ಗದಗ, ೧೬ : ಶಾಸಕ ಎಚ. ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಮಂಗಳವಾರ ನಗರದ ಕಾಟನ್ ಸೇಲ್ ಸೊಸಾಯಿಟಿಯಲ್ಲಿರುವ ಕಾಂಗ್ರೆಸ್ ಕಾರ್ಯಾಲಯದ ಆವರಣದಲ್ಲಿ ಜಮಾಯಿಸಿದ ಗದಗ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಎಚ್. ಕೆ. ಪಾಟೀಲ ಅಭಿಮಾನಿಗಳು ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದರು. ಜಾಂಜ್ ಮೇಳ, ಹಲಿಗೆ ವಾದ್ಯ ಸೇರಿ ವಿವಿಧ ವಾದ್ಯಗಳು, ನೂರಾರು ಆಟೋಗಳು, ಟ್ರಾö್ಯಕ್ಟರ್‌ಗಳು, ಎತ್ತಿನ ಗಾಡಿಗಳ ಮೂಲಕ ಸಾವಿರಾರು ಕಾರ್ಯಕರ್ತರು, ಮಹಿಳೆಯರು ಕೈಯಲ್ಲಿ ಎಚ್. ಕೆ. ಪಾಟೀಲರ ಭಾವಚಿತ್ರಗಳನ್ನು ಹಿಡಿದು ರ‍್ಯಾಲಿ ನಡೆಸಿ ಎಚ್. ಕೆ. ಪಾಟೀಲರಿಗೆ ಸಚಿವ ಸ್ಥಾನ ನಿಡಬೇಕು ಎಂದು ಘೋಷಣೆ ಕೂಗಿ ಆಗ್ರಹಿಸಿದರು.

ಗದಗ ಜಿಲ್ಲೆಯ ಹಾಗೂ ಗದಗ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಎಚ್. ಕೆ. ಪಾಟೀಲ ಅಭಿಮಾನಿ ಬಳಗ ಮತ್ತು ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಬೃಹತ್ ರ‍್ಯಾಲಿಯು ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಿಂದ ಆರಂಭವಾಗಿ ಹಳೇ ಡಿ.ಸಿ. ವೃತ್ತ, ಭೂಮರಡ್ಡಿ ವೃತ್ತ, ರೋಟರಿ ವೃತ್ತ, ಮಹಾತ್ಮಾ ಗಾಂಧೀ ವೃತ್ತ, ಮಹೇಂದ್ರಕರ್ ವೃತ್ತ, ಹುಯಿಲಗೋಳ ನಾರಾಯಣರಾವ್ ವೃತ್ತ, ನಾಮಜೋಶಿ ರೋಡ್, ಬಸವೇಶ್ವರ ವೃತ್ತ ಮೂಲಕ ಮುಳಗುಂದ ನಾಕಾ ತಲುಪಿ ಅಲ್ಲಿನ ವೇದಿಕೆಯಲ್ಲಿ ಮುಖಂಡರು ಎಚ್. ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಮಾತನಾಡಿದರು.

ಮುಳಗುಂದ ನಾಕಾದಲ್ಲಿ ಕಾರ್ಯಕರ್ತರು ಗುಂಪುಗುಂಪಾಗಿ ಘೋಷಣೆ ಕೂಗಿದರು. ಒಂದು ಗುಂಪು ಟೈರ್‌ಗೆ ಬೆಂಕಿ ಹಚ್ಚಿ ಎಚ್. ಕೆ. ಪಾಟೀಲ ಪರ ಸಚಿವ ಸ್ಥಾನಕ್ಕಾಗಿ ಆಗ್ರಹಿಸಿದರು. ಮಧ್ಯ ಪ್ರವೇಶಿಸಿದ ಪೊಲೀಸರು ಬೆಂಕಿ ನಂದಿಸಿದರು. ರ‍್ಯಾಲಿ ವೇಳೆ ಪಾಲಾ ಬದಾಮಿ ಮಾರ್ಗವಾಗಿ ಚಲಿಸುವ ವಾಹನಗಳ ಮಾರ್ಗ ಬದಲಾಯಿಸಿದ ಹಿನ್ನೆಲೆಯುಲ್ಲಿ ಕೆಸ್‌ಆರ್‌ಟಿಸಿ ಬಸ್ಸ್ಗಳು, ಲಾರಿಗಳು, ಆಟೋ, ಕಾರುಗಳು ಹಾಗೂ ಬೈಕ್ ಸವಾರರು ಮತ್ತು ಸಾರ್ವಜನಿಕರು ಪರದಾಡುವಂತಾಯಿತು. ಗದಗ ಜಿಲ್ಲಾ ಪೊಲೀಸರು ರ‍್ಯಾಲಿಗೆ ಸೂಕ್ತ ಬಂದೂಬಸ್ತ ವ್ಯವಸ್ಥೆ ಮಾಡಿದ್ದರು.
ಸಚಿವ ಸ್ಥಾನ ನೀಡದಿದ್ದರೆ ಎಲ್ಲ ಪ್ರತಿನಿಧಿಗಳು ಕಾಂಗ್ರೆಸ್‌ಗೆ ಸಾಮೂಹಿಕ ರಾಜೀನಾಮೆ: ಬಿ. ಬಿ. ಅಸೂಟಿ
: ಗದಗ ಜಿಲ್ಲೆಯಲ್ಲಿ ಎಚ್. ಕೆ. ಪಾಟೀಲರಿಲ್ಲದ ಕಾಂಗ್ರೆಸ್ ಇರಲು ಸಾಧ್ಯವೇ ಇಲ್ಲ, ಅವರಿಗೆ ಮುಂಬರುವ ಸಂಪುಟ ವಿಸ್ತರಣೆಲ್ಲಿ ಸಚಿವ ಸ್ಥಾನ ನೀಡದಿದ್ದರೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಕಾಂಗ್ರೆಸ್ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಜಿಲ್ಲಾ ಗ್ಯಾರಂಟಿ ಯೋಜೆನೆಗಳ ಅನುಷ್ಠಾನ ಸಮೀತಿ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ ಹೇಳಿದರು.
ಅವರು ಶಾಸಕ ಎಚ್. ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ಗದಗ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಎಚ್. ಕೆ. ಪಾಟೀಲ ಅಭಿಮಾನಿ ಬಳಗ ಮತ್ತು ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಬೃಹತ್ ರ‍್ಯಾಲಿ ನಂತರ ನಗರದ ಮುಳಗುಂದ ನಾಕಾದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರು ಹಾಗೂ ರಾಜ್ಯ ಕಾಂಗ್ರೆಸ ಪಕ್ಷದ ನಾಯಕರು ಒಬ್ಬ ಸಮರ್ಥ ನಾಯಕ ಎಚ್. ಕೆ. ಪಾಟೀಲರನ್ನು ಸಂಪುಟಕ್ಕೆ ಸೇರಿಸಿಕೊಳ್ಳದೇ ಕಡೆಗಣಿಸಿದ್ದು ಖಂಡನೀಯ ಹಾಗೂ ರಾಜ್ಯದ ಜನರ ಮನಸ್ಸನ್ನು ತಲ್ಲಣಗೊಳಸಿದೆ. ಎಚ್. ಕೆ. ಪಾಟೀಲರಿಲ್ಲದ ನಿಮ್ಮ ಸಚಿವ ಸಂಪುಟಕ್ಕೆ ಎಳ್ಳಷ್ಟು ಬೆಲೆ ಇಲ್ಲ ಹಾಗೂ ವ್ಯರ್ಥ, ಇದೇ ರೀತಿ ಮುಂದುವರೆದರೆ ರಾಜ್ಯದ ಜನತೆ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ. ಎಚ್. ಕೆ. ಪಾಟೀಲರಿಲ್ಲದ ಸಂಪುಟಕ್ಕೆ ಎಳ್ಳಷ್ಟು ಬೆಲೆ ಇಲ್ಲ, ಅವರು ಸಂಪುಟದಲ್ಲಿದ್ದರೆ ಈ ನಾಡಿನ ನೆಲ, ಜಲ, ಭಾಷೆಗೆ ಒಂದು ಕಳೆ ಬರುತ್ತದೆ. ಎಚ್. ಕೆ. ಪಾಟೀಲರು ಸಂಪುಟದಲ್ಲಿದ್ದರೆ ಮಾತ್ರ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲು ಸಾಧ್ಯ ಹಾಗಾಗಿ ಕಾಂಗ್ರೆಸ್ ಪಕ್ಷದ ರಾಷ್ಟಿçÃಯ ನಾಯಕರಾದ ಸೋನಿಯಾ ಗಾಂಧಿಯವರು, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರೀಯಾಂಕಾ ಗಾಂದಿ, ವೇಣುಗೋಪಾಲü ಅವರು ಎಚ್. ಕೆ. ಪಾಟೀಲರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಸಿಎಂಗೆ ಸೂಚಿಸಬೇಕು ಎಂದು ಬಿ. ಬಿ. ಅಸೂಟಿ ಹೇಳಿದರು.
ನಗರಸಭೆ ಸದಸ್ಯರಾದ ಕೃಷ್ಣಾ ಪರಾಪೂರ ಅವರು ಮಾತನಾಡಿ, ದಕ್ಷ, ಪ್ರಾಮಾಣಿಕ, ಶುದ್ಧ ಹಸ್ತದ ಈ ನಾಡಿನ ಪ್ರಭಾವಿ ನಾಯಕರಾದ ಎಚ್. ಕೆ. ಪಾಟೀಲರನ್ನು ಮೊದಲ ಸಂಪುಟದಲ್ಲ ಕೈಬಿಟ್ಟಿದ್ದು ಕಾರ್ಯಕರ್ತರು ಹಾಗೂ ಉತ್ತರ ಕರ್ನಾಟಕದ ಜನತೆಗೆ ಮತ್ತು ನಾಡಿನ ಪ್ರಗತಿಗೆ ಅನ್ಯಾಯ. ಮುಂಬರುವ ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಸೂಕ್ತ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಹಾವೇರಿಯ ಎಚ್. ಕೆ. ಅಭಿಮಾನಿ ಬಳಗದ ಬಸೇಗಣ್ಣಿ ಅವರು ಮಾತನಾಡಿ, ನಾಲ್ಕು ಅವಧಿಗಳ ಕಾಲ ವಿಧಾನ ಪರಿಷತ್ತಿನ ಸದಸ್ಯರಾಗಿ, ವಿರೋಧ ಪಕ್ಷದ ನಾಯಕರಾಗಿ, ಶಾಸಕರಾಗಿ, ಸಚಿವರಾಗಿ ಎಚ್. ಕೆ. ಪಾಟೀಲರು ಮಾಡಿದ ಕೆಲಸ ಕಾರ್ಯಗಳನ್ನು ದೇಹಲಿಯ ನಾಯಕರು ಮರೆತಂತೆ ಕಾಣುತ್ತಿದೆ. ಮೊದಲ ಪಟ್ಟಿಯಲ್ಲಿ ಅವರನ್ನು ಬಿಟ್ಟಿರುವುದು ವಿಷಾದಕರ. ಅಭಿವೃದ್ಧಿಯ ವಿಷಯದಲ್ಲಿ ಜನ ಮೆಚ್ಚುವ ಹಾಗೆ ಕೆಲಸ ಮಾಡುವ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಮಹಿಳಾ ಮುಖಂಡರಾದ ಸುಜಾತಾ ದೊಡ್ಡಮನಿ ಅವರು ಮಾತನಾಡಿ, ಜಾತಿ, ಮತ, ಪಂಧ ಬೇಧವಿಲ್ಲದೇ ಎಲ್ಲ ಜನ ಸಾಮಾನ್ಯರಿಗೆ ಸಮಾನವಾಗಿ ಪರಿಗಣಿಸಿ ಕೆಲಸ ಮಾಡುವ ಎಚ್. ಕೆ. ಪಾಟೀಲರು ಸಚಿವ ಸಂಪುಟದಲ್ಲಿ ಇರಬೇಕು. ಅವರನ್ನು ಮೊದಲ ಹಂತದಲ್ಲಿ ಯಾವುದೋ ಕಾರಣಕ್ಕೆ ಕೈಬಿಟ್ಟಿರಬಹುದು ಮುಂಬರುವ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಬಸವರಾಜ ಸುಂಕಾಪೂರ ಅವರು ಮಾತನಾಡಿ, ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರಿಗೆ ದೇಹಲಿಯ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಎಚ್. ಕೆ. ಪಾಟೀಲರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಮಾರ್ಗದರ್ಶನ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ರ‍್ಯಾಲಿಯಲ್ಲಿ ಪ್ರಮುಖರಾದ ಎಸ್. ಎನ್. ಬಳ್ಳಾರಿ, ಗುರಣ್ಣ ಬಳಗಾನೂರ, ವಾಸಣ್ಣ ಕುರಡಗಿ, ಸಯ್ಯದ ನರಗುಂದ, ಮೋಹನ್ ಭಜೆಂತ್ರಿ, ವಿನೋದ ಸಿದ್ಲಿಂಗ್, ಪರಮೇಶ್ವರಪ್ಪ ಜಂತ್ಲಿ, ಅನಿಲ್ ಸಿದ್ದಮ್ಮನಹಳ್ಳಿ, ಬರ್ಕತ್‌ಅಲಿ ಮುಲ್ಲಾ, ಅನಿಲ್ ಗರಗ ಮುಂತಾದವರು ರ‍್ಯಾಲಿ ಉದ್ದೇಶಿಸಿ ಮಾತನಾಡಿದರು.
ಸಚಿನ್ ಡಿ. ಪಾಟೀಲ, ಅಕ್ಬರ್‌ಸಾಬ ಬಬರ್ಚಿ, ಎಸ್. ಕೆ. ಪಾಟೀಲ, ಅಸೋಕ ಮಂದಾಲಿ, ಉಮರ್‌ಫಾರೂಕ್ ಹುಬ್ಬಳ್ಳಿ, ಸಿದ್ಧಲಿಂಗೇಶ್ವರ ಪಾಟೀಲ, ಅನಿಲ ಶಿಂಗಟಾಲಕೇರಿ, ಪರಪ್ಪ ಕೆರಕಲಮಟ್ಟಿ, ಸೇರಿದಂತೆ ಸಾವಿರಾರು ಕಾರ್ಯಕರ್ತರು ಹಾಗೂ ಎಚ್. ಎಕೆ. ಪಾಟೀಲ ಅಭಿಮಾನಿಗಳು ಪಾಲ್ಗೊಂಡಿದ್ದರು.
ಬಾಕ್ಸ್```````````೧
ಸಮರ್ಥ ಆಡಳಿತಗಾರ, ದಕ್ಷ, ಪ್ರಾಮಾಣಿಕ ಜನಸೇವಕ, ಕಳಂಕ, ಕಪ್ಪು ಚುಕ್ಕೆ ಇಲ್ಲದ ಶುದ್ಧಹಸ್ತದ ರಾಜಕಾರಣಿ ಎಚ್. ಕೆ. ಪಾಟೀಲರಿಗೆ ಮುಂಬರುವ ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡದಿದ್ದರೆ ಕಾಂಗ್ರೆಸ್ ಪಕ್ಷದಿಂದ ಗದಗ ಬೆಟಗೇರಿ ನಗರಸಭೆಗೆ ಚುನಾಯಿತರಾದ ಎಲ್ಲ ೧೭ ಸದಸ್ಯರು ಸಾಮೂಹಿಕವಾಗಿ ನಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆ.
- ಎಲ್. ಡಿ. ಚಂದಾವರಿ
