ನೇಸರಗಿ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಇವರಿಂದ ಸಮೀಪದ ಹಣಬರಟ್ಟಿ ಗ್ರಾಮದ ಶ್ರೀ ಲಕ್ಷ್ಮೀದೇವಿ ಜ್ಞಾನವಿಕಾಸ ಕೇಂದ್ರದಲ್ಲಿ ಮತ್ತು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಶ್ರೀ ಗ್ರಾಮದೇವತೆ ದೇವಸ್ಥಾನದಲ್ಲಿ ಉಚಿತ ಹೊಲಿಗೆ ತರಬೇತಿ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಸುನಂದಾ ಉಳವಿ ಧಾರವಾಡ ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿಗಳಾದ ಸುಧಾ ಭಾಸ್ಕರ , ಜ್ಞಾನ ವಿಕಾಸ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ದೇವಲಾಪುರ, ಉದ್ಘಾಟಕರಾಗಿ ಶ್ರೀ ವಿಶ್ವನಾಥ ಹಿರೇಮಠ ಸ್ವಾಮೀಜಿ, ಮುಖ್ಯ ಅತಿಥಿಗಳಾಗಿ ಮಲ್ಲಿಕಾರ್ಜುನ ಬನ್ನೂರ, ತರಬೇತಿ ಶಿಕ್ಷಕರಾದ ಶ್ರೀಮತಿ ಇಂದ್ರವ್ವ ಬನ್ನೂರ, ತಾಲೂಕಿನ ಜ್ಞಾನವಿಕಾಸ ಸಮನ್ವೇದಿಕಾರಿ ಶ್ರೀಮತಿ ಶೈಲಾ ವಲಯದ ಮೇಲ್ವಿಚಾರಕರಾದ ಪರಶುರಾಮ ಇವರ 11 ಟೇಲರಿಂಗ್ ಮಷಿನ್ ವಿತರಣಾ ಕಾರ್ಯಕ್ರಮಕ್ಕೆ ಶುಭ ಚಾಲನೆ ನೀಡಿದರು.
ಉದ್ಘಾಟಕರಾಗಿ ಆಗಮಿಸಿದ್ದ ಶ್ರೀಮತಿ ಸುಧಾ ಭಾಸ್ಕರ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಹಾಗೂ ಅದರ ಸದುಪಯೋಗ ಸ್ವ್ ಉದ್ಯೋಗ ಆಧಾರಿತ ತರಬೇತಿಗಳು ಸಣ್ಣ ಪ್ರಮಾಣದ ಕೈ ಕೆಲಸ ಟೈಲರಿಂಗ್ ತರಬೇತಿ ಇಂತಹ ಹತ್ತಾರು ಕಾರ್ಯಕ್ರಮಗಳನ್ನು ಕೈಗೊಂಡ ಪೂಜ್ಯ ವೀರೇಂದ್ರ ಹೆಗ್ಗಡೆ ಮಾತೃಶ್ರೀ ಹೇಮಾವತಿ ಅಮ್ಮನವರು ಬಡವರಿಗೆಂದೇ ಇಂತಹ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ನಿಮ್ಮೆಲ್ಲರ ಭಾಗ್ಯ ಕಾರ್ಯಕ್ರಮಗಳ ಉಪಯೋಗ ಎಲ್ಲರೂ ಪಡೆದುಕೊಳ್ಳಬೇಕು ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಹೊಂದುದರೊಂದಿಗೆ ಕುಟುಂಬ ನಿರ್ವಹಣೆಯನ್ನು ಜಾಣ್ಮೆಯಿಂದ ನಿರ್ವಹಿಸುವುದು ಅಗತ್ಯವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಶೈಲಾ ಜೆ ಅವರು ಯೋಜನೆ ಕಾರ್ಯಕ್ರಮಗಳ ಬಗ್ಗೆ ಸಮುದಾಯ ಅಭಿವೃದ್ಧಿ ಮಾಶಾಸನ ವಾತ್ಸಲ್ಯ, ಸುಜ್ಞಾನಿಧಿ ಶಿಷ್ಯವೇತನ ಜಲಮಂಗಳ ಆರೋಗ್ಯ ರಕ್ಷಾ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮೆ ಬಗ್ಗೆ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಿರೂಪಣೆಯನ್ನು ಸದಸ್ಯರಾದ ಶ್ರೀಮತಿ ಪ್ರೀತಿ ಬಿಲ್,
ಸ್ವಾಗತವನ್ನು ಶ್ರೀಮತಿ ಭಾವನಾ ಒಡಿಯರ,
ವಂದನೆಯನ್ನು ಸೇವಾ ಪ್ರತಿನಿಧಿ ಗೀತಾ ಬನ್ನೂರ ನಡೆಸಿಕೊಟ್ಟರು. ಜ್ಞಾನ ವಿಕಾಸ ಕೇಂದ್ರದ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.