕ ಕಳಕಳಿಯನ್ನು ಶ್ಲಾಘಸಿ  ಮುಂದಿನ ದಿನಗಳಲ್ಲಿ ಹೆಚ್ಚಿನ ಸಹಾಯ ಹಸ್ತವನ್ನು ಇನ್ನೂ ಹಲವು ಸರ್ಕಾರಿ ಶಾಲೆಗಳಿಗೆ ಒದಗಿಸಿ ತಮ್ಮ ಸಮಾಜ ಸೇವೆಯನ್ನು ಮುಂದುವರಿಸಲಿ ಎಂದರು.


ಸಹಾಯಕ ವ್ಯವಸ್ಥಾಪಕರಾದ ಕೆ.ಗೋಪಾಲ್ ಮಾತನಾಡಿ,  ಶಾಲಾ ಮಕ್ಕಳು  ಅತ್ಯುತ್ತಮ ವ್ಯಕ್ತಿಗಳಾಗಿ, ಸರ್ಕಾರಿ ಹುಡುಗಿಯಲ್ಲಿ ಉನ್ನತ ಸ್ಥಾನ ಪಡೆಯ ಬೇಕೆಂದು ತಿಳಿಸಿದರು . ಹಿರಿಯ ಸಹೋದ್ಯೋಗಿ ಕಾಂ.ಕುಸುಮಾ ಮಾತನಾಡಿ  ಮಕ್ಕಳಿಗೆ ಸಮಾಜದಲ್ಲಿ ಪೋಷಕರು ಮತ್ತು ಹಿರಿಯರನ್ನು ಹೇಗೆ ಗೌರವಿಸಬೇಕು ಎಂದು ತಿಳಿಸಿದರು.

ಈ ಸಂದರ್ಭ ದಲ್ಲಿ ಶಾಲಾ ವತಿಯಿಂದ ಎಲ್.ಐ.ಸಿ. ಯ ಎಲ್ಲಾ ಮಹಿಳಾ ಸಿಬ್ಬಂದಿಯನ್ನು  ಗೌರವಿಸಲಾಯಿತು. ಕೊನೆಯಲ್ಲಿ ಕಾಂ.ಡಿ.ವಿ. ಸೂರ್ಯನಾರಾಯಣ  ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಶಾಲೆಯ ಎಲ್ಲಾ ಸಂಘಟಕರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಈ ರೀತಿಯಾಗಿ ಪ್ರತೀ ವರ್ಷದಂತೆ ವಿಮಾ ನೌಕರರ ಸಂಘ

ಎಲ್. ಐ.ಸಿ. ಶಾಖೆ 2 ಬಳ್ಳಾರಿಯು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಅರ್ಥಪೂರ್ಣ ವಾಗಿ ಆಚರಿಸಲಿ ಎಂದರು.

 ಈ ಕಾರ್ಯಕ್ರಮದಲ್ಲಿ  ಕಾಂ.ಆರ್.ದತ್ತಾತ್ರೇಯ ಅಧ್ಯಕ್ಷರು, ಕಾಂ.ವಿಘ್ನೇಶ್, ಖಜಾಂಚಿ ಸೈಯದ್ ಹುಸೇನ್  ನೀಲಮ್ಮ  ಆಡಳಿತಾಧಿಕಾರಿ ಸಭೆಯ ಆಚರಣೆಯಲ್ಲಿ ಸಕ್ರಿಯವಾಗಿ ಪಾಲೊಂಡಿದ್ದರು. ಕೊನೆಯಲ್ಲಿ ಎಲ್ಲಾ ಮಕ್ಕಳಿಗೆ ಚಾಕ್ಲೇಟ್ಗಳನ್ನು ವಿತರಿಸಲಾಯಿತು.







Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ