ಕೃಷ್ಣ – ರಾಧೆಯರ ವೇಷದಲ್ಲಿ ಕಂಗೊಳಿಸಿದ ಪುಟಾಣಿಗಳು: ಭಕ್ತಿ- ಸಂಸ್ಕೃತಿಯ ಸಂದೇಶ ಸಾರಿದ ಜನ್ಮಾಷ್ಟಮಿ
, ಬಳ್ಳಾರಿ. 05:..ಶ್ರೀವಾಸವಿ ವಿದ್ಯಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಹಬ್ಬವನ್ನುಸಂಭ್ರಮ, ಭಕ್ತಿ ಹಾಗೂ ಸಾಂಸ್ಕೃತಿಕ ಸೊಬಗಿನನೊಂದಿಗೆ ಆಚರಿಸಲಾಯಿತು. ಶಾಲೆಯ ಆವರಣವು ಪುಟಾಣಿ ಕೃಷ್ಣರು ಹಾಗೂ ರಾಧೆಯರ ವೇಷಧಾರಿಗಳಾಗಿ ಕಂಗೊಳಿಸುತ್ತಿದ್ದು, ಭಜನೆ, ನೃತ್ಯ ಮತ್ತು ಗೀತೆಗಳ ಮೂಲಕ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಕಾರ್ಯಕ್ರಮವನ್ನುದ್ದೇಶಿಸಿ ಶ್ರೀ ವಾಸವಿ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ವಿಠ್ಠ ಕೃಷ್ಣಕುಮಾರ್ ಮಾತನಾಡಿ ಧರ್ಮದ ಮಾರ್ಗದಲ್ಲಿ ನಡೆಯುವುದು, ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವುದು ಹಾಗೂ ಎಲ್ಲರನ್ನೂ ಪ್ರೀತಿಯಿಂದ ಕಾಣುವುದು ಕೃಷ್ಣನ ಜೀವನದ ಪ್ರಮುಖ ಸಂದೇಶಗಳಾಗಿವೆ ಎಂದು ತಿಳಿಸಿದರು.
ವಿದ್ಯಾರ್ಥಿ ಸೃಜನ್ ಮಾತನಾಡಿ, “ಶ್ರೀ ಕೃಷ್ಣನು ನಮ್ಮೆಲ್ಲರಿಗೂ ಪ್ರಿಯವಾದ ದೇವರು. ಅವರ ಬಾಲಲೀಲೆಗಳು ನಮಗೆ ಸಂತೋಷ ನೀಡುವುದರ ಜೊತೆಗೆ, ಭಗವದ್ಗೀತೆಯ ಮೂಲಕ ಜೀವನದ
ಅಮೂಲ್ಯ ಸತ್ಯಗಳನ್ನು ತಿಳಿಸಿಕೊಡುತ್ತವೆ. ಫಲದ ಬಗ್ಗೆ ಚಿಂತಿಸದೆ ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂಬ ಕೃಷ್ಣನ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೃಷ್ಣಜನ್ಮಾಷ್ಟಮಿಯು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ನೆನಪಿಸುವ ಸುಂದರ ಹಬ್ಬವಾಗಿದೆ” ಎಂದು ತಿಳಿಸಿದರು.
ಶ್ರೀಕೃಷ್ಣ, ರಾಧೆ, ಗೋಪಾಲರು ಹಾಗೂ ಗೋಪಿಕೆಯರ ವೇಷದಲ್ಲಿ ಪುಟಾಣಿ ವಿದ್ಯಾರ್ಥಿಗಳು ಭಾಗವಹಿಸಿ ನೋಡುಗರನ್ನು ಮೆಚ್ಚಿಸಿದರು. ಕೃಷ್ಣನ ಬಾಲಲೀಲೆಗಳನ್ನು ಆಧರಿಸಿದ ನೃತ್ಯರೂಪಕಗಳು, ಭಕ್ತಿಗೀತೆಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನ್ಮಾಷ್ಟಮಿ ಆಚರಣೆಗೆ ವಿಶೇಷ ಮೆರಗು ನೀಡಿದವು .
ಕಾರ್ಯಾಕ್ರಮದಲ್ಲಿ ಶ್ರೀವಾಸವಿ ಎಜುಕೇಷನ್ ಟ್ರಸ್ಟ್ ನ ಕಾರ್ಯದರ್ಶಿ ಪಿ.ಎನ್. ಸುರೇಶ್, ಮುಖ್ಯೋಪಾಧ್ಯಾಯರಾದ ಶ್ರೀ ವೀರೇಶ್. ಯು. ಶಿಕ್ಷಕ- ಶಿಕ್ಷಕಿಯರು, ವಿದ್ಯಾರ್ಥಿಗಳು ಮತ್ತು
ಪೋಷಕರು ಉಪಸ್ಥಿತರಿದ್ದರು.
ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯು ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಗೋಕುಲಾಷ್ಟಮಿಯ ಬೆಣ್ಣೆ ಕುಂಡವನು ಹೊಡೆಯುವುದರ ಮುಖಾಂತರ ಸಂಭ್ರಮಿಸಿದರು.
ಶ್ರಿಮತಿ ಹೆಚ್. ಎಮ್. ಸುಜಾತ ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರಿಮತಿ ಕಲಾವತಿ ಸರ್ವರನ್ನು ಸ್ವಾಗತಿಸಿದರು, ಶ್ರಿಮತಿ ಸಂಗೀತ ವಂದನಾರ್ಪಣೆಯನ್ನು ನೆರವರೆಸಿದರು. ಶ್ರೀವಾಸವಿ ಎಜುಕೇಷನ್ ಟ್ರಸ್ಟ್ ನ ವತಿಯಿಂದ ಮುದ್ದು ಮಕ್ಕಳಿಗೆ ಸಿಹಿ ವಿತರಿಸಲಾಯಿತು.