ಕಾಗವಾಡ:ರಾಷ್ಟ್ರದ ವಿಕಾಸಕ್ಕೆ ಶಿಕಣವೇ ಮುಖ್ಯ,ಜಗತ್ತಿನಲ್ಲಿ ಜ್ಞಾನಕ್ಕೆ ಇರುವಷ್ಟು ಶ್ರೇಷ್ಠತೆ ಮತ್ತು ಗೌರವ ಮತ್ಯಾವುದಕ್ಕೂ ಇಲ್ಲ ,ಜ್ಞಾನವೊಂದು ಪ್ರವಿತ್ರ ವಸ್ತು ಎಂದು ವಿಶ್ವಶಾಂತಿ ಯಳಂದೂರಿನ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಹೇಳಿದರು
ಅವರು ದಿ.5 ರಂದು ಶನಿವಾರ ತಾಲ್ಲೂಕಿನ ಐನಾಪೂರ ಪಟ್ಟಣದ ಸಿದ್ದೇಶ್ವರ ಸಮುದಾಯ ಭವನದಲ್ಲಿ ಕಾಗವಾಡ ತಾಲ್ಲೂಕಾ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ದಿವ್ಯ ಸಾನಿಧ್ಯ ವಹಸಿ ಆಶೀರ್ವಚನ ನೀಡುತ್ತಾ,ತಾಯಿ ಮೊದಲು ಗುರು ಆ ಮಾತೆ ವ್ಯಕಿತ್ವವನ್ನು ರೂಪಿಸುತ್ತಾಳೆ ಯಾರಾದರೂ ಉನ್ನತ ಸ್ಥಾನಕ್ಜೇರಿದ್ದಾದರೆ ಅಲ್ಲಿ ತಾಯಿಯ ಸ್ಥಾನ ಬಹಳ ದೊಡ್ಡದಿದೆ.ಅದೇ ರೀತಿ ಶಿಕ್ಷಕರ ಕರ್ತವ್ಯವು ಶ್ರೇಷ್ಠವಾಗಿದ್ದು,ಮಕ್ಕಳಿಗೆ ಜ್ಞಾನಾರ್ಜನೆ ನೀಡುವದರ ಜೊತೆಗೆ ಸಮಾಜದ ರಕ್ಷಕನಾಗಿದ್ದಾನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ತಹಶಿಲ್ದಾರ ರವೀಂದ್ರ ಹಾದಿಮನಿ ಮಾತನಾಡಿ,ಶಿಕ್ಷಕ ವೃತ್ತಿ ಎಲ್ಲ ಕ್ಷೇತ್ರಕ್ಕಿಂತ ಪವಿತ್ರ ಕ್ಷೇತ್ರವಾಗಿದ್ದು,ಆ ವೃತ್ತಿಯು ತನ್ನ ಸಂಪೂರ್ಣ ಜ್ಞಾನಾರ್ಜನೆಯನ್ನು ಮಕ್ಕಳಿಗೆ ಧಾರೆಯೆರೆದು ಅವರ ಉನ್ನತಮಟ್ಟಕ್ಕೆರಲು ಶ್ರಮಿಸುತ್ತಾನೆ ಎಂದರು.
ಈ ವೇಳೆ ಸಿಡಿಪಿಒ ಸಂಜಯಕುಮಾರ ಸದಲಗೆ, ಗ್ರೇಡ ೨ ತಹಶಿಲ್ದಾರ ರಶ್ಮಿ ಜಕಾತಿ,ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ,ಪಿಎಸ್ಐ ರಾಘವೇಂದ್ರ ಖೋತ,ಮುಖಂಡರಾದ ಪ್ರವೀಣ ಗಾಣಿಗೇರ,ತಮ್ಮಣ್ಣಾ ಪಾರಶೆಟ್ಟಿ,ಪಪಂ ಅಧ್ಯಕ್ಷರಾದ ಲಕ್ಷ್ಮಿ ಅಡಿಶೇರಿ,ಪ್ರಾಥಮಿಕ ಶಾಲಾ ಶಿಕ್ಷಕ ಸಂಘ ಅಧ್ಯಕ್ಷರಾದ ಕುಮಾರ ಗಾಣಿಗೇರ,ನೌಕರರ ಸಂಘದ ಅಧ್ಯಕ್ಷರಾದ ಎಸ್ ಎಸ್ ಭಾವಿ,ಗೌಡಪ್ಪ ಸಡ್ಡಿ,ಜಿ.ಎಮ್ ಸಂಕಪಾಳ,ಸುರೇಶ ಅಡಿಸೇರಿ ಹಾಜರಿದ್ದರು.
ಪ್ರಾಸ್ತಾವಿಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಿಗರಾಮಯ್ಯ ಮಾತನಾಡಿದರು.ಪಾಂಡುರಂಗ ಮಧಭಾವಿ ಸ್ವಾಗತಿಸಿದರು, ಭರತ ಬಿಲವಡಿ,ಶಿವಗೌಡ ಚೌಗಲಾ ನಿರೂಪಿಸಿದರು.ನೂಡಲ್ ಅಧಿಕಾರಿ ಶ್ರೀಶೈಲ ಮಾಳಿ ವಂದಿಸಿದರು.
ಪೊಟೋ ಶಿರ್ಷಿಕೆ:ಐನಾಪುರದಲ್ಲಿ ಕಾಗವಾಡ ತಾಲ್ಲೂಕಾಮಟ್ಟದ ಶಿಕ್ಷಕ ದಿನಾಚರಣೆ ಉದ್ಘಾಟಿಸುತ್ತಿರುವಾಗ ಶಾಂತ ಮಲ್ಲಿಕಾರ್ಜುನ ಶ್ರೀಗಳು,ಬಿಇಒ ಚನ್ನಿಗರಾಮಯ್ಯ,ತಹಶಿಲ್ದಾರ ರವೀಂದ್ರ ಹಾದಿಮನಿ,ತಾಪಂ ಕಾರ್ಯನಿರ್ವಾಹಕ ವೀರಣ್ಣ ವಾಲಿ,ಪ್ರವೀಣ ಗಾಣಿಗೇರ,ಲಕ್ಷ್ಮಿಬಾಯಿ ಅಡಿಶೇರಿ ಹಾಗೂ ಇತರರನ್ನು ಕಾಣಬಹುದು