Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭಾರಿ ಗಾತ್ರದ ಕಾಡುಕೋಣ ಸೆರೆಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ

ಚಿಕ್ಕಮಗಳೂರು: 

ಜಿಲ್ಲೆಯಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಅವುಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಕಾಡುಕೋಣ ಸೆರೆ ಕಾರ್ಯಾಚರಣೆಯ ಕುರಿತು ಮಧ್ಯ ಪ್ರದೇಶಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇದರ ಅಂಗವಾಗಿ ಸರ್ಕಾರ ಕಾಡುಕೋಣ ಸೆರೆಗೆ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ನಡೆದ ಕಾರ್ಯಾಚರಣೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಶಸ್ವಿಯಾಗಿದ್ದು ಅದರ ಕುರಿತ ಒಂದು ವರದಿ ಇಲ್ಲಿದೆ ನೋಡಿ.

Advertisement

ಚಿಕ್ಕಮಗಳೂರಿನ ಹಕ್ಕಿಮಕ್ಕಿ ಸಮೀಪ ಬಾರಿ ಗಾತ್ರದ ಕಾಡುಕೋಣ ಸೆರೆ ಹಿಡಿಯಲಾಗಿದ್ದು, ಶಿವಮೊಗ್ಗ ಮೃಗಾಲಯಕ್ಕೆ ಕಾಡುಕೋಣವನ್ನು ರವಾನೆ ಮಾಡಲಾಗಿದೆ. ಅರಣ್ಯ ಇಲಾಖೆ, ಶನಿವಾರ ಮೂಡಿಗೆರೆ ಅರಣ್ಯ ಉಪವಿಭಾಗದ ಆಲ್ಲೂರು ವಲಯದ ಹಕ್ಕಿಮಕ್ಕಿ ಸಮೀಪ ಒಂದು ಕಾಡುಕೋಣವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಎರಡು ದಿನಗಳಿಂದ ಕೊಪ್ಪ ಅರಣ್ಯ ವಿಭಾಗದಲ್ಲಿ ಕಾರ್ಯಾಚರಣೆ ಆರಂಭಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಶನಿವಾರ ಆಲ್ಲೂರು ವಿಭಾಗಕ್ಕೆ ಕಾರ್ಯಾಚರಣೆ ನಡೆಸಿದರು. ಅರೆನೂರು ಸಮೀಪದ ಹಕ್ಕಿಮಕ್ಕಿ ಸಮೀಪ ಆಗಾಗ್ಗೆ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿದ್ದ ಕಾಡುಕೋಣಗೆ 4 ಗಂಟೆ ಸುಮಾರಿಗೆ ಅರಿವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿಯಲಾಯಿತು. ವೈದ್ಯರಾದ ಡಾ. ರಮೇಶ್ ತಂಡ ಹಾಗೂ 100ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಮಳೆಯ ನಡುವೆಯೇ ಕಾರ್ಯಾಚರಣೆ ನಡೆಸಿದರು.

ಅರೇನೂರು ಸಮೀಪ ಸೆರೆ ಹಿಡಿದ ಕಾಡುಕೋಣವನ್ನು ಸ್ಥಳಾಂತರಿಸಿದ ಅರಣ್ಯ ಸಿಬ್ಬಂದಿ: 

ಕೊಪ್ಪ ಅರಣ್ಯ ವಿಭಾಗದಲ್ಲಿ ಶುಕ್ರವಾರ ನಡೆದ ಕಾರ್ಯಾಚರಣೆಯಲ್ಲಿ ಕಾಡುಕೋಣಕ್ಕೆ ಅರವಳಿಕೆ ನೀಡಲಾಗಿತ್ತು. ಆದರೆ, ಭಾರಿ ತೂಕದ ಕಾಡುಕೋಣವನ್ನು ಇಳಿಜಾರು ಪ್ರದೇಶದಿಂದ ರಸ್ತೆಗೆ ಸಾಗಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅದಕ್ಕೆ ಪ್ರಜ್ಞೆ ಬರುವ ಚುಚ್ಚು ಮದ್ದು ನೀಡಿ ಕಾಡಿಗೆ ಬಿಡಲಾಗಿತ್ತು. ಇದಕ್ಕೆ ಪರಿಸರಾಸಕ್ತರು ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಶನಿವಾರ ಮತ್ತೊಂದು ಕಾಡುಕೋಣವನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಳೆ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆ 6 ಜನ ದ್ವಿಚಕ್ರ ವಾಹನ ಕಳ್ಳರ ಬಂಧನಐನಾಪುರದಲ್ಲಿ ೧೧೦ ಕೆವಿ ಸ್ಟೇಶನ್ ನಿರ್ಮಾಣಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿಕೆಕ್ರೀಡಾ ಚಟುವಟಿಕೆಗಳಿಂದ ಜಿಲ್ಲೆಗೆ ಹೊಸ ಔಟ್‌ಲುಕ್ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅಭಿಮತಸಿಐಡಿ ತನಿಖೆಯಿಂದ,  ಶಿವಂ ಅಸೋಸಿಯೇಟ್ಸ್ ಹಗರಣ  ವಂಚನೆ ಸ್ಪಷ್ಟ ಮಾಹಿತಿ ; ಸಚಿವ ಸತೀಶ್‌ ಜಾರಕಿಹೊಳಿಕಾರ್ಯಕರ್ತರಲ್ಲಿ ವ್ಯಕ್ತಿತ್ವ, ಶಿಸ್ತು ರೂಪಿಸುವಲ್ಲಿ ಪ್ರಶಿಕ್ಷಣವರ್ಗ ಸಹಕಾರಿ :ಜಗದೀಶ ಶೆಟ್ಟರಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಹೊಸ ಪಠ್ಯ ಪುಸ್ತಕಗಳ ವಿತರಣೆಗೆ ಸಕಲ ಸಿದ್ಧತೆ - ಬಿಇಓ ಬಸಣ್ಣವರನೀಟ್‌ ರದ್ದತಿಗೆ ನೊಂದು ಬೆಂಗಳೂರಿಗ ಸೇರಿ 4 ವಿದ್ಯಾರ್ಥಿಗಳು ಸಾವಿಗೆ ಶರಣು!ಕೊಳವೆಬಾವಿ ದುರಂತ: ಮೊಮ್ಮಗನ ರಕ್ಷಣೆಗೆ ಹೋದ ಅಜ್ಜ ಸಾವುಭಾರಿ ಗಾತ್ರದ ಕಾಡುಕೋಣ ಸೆರೆಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ