ಇಂಡಿ: ವಿದ್ಯುತ ಮೇನ್ ಲೈನ್ ತಂತಿ ಹರಿದು ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡು ಸುಮರು ೪ ಎಕರೆ ಕಬ್ಬಿನ ಗದ್ದೆ ಸುಟ್ಟ ಘಟನೆ ತಾಲೂಕಿನ ತೆನೆಹಳ್ಳಿ ಗ್ರಾಮದಲ್ಲಿ ಬುಧವಾರದಂದು ಬೆಳಿಗ್ಗೆ ೯:೦೦ ಗಂಟೆಗೆ ಸಂಭವಿಸಿದೆ.
ಗ್ರಾಮದ ನಜೀರ ಕುರೇಶಿ ಎಂಬ ರೈತನಿಗೆ ಸೇರಿದ ಕಬ್ಬಿನ ಗದ್ದೆ ವಿದ್ಯುತ ಮೇನ್ ಲೈನ್ ತಂತಿ ಹರಿದು ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ. ರೈತನ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು ಇದರಿಂದ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಸ್ಥಳಕ್ಕೆ ಸುದ್ದಿ ತಿಳಿದ ಆಗ್ನಿ ಶಾಮಕ ಸಿಬ್ಬಂದಿಗಳಾದ ಠಾಣಾಧಿಕಾರಿ ಭೀಮಾಶಂಕರ ಮಾದರ, ಧರೇಪ್ಪ ಪೂಜಾರಿ, ಮಲ್ಲಿಕಾರ್ಜುನ ಗೊಟ್ಯಾಳ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ಹರಸಾಹಸ ಪಟ್ಟು ನಂದಿಸುವಲ್ಲಿ ಸಫಲರಾಗಿದ್ದಾರೆ.
ಘಟನಾ ಸ್ಥಳಕ್ಕೆ ಇಂಡಿ ಹೆಸ್ಕಾಂ ಎಇಇ ಎಸ್.ಆರ್.ಮೆಂಡೆಗಾರ ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಇಂಡಿ ಗ್ರಾಮಿಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.