LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಭಾರತೀಯ ಪರಂಪರೆ-ಸಂಸ್ಕ್ರತಿ ಉಳಿದಿರುವುದು ಮಹಿಳೆಯರಿಂದ:ಹಾರಿಕಾ ಮಂಜುನಾಥ 

ಚಿಕ್ಕೋಡಿ:ಭಾರತದ ಮೇಲೆ ಪರಕೀಯರು ನಿರಂತರವಾಗಿ ಸಾವಿರಕ್ಕಿಂತ ಹೆಚ್ಚು ವರ್ಷಗಳ ಕಾಲ ದಾಳಿ ಮಾಡಿದರೂ,ನೂರು ಕೋಟಿಗಿಂತ ಹೆಚ್ಚು ಜನರಲ್ಲಿ  ನಮ್ಮ ಸಂಸ್ಕ್ರತಿ-ಪರಂಪರೆಯ ಆಚರಣೆ ಉಳಿದಿರುವುದು ಮಹಿಳೆಯರಿಂದ.ಮಹಿಳೆಯರು ತೊಟ್ಟ ಬಿಂದಿಗೆಯಿಂದ,ಬಳೆಯಿಂದ   ನಮ್ಮ ಸಂಸ್ಕ್ರತಿಯನ್ನು ಎತ್ತಿ ತೋರಿಸುತ್ತದೆ ಎಂದು ಬೆಂಗಳೂರಿನ ಖ್ಯಾತ ಭಾಷಣಗಾರತಿ,ಲೇಖಕಿ ಹಾರಿಕಾ ಮಂಜುನಾಥ ಹೇಳಿದರು.


ಅವರು ಚಿಕ್ಕೋಡಿ ಪಟ್ಟಣದ ಸಿಟಿಇ ಸಂಸ್ಥೆಯ ಅಹಲ್ಯಾಬಾಯಿ ಪಾಟೀಲ ಮಹಾವಿದ್ಯಾಲಯದಲ್ಲಿ ‌ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ‌ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ತನ್ನ ಮೇಲೆ ಹಾಗೂ ತನ್ನ ಕೋಟೆಯ  ಮೇಲೆ ಪರಕೀಯರ  ದಾಳಿ ಆಗುವ ಸಂಧರ್ಬದಲ್ಲಿ ಕೈಯಲ್ಲಿ ಖಡ್ಗ ಹಿಡಿದು ಕೆಚ್ಚೆದೆಯಿಂದ  ಹೋರಾಡಿ ತಮ್ಮ ಸಂಸ್ಥಾನವನ್ನು ಉಳಿಸಿಕೊಂಡ ಕಿತ್ತೂರಿನ ರಾಣಿ ಚೆನ್ನಮ್ಮ, ಒಣಕೆ ಓವಬ್ಬ,ತಾರಾಬಾಯಿ,ಕೆಳದಿ ಚೆನ್ಮಮ್ಮ,ಬೆಳವಡಿ ಮಲ್ಲಮ್ಮ ಸೇರಿದಂತೆ ವಿವಿಧ ಮಹಿಳೆಯರು ನಮ್ಮ ಭಾರತದ ಪರಂಪರೆ.


ಭಾರತೀಯ ಪರಂಪರೆ ವಿದೇಶಗಳ ಪರಂಪರೆಗೆ ಹೊಂದಾಣಿ ಮಾಡಿಕೊಂಡಾಗ ಭಾರತೀಯ ಪರಂಪರೆಯು ಅತ್ಯಂತ ಶ್ರೇಷ್ಠವಾದದ್ದು.ಸದ್ಯ

ಭಾರತೀಯ ಹೆಣ್ಣುಮಕ್ಕಳು ಮದುವೆಗೆ,ಅಡುಗೆ ಮನೆಗೆ,ಮನೆ ಬಾಗಿಲಿಗೆ ಸೀಮಿತವಾಗದೇ ಪ್ರತಿಯೊಂದು ಕ್ಷೇತ್ರದಲ್ಲಿ ಕಾರ್ಯಪ್ರವೃತ್ತಿಯಾಗಿರುವದು ನಮ್ಮ ಪರಂಪರೆ‌.ಸಮಾಜವನ್ನು ಮುಂದುವರಿಸುವ ಗೃಹಿಣಿ,ಆರ್ಥಿಕ ಬೆಂಬಲ ನೋಡಿಕೊಳ್ಳುವ ‌ಮಹಿಳೆ ಹೀಗೆ ವೇದಗಳಲ್ಲಿ ಮಹಿಳೆಯರನ್ನು ವಿವಿಧ ರೀತಿಯಾಗಿ ಹಾಡಿಹೊಗಳಾಗಿದೆ.


ಮಹಿಳೆಯರನ್ನು ತಾಯಿಯ ಸ್ವರೂಪದಲ್ಲಿ ನೋಡುವ ಪರಂಪರೆ ನಮ್ಮದು ಎಂದರು.ಬೆಳಗಾವಿ ಜಿಲ್ಲೆಯಲ್ಲಿ ಸಿಟಿಇ ಸಂಸ್ಥೆಯ ಅಹಲ್ಯಾಬಾಯಿ ಪಾಟೀಲ ಪ್ರಥಮ ಮಹಾವಿದ್ಯಾಲ ಎಂಬುದು ನಿಜಕ್ಕೂ ಹೆಮ್ಮೆಯ ‌ವಿಷಯ.ಇವತ್ತು ನಡೆದ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಅರಿಶಿನ ಕುಂಕುಮ‌ ಕೊಟ್ಟು ಸ್ವಾಗತಿಸಿಕೊಂಡು ಹಾಗೂ ಎಲ್ಲ ವಿದ್ಯಾರ್ಥಿನಿಯರು ಸೀರೆಯನ್ನು ಉಟ್ಟುಕೊಂಡು ಬಂದಿರುವುದು ನಮ್ಮ ಭಾರತೀಯ ಪರಂಪರೆಯ ‌ಸಂಕೇತ‌ ಎಂದು ಹಾರಿಕಾ ಮಂಜುನಾಥ ‌ಸಂತಸವನ್ನು ವ್ಯಕ್ತಪಡಿಸಿದರು.


ಬೈಟ್-೧ ಹಾರಿಕಾ ಮಂಜುನಾಥ,ಭಾಷಣಗಾರತಿ,ಲೇಖಕಿ


ಈ ಸಂದರ್ಭದಲ್ಲಿ ತೃಪ್ತಿ ಎಸ ಕುಲಕರ್ಣಿ,ಭಾಗ್ಯಶ್ರೀ ಕುಲಕರ್ಣಿ, ಶೋಭಾ ಮಾಂಜ್ರೆಕರ,ನಿಲಮ ಅಡಕೆ,ಕೀರ್ತಿ ಕುಲಕರ್ಣಿ,ಸ್ವಾತಿ ದೇಶಪಾಂಡೆ, ರೇಖಾ ಕುಲಕರ್ಣಿ,ಗಾಯತ್ರಿ ಪಡಲಿ,ಗೌರಿ ಮಾಂಜ್ರೇಕರ,ಡಾ! ಎಸ್.ಸಿ.ಜಕಾತೆ,ಶೃತಿ ಪಾಟೀಲ,ಪೂಜಾ ಬಾನಕರೆ,ತೃಪ್ತಿ ಎಸ್ ,ಉಮಾ ಪತ್ತಾರ,ಮಿಥುನ ದೇಶಪಾಂಡೆ,ರೇಖಾ ಕುಲಕರ್ಣಿ,ಗಾಯತ್ರಿ ಪಟ್ಲಿ,ಪ್ರಿಯಾಂಕಾ ಹಿರೇಮಠ,ರೋಹಿಣಿ ಕುಂಬಾರ,ಕಸ್ತೂರಿ ನಿಡೋಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್