LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಮಂಗಳಯಾನ ಕಕ್ಷೆಗೆ ತಲುಪಿ 10 ವರ್ಷ; ನೆಹರು ತಾರಾಲಯದಲ್ಲಿ ಪ್ರದರ್ಶನ !

ಬೆಂಗಳೂರು, ಸೆ.30: ಮಂಗಳನ ರಹಸ್ಯವನ್ನು ಬೇಧಿಸಲು ರೂಪಿಸಿದ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಮಾರ್ಸ್​ ಆರ್ಬಿಟರ್​ ಅನ್ನು ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ಜೀವ ತಳೆದಿತ್ತು. 2013ರ ನವೆಂಬರ್​ 5 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಪಿಎಸ್​ಎಲ್​ವಿ ರಾಕೆಟ್​ ಮೂಲಕ ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು. 2014 ರ ಸೆಪ್ಟೆಂಬರ್​ 24 ರಂದು ಅದು ಮಂಗಳನ ಕಕ್ಷೆ ಸೇರಿತ್ತು.

ಮೊದಲು ಈ ಉಪಗ್ರಹವನ್ನು 6 ತಿಂಗಳ ಅವಧಿಗೆ ಕಾರ್ಯಾಚರಣೆ ನಡೆಸುವ ಗುರಿ ಹೊಂದಲಾಗಿತ್ತು. ಬಳಿಕ ಅದು 8 ವರ್ಷಗಳ ಕಾಲ ಮಂಗಳನ ಕಕ್ಷೆ ಸುತ್ತಿ ಹಲವು ಸಂಶೋಧನೆ ನಡೆಸಿದೆ. ಜೊತೆಗೆ ಮಂಗಳ ಗ್ರಹದ ವಾತಾವರಣ, ಅದರ ಮೇಲ್ಮೈ ಲಕ್ಷಣ, ಅಲ್ಲಿರಬಹುದಾದ ಸೂಕ್ಷ್ಮ ಜೀವಕಣಗಳ ಅಧ್ಯಯನ ಸೇರಿದಂತೆ ಮತ್ತಿತರ ಮಹತ್ತರ ಮಾಹಿತಿಯನ್ನು ಕಲೆ ಹಾಕಿದೆ. ಈ ಮಹತ್ವದ ಗ್ರಹ ಕಕ್ಷೆ ಸೇರಿ 10 ವರ್ಷ ಕಳೆದಿದ್ದು, ಈ ಸುಧಿನವನ್ನ ವಿಜ್ಞಾನಿಗಳು ಸಂಭ್ರಮಿಸುತ್ತಿದ್ದಾರೆ.

ಜಗತ್ತೇ ಭಾರತದತ್ತ ತಿರುಗಿ ನೋಡಿದ ಕ್ಷಣಕ್ಕೆ 10 ವರ್ಷ ತುಂಬಿದೆ. ಮೊದಲ ಪ್ರಯತ್ನದಲ್ಲೇ ಮಂಗಳಯಾನ ಯಶಸ್ವಿಗೊಳಿಸಿದ್ದ ಭಾರತದ ಹಿರಿಮೆಯನ್ನ ಮಕ್ಕಳಿಗೆ ತಿಳಿಸುವ ಸಲುವಾಗಿ ನೆಹರು ತಾರಾಲಯದಲ್ಲಿ ನಿನ್ನೆ ವಿಶೇಷ ಮಾಡೆಲ್ ಪ್ರದರ್ಶನ ಏರ್ಪಡಿಸಲಾಗಿತ್ತು. ಅದರಲ್ಲಿ ಮಂಗಳಯಾನದ ಉಡಾಯನ ನೌಕೆ ಹಾಗೂ ಉಪಗ್ರಹದ ಮಾಡೆಲ್ ಪ್ರದರ್ಶನಕ್ಕೆ ಇಡುವ ಮೂಲಕ ಐತಿಹಾಸಿಕ ಕ್ಷಣವನ್ನು ಹೆಮ್ಮೆಯಿಂದ ನೆಹರು ತಾರಾಲಯ ಆಚರಿಸುತ್ತಿದ್ದು, ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮಂಗಳಯಾನದ ಬಗ್ಗೆ ಮಾಹಿತಿ ನೀಡಲಾಯಿತು.

ಇನ್ನು, ಮಂಗಳಯಾನ ಮಾಡೆಲ್ ಗಳನ್ನ ನೋಡಿದ ಜನರು ಸಂತೋಷ ಪಟ್ರು.‌ ಮಂಗಳಯಾನ ಭಾರತದ ಹೆಮ್ಮೆ.‌ ಆ ಹೆಮ್ಮೆಯನ್ನ ಇಂದಿಗೂ ನಾವು ಸಂಭ್ರಮಿಸುತ್ತಿದ್ದೇವೆ. ಅಲ್ಲದೇ ಕಡಿಮೆ ವೆಚ್ಚದಲ್ಲಿ ಮಂಗಳಯಾನವನ್ನ ಉಡಾವಣೆ ಮಾಡಲಾಗಿತ್ತು. ಈ ಕುರಿತಾಗಿ ಇಂದು ಮಾಡೆಲ್ ಗಳ ಪ್ರದರ್ಶನವನ್ನ ನೆಹರು ತಾರಾಲಯದಲ್ಲಿ ಇಟ್ಟಿರುವುದು ತುಂಬ ಖುಷಿಯಾಗುತ್ತಿದೆ. ಅಲ್ಲದೇ ಮಕ್ಕಳಿಂದ ದೊಡ್ಡವರವರೆಗೂ ಎಲ್ಲವನ್ನೂ ತಿಳಿದುಕೊಳ್ಳುತ್ತಿದ್ದೇವೆ ಎಂದು ಸಿಲಿಕಾನ್ ಮಂದಿ ಖುಷಿಪಟ್ರು.

ಒಟ್ನಲ್ಲಿ, ಮಂಗಳಯಾನ ಕಕ್ಷೆ ತಲುಪಿ 10 ವರ್ಷ ಕಳೆದಿದ್ರೂ, ಆ ಸಂಭ್ರಮ ಇಂದಿಗೂ ಇದೆ. ಜನರು ಮಂಗಳಯಾನದ ಬಗ್ಗೆ ತಿಳಿದುಕೊಂಡು ಹೆಮ್ಮೆ ಪಟ್ಟಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್