Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭಕ್ತಿಭಾವದೊಂದಿಗೆ ಶ್ರೀ ಗ್ರಾಮದೇವತೆ(ದ್ಯಾಮವ್ವದೇವಿ) ಗವಿ ಪ್ರವೇಶ

ತಾಳಿಕೋಟೆ,ಜು,೨೨ : ಪಟ್ಟಣದಲ್ಲಿ ೫ ದಿನಗಳ ಕಾಲ ಸಂಭ್ರಮದಿಂದ ನಡೆದ ಆರಾಧ್ಯ ದೇವಿ ಶ್ರೀ ಗ್ರಾಮದೇವತೆ(ದ್ಯಾಮವ್ವದೇವಿ) ಜಾತ್ರೆಯು ರಾಜವಾಡೆಯ ಪಾದಗಟ್ಟೆಯಿಂದ ಶ್ರೀ ದೇವಿ ಮಂದಿರದ ವರೆಗೆ ಶ್ರೀ ಗ್ರಾಮದೇವಿಯನ್ನು ಭವ್ಯ ರಥದಲ್ಲಿ ಕೂಡಿಸಿ ಮೇರವಣಿಗೆಯೊಂದಿಗೆ ಗವಿ ಪ್ರವೆಶ ಕಾರ್ಯಕ್ರಮವು ಮಂಗಳವಾರರಂದು ಸಾಯಂಕಾಲ ನಡೆಯಿತು.
ಮೇರವಣಿಗೆಯ ಯುದ್ದಕ್ಕೂ ಡೋಳ್ಳಿ ವಾಧ್ಯ, ಯುವಕರಿಂದ ಕೋಲಾಟ, ವಿವಿಧ ವಾಧ್ಯಮೇಳಗಳೊಂದಿಗೆ ನಡೆಯಿತ್ತಲ್ಲದೇ ದಾರಿಯುದ್ದಕ್ಕೂ ಭಕ್ತಾಧಿಗಳು ತಮ್ಮ ತಮ್ಮ ಮನೆಯ ಮುಂದೆ ರಸ್ತೆಯನ್ನು ನೀರಿನಿಂದ ತೊಳೆದು ರಂಗೋಲಿ ಬಿಡಿಸಿ ಎಲ್ಲ ಕೋಮಿನ ಜನರು ಪಾಲ್ಗೊಂಡು ಶ್ರೀ ಗ್ರಾಮದೇವಿ ಗವಿ ಪ್ರವೇಶ ಕಾರ್ಯಕ್ರಮದಲ್ಲಿ ಭಾವೈಕ್ಯತೆಗೆ ಸಾಕ್ಷೀಯಾದರು.
ಜೂಲೈ ೧೭ ರಿಂದ ಪ್ರಾರಂಭಗೊಂಡಿದ್ದ ಶ್ರೀ ಗ್ರಾಮದೇವತೆಯ ಜಾತ್ರೋತ್ಸವವು ರಾಜವಾಡೆಯ ಮೈಧಾನದಲ್ಲಿ ಶ್ರೀ ದೇವಿಯ ಪಾದಗಟ್ಟೆಯ ಮುಂದೆ ದಿನನಿತ್ಯ ಗೀಗಿಪದ, ಭಾರ ಎತ್ತುವ ಸ್ಪರ್ದೆ, ವಿವಿಧ ಮನರಂಜನೆ ಕಾರ್ಯಕ್ರಮಗಳು ಅಲ್ಲದೇ ಸಾಮಾಜಿ ನಾಟಕ, ಬೈಲಾಟ ಪ್ರದರ್ಶನಗಳು ನಡೆದವಲ್ಲದೇ ಈ ಜಾತ್ರೋತ್ಸವದಲ್ಲಿ ಮುಂಬೈ, ಪುಣೆ, ಗೋವಾ, ಬೆಂಗಳೂರ, ಹುಬ್ಬಳ್ಳಿ, ಗುಲಬರ್ಗಾ, ಅಲ್ಲದೇ ಹೊರರಾಜ್ಯದಿಂದಲೂ ಅನೇಕ ಭಕ್ತಾಧಿಗಳು ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾದರು.
ಇಂದು ಸಾಯಂಕಾಲ ನಡೆದ ಶ್ರೀ ಗ್ರಾಮದೇವತೆಯ ಗವಿ ಪ್ರವೇಶ ಕಾರ್ಯಕ್ರಮದೊಂದಿಗೆ ೫ ದಿನಗಳ ಕಾಲ ನಡೆದ ಜಾತ್ರಾ ಉತ್ಸವವು ಸಂಪನ್ನಗೊಂಡಿತು.
ಈ ಶ್ರೀ ಗ್ರಾಮದೇವತೆ ಗವಿ ಪ್ರವೇಶ ಭವ್ಯ ಮೆರವಣಿಗೆಯಲ್ಲಿ ವಿವಿಧ ರಾಜ್ಯ, ಮತ್ತು ಜಿಲ್ಲೆಗಳಿಂದ ಆಗಮಿಸಿದ ಮತ್ತು ಪಟ್ಟಣದ ಭಕ್ತಾಧಿಗಳು ಭಾಗವಹಿಸಿ ಶ್ರೀ ದೇವಿ ಕೃಪೆಗೆ ಪಾತ್ರರಾದರು.

 

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಲ್ಲೆಯಲ್ಲಿ ಮುಂಗಾರು ಕ್ಷೀಣ: ರೈತರ ನೆರವಿಗೆ ಜಿಲ್ಲಾಡಳಿತ ಸದಾ ಸಿದ್ದಒಳಮೀಸಲಾತಿ ಜಾರಿಗೊಳಿಸಿ  ಕೆಎಂಎಫ್ ನೇಮಕಾತಿ ಮಾಡಿ  : ಎಲ್ ಮಾರೆಣ್ಣ ಒತ್ತಾಯ ಅಧಿಕಾರದಿಂದ ವಿದ್ಯುತ್ ದುರ್ಬಳಕೆ, ಸಾರ್ವಜನಿಕರ ಕೆಲಸಗಳಿಗೆ ನಿರ್ಲಕ್ಷ್ಯ : ಶಂಕರ ಬಂಡೆ  ಗ್ರಾಮಸ್ಥರ ಆಕ್ರೋಶಮಾಸಿಕ ವೇತನವನ್ನು ಹೆಚ್ಚಿಸಿ : ಹೊರಗುತ್ತಿಗೆ ನೌಕರರಿಂದ ಡಿ ಎಚ್ ಓ ಗೆ  ಮನವಿ ಶಿಸ್ತು, ಶ್ರಮ ಮತ್ತು ಸಂಕಲ್ಪವೇ ಯಶಸ್ಸಿನ ಮೆಟ್ಟಿಲುಗಳು : ಜಯಪ್ರಕಾಶ್  ಜೆ.ಗುಪ್ತಾಕುರುಗೋಡು ತಾಲೂಕಿನ ವಿವಿಧ ಗ್ರಾ.ಪಂ.ಗಳಿಗೆ ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪುರೆ ಭೇಟಿ: ವಿಬಿ-ಜಿ ರಾಮ್-ಜಿ ಕಾಮಗಾರಿಗಳ ಪರಿಶೀಲನೆಪ್ರಾಣಿಜನ್ಯ ರೋಗಗಳ ತಡೆಗೆ ಜಾಗೃತಿ ಅಗತ್ಯರಾಂಪೂರ ಗ್ರಾ.ಪಂ ಸೇರಿದಂತೆ ವಿವಿಧ ಕಾಮಗಾರಿ ಪರಿಶೀಲನೆಶಿವಾಪೂರ ಗ್ರಾಮದಲ್ಲಿ ೫೦.೦೦ ಲಕ್ಷ ವೆಚ್ಚದ ಸಿ.ಸಿ. ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಜಿಲ್ಲೆಯಲ್ಲಿ ಶೇ. -೬೪ರಷ್ಟು ತೀವ್ರ ಮಳೆ ಕೊರತೆ : ಬರ ಪರಿಸ್ಥಿತಿ ವೀಕ್ಷಣೆ, ಒಂದು ವಾರದೊಳಗೆ ಸರ್ಕಾರಕ್ಕೆ ವರದಿ : ಡಿ ಸಿ ಕವಿತಾ ಎಸ್ ಮನ್ನಿಕೇರಿ ಹೇಳಿಕೆ