LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಬಲಿಯಾದವಳಿಂದ ವಿಜಯನಿಯಾಗುವವರೆಗೆ

ಬಳ್ಳಾರಿ, ಮಾ.12:  ಮಹಿಳಾ ಸಪ್ತಾಹ 2026 ಅಡಿಯಲ್ಲಿ  ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿಶೇಷ ಉಪನ್ಯಾಸವನ್ನು ವಕೀಲರಾದ ಶ್ರೀಮತಿ ಶಿವಲೀಲಾ ಅವರು "ಬಲಿಯಾದವಳಿಂದ ವಿಜಯನಿ ಯಾಗುವವರೆಗೆ ಕಾನೂನು ಜಾಗೃತಿ "ವಿಷಯ ಕುರಿತು ಮಾತನಾಡಿ ಭಾರತೀಯ ಸಂವಿಧಾನದಲ್ಲಿ ಮಹಿಳೆಯರಿಗಾಗಿ ಅನೇಕ ಕಾನೂನುಗಳಿವೆ. ಮಹಿಳೆಯರಿಗೆ ಹಾಗೂ ಪುರುಷರಿಗೂ ಕೂಡ ಈ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಸಮಾಜದಲ್ಲಿ ಭದ್ರತೆ ಗೆ ಮಹತ್ವ ಕೊಡದಿದ್ದರೆ ಪುರುಷರಿಗಿಂತ ಮಹಿಳೆಯ ಸರಾಸರಿ ಸಂಖ್ಯೆ ಕಡಿಮೆಯಾಗುತ್ತದೆ. ಆದ್ದರಿಂದ ಅವಳಿಗೆ ಮಹತ್ವ ಕೊಡುವುದರ ಮೂಲಕ  ಬ್ರೂಣ ಹತ್ಯೆ, ವರದಕ್ಷಿಣೆ, ಬಾಲ್ಯ ವಿವಾಹ, ಮೂಢನಂಬಿಕೆಗಳಂತಹ ಪದ್ಧತಿಗಳನ್ನು ರದ್ದುಪಡಿಸುವುದರ ಮೂಲಕ ಮಹಿಳೆಯರ ಸಂಖ್ಯೆ ಪುರುಷರು ಸರಾಸರಿ ಗೆ ಅನುಗುಣವಾಗಿ ನೋಡಿಕೊಳ್ಳಬೇಕಾಗಿದೆ. ಹಾಗೂ ಮದುವೆಯಾದ ಗಂಡು, ಹೆಣ್ಣನ್ನು ಸರಿಯಾಗಿ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಒಳಗೆ ಕಾನೂನು ಪ್ರಕಾರ ಜೀವನಾಂಶ ಕೊಡಬೇಕು. ಹಾಗೂ ಅವಳನ್ನು ಸುರಕ್ಷಿತವಾಗಿ ಬದುಕಲು ಬಿಡಬೇಕು ಆಗ ಮಾತ್ರ ಕಾನೂನುಗಳ ಸರಿಯಾದ ಬಳಕೆಯಾಗುತ್ತದೆ ಎಂದರ್ಥ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಡಾ. ಕೆ ಮಲ್ಲಿಕಾರ್ಜುನ ಅವರು ಮಾತನಾಡಿ ಮಹಿಳೆ ರಕ್ಷಿತವಾಗಿ ಬದುಕಲು ಭಾರತೀಯ ಕಾನೂನು ಸಾಕಷ್ಟು ಬಲಿಷ್ಠವಾಗಿದೆ. ನಿಮಗೆ ಯಾರಿಂದನಾದರೂ ಅನ್ಯಾಯವಾದಾಗ ಅವುಗಳನ್ನು ಬಳಸಿಕೊಂಡು ಕಾನೂನಾತ್ಮಕವಾಗಿ ನಿಮಗೆ ಸಿಗಬೇಕಾದ ಸೌಲಭ್ಯಗಳನ್ನು ರಕ್ಷಣೆಯನ್ನು ಪಡೆದುಕೊಂಡು ಸುರಕ್ಷಿತ ಜೀವನ ಸಾಗಿಸಲು ನೀವು ಕಾನೂನಿನ ರಕ್ಷಣೆ ಪಡೆದುಕೊಳ್ಳಬೇಕು ಹಾಗೂ ಎಲ್ಲರಿಗೂ ಬದುಕಲು ಹಕ್ಕು ಎಲ್ಲರಿಗೂ ಇದೆ ಎಂದು ಕರೆ ನೀಡಿದರು.

 ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು, ವಿದ್ಯಾರ್ಥಿನಿಯರು,ಬೋಧಕ ಹಾಗೂ  ಬೋಧಕೇತರ ಸಿಬ್ಬಂದಿಯವರು  ಭಾಗವಹಿಸಿದ್ದರು.

ವಿದ್ಯಾರ್ಥಿನಿಯರಿಂದ ಹೆಣ್ಣು ಭ್ರೂಣ ಹತ್ಯೆ,  ಮದ್ಯಪಾನದಿಂದ ಆಗುವ ಪರಿಣಾಮಗಳು ಹಾಗೂ ಇನ್ನಿತರ ಸಾಮಾಜಿಕ ಸಮಸ್ಯೆಗಳನ್ನು ಒಳಗೊಂಡ ವಿದ್ಯಾರ್ಥಿನಿಯರ ನಾಟಕ ಪ್ರದರ್ಶನ ಸ್ಪರ್ಧೆಯನ್ನು  ಆಯೋಜಿಸಲಾಗಿತ್ತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್