Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bijapur

ಇಂಡಿ: ಕಬ್ಬಿಗೆ ₹5,500 ಬೆಂಬಲ ಬೆಲೆಗೆ ಆಗ್ರಹಿಸಿ ಭಾರಿ ರಸ್ತೆ ತಡೆ ಪ್ರತಿಭಟನೆ

 ಇಂಡಿ:  ನಗರದ ಬಸವೇಶ್ವರ ವೃತ್ತದಲ್ಲಿ ಕಬ್ಬಿಗೆ ಪ್ರತಿ ಟನ್ ೫೫೦೦/- ಟನ್ ಬೆಂಬಲ ಬೆಲೆ ನೀಗಧಿ ಪಡಿಸಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ರೈತ ಪರ ವಿವಿಧ ಸಂಘಟನೆಗಳು ನೀಡಿದ ಕರ್ನಾಟಕ ಬಂದ ಕರೆಗೆ ಬೇಂಬಲಿಸಿ ಸುಮಾರು ಎರಡು ಮೂರು ಗಂಟೆಗಳ ಕಾಲ ರಸ್ತೆ ತಡೆದು ಟಯರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ನೀರತ ಸ್ಥಳಕ್ಕೆ ಗ್ರೆಡ್-೨ ತಹಸಿಲ್ದಾರ ಆನಂದ ಪಮ್ಮಾರ ಇವರು ರೈತರಿಂದ ಮನವಿ ಸ್ವಿಕರಿಸಿದ ನಂತರ ಪ್ರತಿಭಟನೆಯನ್ನು ಹಿಂಪಡೆದರು. ಇದರಿಂದಾಗಿ ಬಂದ ಮಾಡಿದ ರಸ್ತೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಪ್ರತಿಭಟನೆಯಲ್ಲಿ ಹಲವಾರು ಜನ ರೈತ ಮುಖಂಡರು ಹಾಗೂ ವಿವಿಧ ಸಂಘಟನೆಯ ಮುಖಂಡರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ರೈತ ಈ ದೇಶದ ಬೆನ್ನೆಲುಬಾಗಿದ್ದು ಶ್ರಮಪಟ್ಟು ಬೆಳೆದ ಬೆಳೆ ಬೆಂಬಲ ಬೆಲೆ ನೀಡುತ್ತಿಲ್ಲ. ಈಕೂಡಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ೫೫೦೦ ಬೆಂಬಲ ಬೆಲೆ ನೀಗದಿ ಮಾಡಬೇಕು ಎಂದು ಒಕ್ಕೂರಲನಿಂದ ಆಗ್ರಹಿಸಿದರು.
ಇಂಡಿ ನಗರ ಪ್ರತಭಟನೆಯಲ್ಲಿ ಪ್ರತಿಭಟನೆಯಲ್ಲಿ ಅನೀಲಗೌಡ ಬಿರಾದಾರ, ಬಾಳು ಮುಳಜಿ, ಅದೃಷಪ್ಪ ವಾಲಿ, ಸಚಿನ ನಾವಿ,  ಬಸವರಾಜ ಹಂಜಗಿ ಸೇರಿದಂತೆ ನೂರಾರು ರೈತರು ಭಾಗವಹಸಿದ್ದರು.
 ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೂಡಾ ಈ ಬೆಂಬಲ ಬೆಲೆಗೆ ಆಗ್ರಹಿಸಿ ನಿವೃತ್ತ ಶಿಕ್ಷಕ ಬಿ. ಐ. ಬಿರಾದಾರ, ನಿವೃತ್ತ ಉಪನ್ಯಾಸಕ ಎ. ಪಿ. ಕಾಗವಾಡ ಮಾತನಾಡಿ ಜಿಲ್ಲೆಯಲ್ಲಿ ಸಧ್ಯ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿಯಲ್ಲಿ ಬೆಳೆದ ಕಬ್ಬಿಗೆ ನ್ಯಾಯಯುತ ಬೆಲೆ ನಿಗಾಧಿಪಡಿಸಬೇಕು ಎಂದು  ಅಗ್ರಹಿಸಿದರು.
ನಿವೃತ್ತ ಶಿಕ್ಷಕ ಮಾದೇವ ಮುಜಗೊಂಡ ಮಾತನಾಡಿ ಕಬ್ಬಿನ ಬೆಲೆ ನಿಗಧಿಗಾಗಿ ರೈತ ಸಂಘದಿಂದ ನೀಡಿದ ಕರ್ನಾಟಕ ಬಂದ್ ಕರೆಗೆ ನಾವು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತೇವೆ. ತಕ್ಷಣ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಪಂದಿಸಿ ಕಬ್ಬು ಬೆಲೆಗಾರರ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಒತ್ತಾಯಿಸಿದರು. 
ಈ ಪ್ರತಿಭಟನೆಯಲ್ಲಿ ಗ್ರಾಮದ ರೈತರಾದ ಗೌರಿಶಂಕರ ಬಾಬುಳಗಿ, ಬಸವರಾಜ ಬಿರಾದಾರ, ಗಿರಿಮಲ್ಲ ಮುಜಗೊಂಡ,   ನಿವೃತ್ತ ಶಿಕ್ಷಕ ವಿಠ್ಠಲ್ ಕರಾಳೆ, ನಿವೃತ್ತ ಸೈನಿಕ ಕಾಶಿನಾಥ ಮುಜಗೊಂಡ,  ಪುಲಾಸಿಂಗ ಚವ್ಹಾಣ, ಸಿದ್ದು ವಾಲಿ, ಯುವ ರೈತರಾದ ಬಸವರಾಜ ಲಾಳಸೇರಿ, ಈರಣ್ಣ ಮುಜಗೊಂಡ, ದತ್ತು ಮುಜಗೊಂಡ, ಗುರು ವಾಲಿ, ಪ್ರವೀಣ ಕಾಗವಾಡ, ಚಂದ್ರಕಾಂತ ಬಾಬುಳಗಿ ಸೇರಿದಂತೆ ಗ್ರಾಮದ ಹಲವು ರೈತರು ಭಾಗವಹಿಸಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕನ್ನಡ ಸಾಧಕರಿಗೆ ಗೌರವ ನೀಡುವುದು ನಾಡಿನ ಸೇವೆ ಮುಂದುವರಿಸಲು ಪ್ರೇರಣೆಅಂಗಡಿ-ಮುಂಗಟ್ಟು ಬಂದ್ ಮಾಡಿ ವ್ಯಾಪಾರಿಗಳ ಬೆಂಬಲ; ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳೂ ರೈತರ ಹೋರಾಟಕ್ಕೆ ಸಾಥ್ಕಬ್ಬು ರೈತರ ಹೋರಾಟ - ಬೀಳಗಿ ಸಂಪೂರ್ಣ ಬಂದ್ಹುನಗುಂದದಲ್ಲಿ ರೈತ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ: ರಾಷ್ಟ್ರೀಯ ಹೆದ್ದಾರಿ-೫೦ ಬಂದ್!ಮಹಾನ್ ರಾಜಕೀಯ ಮುತ್ಸದ್ದಿ, ಶಿಕ್ಷಣ ಸಾಧಕ, ಮಾಜಿ ಸಚಿವ  ಶಿವಾನಂದ ಕೌಜಲಗಿ ಅವರ ಅಭಿಮಾನಿಗಳ  ದುಃಖದ ಮಡಿಲಲ್ಲಿ ಅಂತಿಮ  ಸಂಸ್ಕಾರ.ರೈತರ ಬದುಕಿನಲ್ಲಿ ಆಟವಾಡುತ್ತಿರುವ ಕೇಂದ್ರ ಸರ್ಕಾರ: ಪ್ರವೀಣ ಪಾಟೀಲಕೃಷ್ಣಾ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿ ಸಂಸ್ಥೆ ಬೆಳೆಸಿ: ರೈತರಲ್ಲಿ ಅಧ್ಯಕ್ಷ ಪರಪ್ಪ ಸವದಿ ಮನವಿಕಬ್ಬಿಗೆ 5,500 ಬೆಲೆ ನಿಗದಿಗೆ ಆಗ್ರಹಿಸಿ ಅಥಣಿಯಲ್ಲಿ ರೈತರ ಪ್ರತಿಭಟನೆ/ ವಿವಿಧ ವೃತ್ತಗಳಲ್ಲಿ ರಸ್ತೆ ತಡೆದು ಆಕ್ರೋಶ; ಸೋಮವಾರದಿಂದ ಗುರ್ಲಾಪೂರದಲ್ಲಿ ಜೈಲ್ ಭರೋ ಚಳವಳಿ: ಶಶಿಕಾಂತ ಗುರುಜಿ ಎಚ್ಚರಿಕೆ""ಗುರ್ಲಾಪುರ ಬಂದ್  ಯಶಸ್ವಿ ""ಕಟಕೋಳ ಸಿದ್ದರಾಯಜ್ಜನವರ ಮಠದಲ್ಲಿ ವೈಭವದ ಜಾತ್ರಾ ಮಹೋತ್ಸವ: ಭಕ್ತ ಸಾಗರ, ಭಂಡಾರದ ನಮನ