Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹುಬ್ಬಳ್ಳಿ-ಧಾರವಾಡ ಪಾಲಿಕೆ ನಿವೇಶನಗಳು ಅಕ್ರಮ ಮಾರಾಟ

ಹುಬ್ಬಳ್ಳಿ, 

ಒಂದಡೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (Hubballi-Dharwad Corporation) ಆದಾಯ ಕೊರತೆಯಿಂದ ಬಳಲುತ್ತಿದೆ. ಮತ್ತೊಂದಡೆ ಪಾಲಿಕೆಗೆ ಆದಾಯ ಬರುವ ಮೂಲಗಳಲ್ಲಿ ಅಕ್ರಮಗಳು ನಡೆದಿದ್ದರೂ ಪಾಲಿಕೆ ಯಾವುದೇ ಕ್ರಮಕೈಗೊಳ್ಳದೆ ಕಣ್ಣುಮುಚ್ಚಿಕೊಂಡಿದೆ. ಕಲಾವಿದರ ಕಾಲೋನಿಯಲ್ಲಿ ಭೂ ಮಾಫಿಯಾ ದಲ್ಲಾಳಿಗಳು, ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಸೈಟ್​​ಗಳನ್ನು ಅಕ್ರಮವಾಗಿ ಪರಬಾರೆ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಕ್ರಮಕೈಗೊಳ್ಳಬೇಕಿದ್ದ ಪಾಲಿಕೆ ಮೌನಕ್ಕೆ ಶರಣಾಗಿದ್ದು, ಅಕ್ರಮದಲ್ಲಿ ಪಾಲಿಕೆಯ ಅಧಿಕಾರಿಗಳು ಮತ್ತು ಕೆಲ ಜನಪ್ರತಿನಿಧಿಗಳು ಸಾಥ್ ನೀಡಿರುವ ಆರೋಪಗಳು ಕೇಳಿಬರುತ್ತಿವೆ.

Advertisement

ಘಟನೆ ಹಿನ್ನೆಲೆ 

ಹುಬ್ಬಳ್ಳಿಯ ಆನಂದ ನಗರದಲ್ಲಿ ಕಲಾವಿದರು ಸೇರಿದಂತೆ ಅನೇಕ ಹಿಂದುಳಿದ ವರ್ಗಗಳ ಜನರಿಗಾಗಿ 1980 ರಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಿವೇಶನಗಳನ್ನು ನೀಡಿತ್ತು. ಪಾಲಿಕೆಯ ಒಡೆತನದ ಆಸ್ತಿಯನ್ನು ನಿವೇಶನಗಳನ್ನಾಗಿ ಮಾಡಿ, ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ನೀಡಲಾಗಿತ್ತು. ಸರಿಸುಮಾರು ಮೂರುವರೆ ಸಾವಿರ ಫಲಾನುಭವಿಗಳಿಗೆ ಆ ಸಮಯದಲ್ಲಿ ಹಕ್ಕುಪತ್ರ ನೀಡಿತ್ತು. ಹಕ್ಕುಪತ್ರ ನೀಡುವ ಸಮಯದಲ್ಲಿ, 20 ವರ್ಷಗಳ ಕಾಲ ನಿವೇಶನಗಳನ್ನು ಮಾರಾಟ ಮಾಡಬಾರದು. ಆ ಬಳಿಕ ಮಾರಾಟ ಮಾಡಿದರೆ ನಿವೇಶನದ ಅಂದಿನ ಮಾರ್ಕೆಟ್ ಬೆಲೆಯ ಶೇಕಡ 25ರಿಂದ 50ರಷ್ಟು ಹಣವನ್ನು ಪಾಲಿಕೆಗೆ ಸಂದಾಯ ಮಾಡಬೇಕು. ಪಾಲಿಕೆಯಿಂದ ಮಾರಾಟ ಪರವಾನಗಿ ಪತ್ರವನ್ನು ಪಡೆದ ನಂತರವೇ ಮಾರಾಟ ಮಾಡಬೇಕು ಎಂಬ ನಿಯಮಗಳನ್ನು ವಿಧಿಸಲಾಗಿತ್ತು.

ನಿವೇಶನಗಳನ್ನು ಪಡೆದವರ ಪೈಕಿ ಕೆಲವರು, 20 ವರ್ಷಗಳ ನಂತರ ತಮ್ಮ ನಿವೇಶನಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ಪಾಲಿಕೆ ವಿಧಿಸಿದ್ದ ಷರತ್ತುಗಳನ್ನು ಮಾತ್ರ ಬಹುತೇಕರು ಪಾಲಿಸುತ್ತಿಲ್ಲ. ಪಾಲಿಕೆಗೆ ಸದ್ಯದ ನಿವೇಶನದ ಮಾರ್ಕೆಟ್​ ಬೆಲೆಯ ಶೇಕಡ 50ರಷ್ಟು ಹಣವನ್ನು ಕಟ್ಟುತ್ತಿಲ್ಲ. ಇನ್ನು ಮಾರಾಟ ಪರವಾನಗಿ ಪತ್ರಗಳನ್ನೇ ನಕಲು ಮಾಡಿ ಮಾರಾಟ ಮಾಡುತ್ತಿದ್ದಾರಂತೆ ಎಂದು ಸ್ವತಃ ಪಾಲಿಕೆಯ ಸದಸ್ಯ ಆರೀಪ್ ಭದ್ರಾಪುರ ಗಂಭೀರ ಆರೋಪ ಮಾಡಿದ್ದಾರೆ.

ದೊಡ್ಡ ದಂಧೆ ಪತ್ತೆ: ಕೈಕಟ್ಟಿ ಕೂತ ಅಧಿಕಾರಿಗಳು

ಪಾಲಿಕೆಯ ಅಧಿಕಾರಿಗಳ ನಕಲಿ ಸಹಿ, ನಕಲಿ ಮಾರಾಟ ಪರವಾನಗಿ ಪತ್ರಗಳನ್ನು ಸೃಷ್ಟಿ ಮಾಡಿ, ಬೇರೆಯವರಿಗೆ ಪಾಲಿಕೆ ನೀಡಿದ್ದ ನಿವೇಶಗಳನ್ನು ಮಾರಾಟ ಮಾಡುವ ದೊಡ್ಡ ದಂಧೆಯೇ ಕಲಾವಿದರ ಕಾಲೋನಿ ಮತ್ತು ಆನಂದ ನಗರದಲ್ಲಿ ನಡೆದಿದೆ. ಆದರೆ ಇದೆಲ್ಲವು ಗೊತ್ತಿದ್ದರು ಕೂಡ ಪಾಲಿಕೆಯ ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲವಂತೆ. ಪಾಲಿಕೆಯ ಕಮಿಷನರ್ ಸೇರಿದಂತೆ ಎಲ್ಲಾ ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ಇದ್ದರು ಕೈಕಟ್ಟಿ ಕೂತಿದ್ದಾರೆ ಅಂತ ಪಾಲಿಕೆ ಸದಸ್ಯ ಆರೀಪ್ ಭದ್ರಾಪುರ ಆರೋಪಿಸಿದ್ದಾರೆ.

ಇನ್ನು ಈ ಮಾಫಿಯಾದಲ್ಲಿ ಕೆಲ ಜನಪ್ರತಿನಿಧಿಗಳು, ಪಾಲಿಕೆಯ ಅಧಿಕಾರಿಗಳು, ಲ್ಯಾಂಡ್ ಮಾಫಿಯಾದವರ ಕೈವಾಡವಿದೆಯಂತೆ. ಸದ್ಯ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆದಾಯದ ಕೊರತೆಯಿಂದ ಬಳಲುತ್ತಿದೆ. ಯಾವುದೇ ಕಾಮಗಾರಿ ಮಾಡಿ ಅಂತ ಹೇಳಿದರು ಕೂಡ ಪಾಲಿಕೆಯಲ್ಲಿ ಹಣವಿಲ್ಲ ಅಂತ ಪಾಲಿಕೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ನಿವೇಶನಗಳ ಮಾರಾಟಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದರೆ ಪಾಲಿಕೆಯ ಬೊಕ್ಕಸಕ್ಕೆ ಹೆಚ್ಚಿನ ಹಣವು ಹರಿದು ಬರುತ್ತದೆ. ಆದರೆ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದ್ದರು ಕೂಡ ಪಾಲಿಕೆಯ ಅಧಿಕಾರಿಗಳು ಕೈಕಟ್ಟಿ ಕೂತಿರುವುದು ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ.

ಕಲಾವಿದರ ಕಾಲೋನಿ, ಆನಂದ ನಗರ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಈ ಹಿಂದೆ ಪಾಲಿಕೆ ನೀಡಿದ್ದ ನಿವೇಶನಗಳ ಅಕ್ರಮ ಮಾರಾಟಕ್ಕೆ ಪಾಲಿಕೆಯ ಅಧಿಕಾರಿಗಳು ಬ್ರೇಕ್ ಹಾಕಬೇಕಿದೆ. ನಿಯಮಾನುಸಾರ ಪಾಲಿಕೆಗೆ ಹಣ ಕಟ್ಟಿದವರಿಗೆ ಮಾತ್ರ ಮಾರಾಟ ಪರವಾನಗಿ ಪತ್ರಗಳನ್ನು ನೀಡಬೇಕಿದೆ. ಅಕ್ರಮಕ್ಕೆ ಬೆಂಬಲಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಿದೆ.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸುಧಾರಿತ ವಸ್ತುಗಳ ಸಂಶೋಧನೆ ಮತ್ತು ಅಭಿವೃದ್ಧಿ ಪರಿಸರ ವ್ಯವಸ್ಥೆ ಅನಾವರಣಗೊಳಿಸಿದ ಏಕಸ್ ಮತ್ತು ಧಾರವಾಡ ಐಐಟಿಹುಬ್ಬಳ್ಳಿ-ಧಾರವಾಡ ಪಾಲಿಕೆ ನಿವೇಶನಗಳು ಅಕ್ರಮ ಮಾರಾಟಮಣ್ಣೂರಿನಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ7 ಗಂಭೀರ ವಿಷಯ:  ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ಜೊತೆ ನೇರ ಚರ್ಚೆಗೆ ಎಫ್ಒಎಬಿ ನಿರ್ಧಾರ*ಗೃಹಲಕ್ಷ್ಮಿ ಯೋಜನೆಯ ಸಾರ್ಥಕತೆ: 624 ಅಂಕ ಗಳಿಸಿದ ವಿದ್ಯಾರ್ಥಿನಿಗೆ ಇಲಾಖೆಯಿಂದ ಅಭಿನಂದನೆ* ೧೮ ರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ-೨ಯುವಜನತೆ ಮೊಬೈಲ್ ಗೀಳಿನಿಂದ ಹೊರಬಂದು ನಮ್ಮ ನೆಲದ ಸಂಸ್ಕೃತಿಯನ್ನು ಅರಿತುಕೊಳ್ಳಬೇಕು: ಸಿ.ಪಿ.ಐ ವಿಶ್ವನಾಥ ಹಿರೇಗೌಡ್ರಮೇ 16 ಕ್ಕೆ ರಾಷ್ಟ್ರೀಯ  ಡೆಂಗ್ಯೂ ದಿನಾಚರಣೆ: ಭಿತ್ತಿ ಪತ್ರ ಬಿಡುಗಡೆತಾಯಿ ಮತ್ತು ಶಿಶು ಮರಣ ಪ್ರಮಾಣ ಶೂನ್ಯಕ್ಕೆ ಇಳಿಸಿ: ಡಾ.ಸುರೇಶ ಬಿ.ಇಟ್ನಾಳ್ಕೊಪ್ಪಳವನ್ನು ಗೆಲ್ಲಿಸಿ: ಸಿವಿಸಿ ಕರೆ