LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ನಾನು ಮತ್ತು ಗುಂಡ 2  ಶಿವನ ಹಾಡು ಬಿಡುಗಡೆ

  'ನಾನು ಮತ್ತು ಗುಂಡ 2' ಚಿತ್ರಕ್ಕಂ ಡಾ.ವಿ.ನಾಗೇಂದ್ರಪ್ರಸಾದ್ ಶಿವನ ಮೇಲೆ ರಚಿಸಿರುವ ಹಾಗೂ ವಿಜಯಪ್ರಕಾಶ್ ದನಿಯಾಗಿರುವ  'ಓಂ ಶಿವಾಯ, ನಮೋ ಶಿವಾಯ' ಹಾಡಿನ ಬಿಡುಗಡೆಯಾಗಿದೆ. ಸೆ. 5ರಂದು ಈ ಚಿತ್ರದ  ಬಿಡುಗಡೆಗೆ ಸಿದ್ಧತೆ ನಡೆಸಲಾಗಿದೆ.


     ಸಮಾರಂಭದಲ್ಲಿ ಸಾಹಿತಿ ನಾಗೇಂದ್ರ ಪ್ರಸಾದ್ ಮಾತನಾಡುತ್ತಾ "ರಘುಹಾಸನ್ ಈ ಸಾಂಗ್ ಬಗ್ಗೆ ಹೇಳಿದಾಗ ತುಂಬಾ ವಿಷಯಗಳು ಇದರಲ್ಲಿವೆ ಎನಿಸಿತು, ಕಥೆ ಹೇಳಿದ ಹಾಗಿರಬಾರದು, ಆದರೆ ಲೈನ್ಸ್ ಕಥೆ ಹೇಳುವಂತಿರಬೇಕು, ಮನಸಿಗೆ ಇಳಿಯುವಂಥ ಕಂಟೆಂಟ್ ಈ ಹಾಡಲ್ಲಿದೆ, ಇದು ಪಕ್ಕಾ ಚಿತ್ರಗೀತೆ, ಸಿನಿಮಾದಲ್ಲಿ ನೋಡಿದಾಗ ತುಂಬಾ ಇಂಪ್ಯಾಕ್ಟ್ ಆಗುತ್ತೆ ಟ್ರೇಲರ್‌ನಲ್ಲಿ ಎಲ್ಲಾ ಎಮೋಷನ್ ಹೇಳುವ ಪ್ರಯತ್ನ ಮಾಡಿದ್ದಾರೆ" ಎಂದು ಹೇಳಿದರು.

     ನಿರ್ದೇಶಕ ರಘುಹಾಸನ್ "ನಮ್ಮ ಚಿತ್ರ 2022ರಲ್ಲಿ  ಪ್ರಾರಂಭವಾಗಿತ್ತು, ಇದೀಗ ಬಿಡುಗಡೆಯಾಗುತ್ತಿದೆ, ಹೊಡಿಬಡಿ ಕಥೆಗಳನ್ನು ಬಿಟ್ಟು ಭಾವನಾತ್ಮಕವಾಗಿ ಏನಾದರೂ ಮಾಡಬೇಕೆಂದಾಗ ಹುಟ್ಟಿದ್ದೇ ಗುಂಡನ ಕಥೆ, ಸೆನ್ಸಾರ್‌ ಮಂಡಳಿ ಚಿತ್ರಕ್ಕೆ ಯಾವುದೇ ಕಟ್ ಸೂಚಿಸದೆ 'ಯು/ಎ' ಕೊಟ್ಟಿದೆ, 'ನಾನು ಮತ್ತು ಗುಂಡ'ದ ಶಂಕರ ನಿಧನನಾದ ಮೇಲೆ ಆತನ ಮಗನಿಂದ ಭಾಗ 2ರಲ್ಲಿ ಕಥೆ ಕಂಟಿನ್ಯೂ ಆಗುತ್ತದೆ. ರಾಕೇಶ್ ಅಡಿಗ ಶಂಕರನ ಮಗನಾಗಿ ನಟಿಸಿದ್ದು, ಆತನಿಗೆ ನಾಯಿಯೇ ಪ್ರಪಂಚ. ಸೋಷಿಯಲ್ ಕನ್‌ಸರ್ನ್ ಜೊತೆಗೆ ಡಿವೈನ್ ಕಂಟೆಂಟ್ ಕೂಡ ಈ ಚಿತ್ರದಲ್ಲಿದೆ"

ಎಂದು ತಿಳಿಸಿದರು. ರಘುಹಾಸನ್ ಚಿತ್ರದ ನಿರ್ಮಾಣದ ಜವಾಬ್ದಾರಿ ಸಹ ಹೊತ್ತಿದ್ದಾರೆ.

     ನಾಯಕ ರಾಕೇಶ್ ಅಡಿಗ, ನಾಯಕಿ ರಚನಾ ಇಂದರ್, ಛಾಯಾಗ್ರಾಹಕ ತನ್ವಿಕ್, ಬಾಲನಟ ಜೀವನ್ ಚಿತ್ರದ ವಿಶೇಷತೆಗಳ ಕುರಿತು ಮಾತನಾಡಿದರು.


ಪಟ್ನಾಯಕ್ ಸಂಗೀತ ಸಂಯೋಜನೆ, ರುತ್ವಿಕ್ ಮುರಳೀಧರ್ ಹಿನ್ನೆಲೆ ಸಂಗೀತವಿದ್ದು, ಸಂಭಾಷಣೆ ಹಾಗೂ ಸಾಹಿತ್ಯವನ್ನು ರೋಹಿತ್ ರಮನ್ ರಚಿಸಿದ್ದಾರೆ.


   ಈ ಚಿತ್ರದಲ್ಲಿ ಡಾಗ್ ಸಿಂಬನ ಮಗ ನಟಿಸಿದ್ದಾನೆ. ಸಿಂಬ ನಾಲ್ಕು ದಿನವಷ್ಟೇ  ಶೂಟಿಂಗ್‌ನಲ್ಲಿ ಭಾವಹಿಸಿ ಮೃತನಾಗಿದ್ದ. ನಂತರ ಅವನ ಮಗ ಸಿಂಬ ನಟಿಸಿದ್ದಾನೆ.   ಅಲ್ಲದೆ  ಬಂಟಿ ಎಂಬ ನಾಯಿಯೂ   ನಟಿಸಿದೆ.


Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್