ಮೂಡಲಗಿ : ಇಲ್ಲಿಗೆ ಸಮೀಪದ ಧುಪದಾಳ ಕಾಲೋನಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಮಾತೆಯರಾದ ಲಿಂಬೆವ್ವ ನಂದೆಪ್ಪ ಸಿದ್ದಮ್ಮನವರ ಅವರಿಗೆ ಬೆಳಗಾವಿಯ ರಾಷ್ಟ್ರೀಯ ಸಮಾಜ ಕಲ್ಯಾಣ ಸೇವಾ ಸಂಸ್ಥೆ ರಾಜ್ಯೋತ್ಸವ ನಿಮಿತ್ಯವಾಗಿ ಕೂಡ ಮಾಡುವ ೨೦೨೬ ನೇ ಸಾಲಿನ ರಾಜ್ಯಮಟ್ಟದ ಸುವರ್ಣ ಕರ್ನಾಟಕ ಶಿಕ್ಷಣ ರತ್ನ ೨೦೨೬ ಪ್ರಶಸ್ತಿಯನ್ನು ಘೋಷಿಸಿದೆ. ರಾಮದುರ್ಗ ಗೋಕಾಕ್ ಮೂಡಲಗಿ ತಾಲೂಕುಗಳಲ್ಲಿ ಸುಮಾರು ಮೂರು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ
ಇಂದು ದಿನಾಂಕ ೨೨ ರಂದು ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ನಡೆಯುವ ರಾಜ್ಯಮಟ್ಟದ ಕರ್ನಾಟಕ ರಾಜ್ಯೋತ್ಸವ ಹಾಗೂ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಲಿದ್ದಾರೆ. ಇವರ ಈ ಸಾಧನೆಗೆ ಘಟಪ್ರಭಾ ಧುಪದಾಳ ಸೇರಿದಂತೆ ಗೋಕಾಕ್ ಮೂಡಲಗಿ ರಾಮದುರ್ಗ ತಾಲೂಕಿನ ಎಲ್ಲಾ ಗುರು ಬಳಗ ಅಭಿನಂದಿಸಿದ್ದಾರೆ.