ಇಂಡಿ : ತಾಲೂಕಿನ ವಿಜಯಪುರ ರಸ್ತೆಯಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ, ಮದ್ಯ ಹಾಗೂ ವಾಹನವನ್ನು ಜಪ್ತಿ ಮಾಡಿದ್ದಾರೆ.
೨೦-೦೯-೨೦೨೬ ಸಂಜೆ ಸುಮಾರು ೬:೩೦ರ ವೇಳೆಗೆ, ಇಂಡಿಯಿಂದ ವಿಜಯಪುರಕ್ಕೆ ಹೋಗುವ ರಸ್ತೆಯ ಡಿಲಕ್ಸ್ ಟೈರ್ ರಿಮೌಂಡ್ ಅಂಗಡಿಯ ಎದುರುಗಡೆ ಅಬಕಾರಿ ಇಲಾಖೆ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.
ನೋಂದಣಿ ಸಂಖ್ಯೆ ಇಲ್ಲದ ಕಪ್ಪು ಮತ್ತು ಕೆಂಪು ಬಣ್ಣದ ’ಟಿವಿಎಸ್ ಎನ್ ಟಾರ್ಕ್-೧೨೫ ರೇಸ್ ಎಕ್ಸ್‌ಪಿ’ (ಖಿಗಿS ಓಖಿಔಖಕಿ-೧೨೫ ಖಚಿಛಿe ಘಿP) ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಒಟ್ಟು ೪.೬೮೦ ಲೀಟರ್ ಮದ್ಯವನ್ನು ಹಾಗೂ ವಾಹನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಳ್ಳಲಾದ ಒಟ್ಟು ವಸ್ತುಗಳ ಮೌಲ್ಯ ಸುಮಾರು ರೂ.೭೩,೭೪೦/- ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಯಶಸ್ವಿ ಕಾರ್ಯಾಚರಣೆಯನ್ನು ಇಂಡಿ ವಲಯದ ಅಬಕಾರಿ ನಿರೀಕ್ಷಕರಾದ ರಾಹುಲ್ ಎಸ್. ನಾಯಕ್ ಅವರ ನೇತೃತ್ವದಲ್ಲಿ ನಡೆಸಲಾಗಿದ್ದು, ದಾಳಿಯಲ್ಲಿ ಸಿಬ್ಬಂದಿಗಳಾದ ಶಿವಶಂಕರ ಗೋಟ್ನಾಳ, ಮಂಜುನಾಥ ಬಡಿಗೇರ, ಮಲ್ಲಪ್ಪ ಬಿರಾದಾರ ಹಾಗೂ ಭೀಮರಾಯ ತಳವಾರ ಪಾಲ್ಗೊಂಡಿದ್ದರು ಎಂದು ಅಬಕಾರಿ ನಿರೀಕ್ಷಕರು ಮಾಹಿತಿ ನೀಡಿದ್ದಾರೆ.