LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ನಿರ್ದೇಶಕ ಸಾಯಿಪ್ರಕಾಶ್  105ನೇ ಚಿತ್ರ ಸೆಪ್ಟೆಂಬರ್ 10 ಆತ್ಮಹತ್ಯೆ ತಡೆವ ಕಥೆ 



     ಜೀವನದಲ್ಲಿ ಎದುರಾಗುವಂಥ ಹಲವಾರು  ಸಮಸ್ಯೆಗಳಿಗೆ  ಆತ್ಮಹತ್ಯೆ ಒಂದೇ ಪರಿಹಾರವಲ್ಲ  ಎಂಬ ಉತ್ತಮ ಸಂದೇಶ ಇಟ್ಟುಕೊಂಡು ಶತ ಸಿನಿಮಾಗಳ ಸರದಾರ ಸಾಯಿ ಪ್ರಕಾಶ್ ಅವರು 'ಸೆಪ್ಟೆಂಬರ್ 10' ಎಂಬ ಚಿತ್ರವನ್ನು  ನಿರ್ದೇಶನ ಮಾಡಿದ್ದಾರೆ.

     ಶ್ರೀದೇವಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ರಾಜಮ್ಮ ಸಾಯಿಪ್ರಕಾಶ್ ಅವರು ನಿರ್ಮಾಣ ಮಾಡಿರುವ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಈ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿರುವ, ಕೋವಿಡ್ ಸಮಯದಲ್ಲಿ ಲಕ್ಷಾಂತರ ಜನರಿಗೆ ಸಹಾಯ ಮಾಡಿದ ಡಾ.ಎಸ್. ರಾಜು ಅವರು ಈ  ಚಿತ್ರದ ಕಂಟೆಂಟ್ ಆಧರಿಸಿ ಮಾಡಿರುವ ತುಣುಕುಗಳು ಹಾಗೂ ಮೇಕಿಂಗ್ ವಿಡಿಯೋ ಟೀಸರ್ಗೆ ಚಾಲನೆ ನೀಡಿದರು.

  ಬಿಬಿಎಂಪಿ ಮಾಜಿ ಸದಸ್ಯರೂ ಆದ ಡಾ.ಎಸ್. ರಾಜು ಅವರು ಚಿತ್ರದ ಕಾನ್ಸೆಪ್ಟ್ ಹಾಗೂ ಅದರಲ್ಲಿರುವ ಮೆಸೇಜ್ ಎಲ್ಲಾ ಜನರಿಗೂ  ತಲುಪಬೇಕೆಂಬ ಸದುದ್ದೇಶದಿಂದ ಈ ಚಿತ್ರದ  ಬಿಡುಗಡೆಗೆ ತಮ್ಮ ಸಹಕಾರ ನೀಡುತ್ತಿದ್ದಾರೆ.

      ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಸಾಯಿಪ್ರಕಾಶ್ "ಈಗಿನ‌ ಕಾಲದಲ್ಲಿ ಒಂದು ಸಿನಿಮಾ ಮಾಡುವುದೇ‌ ಕಷ್ಟ, ಮಾಡಿದರೂ ಅದನ್ನು ಜನರಿಗೆ ತಲುಪಿಸುವುದು ಇನ್ನೂ ಕಷ್ಟ. ನಾನು ೨೦೨೦ರಲ್ಲಿ 'ಸೆಪ್ಟೆಂಬರ್ 10' ಎಂಬ ಟೈಟಲ್ ಇಟ್ಟುಕೊಂಡು ಸಿನಿಮಾ ಸ್ಟಾರ್ಟ್ ಮಾಡಿದೆ. ಅಷ್ಟರಲ್ಲಿ ಕೊರೋನಾ ಬಂತು. ನಂತರ ಜನ ಬರ್ತಾರೋ ಇಲ್ವೋ ಎಂಬ ಭಯದಿಂದ ಅದನ್ನು ರಿಲೀಸ್ ಮಾಡಲೇ ಇಲ್ಲ. ಈಗಲೂ ಆ ಭಯ ಇತ್ತು. ದೊಂಬರ ಕೃಷ್ಣ ಸುರೇಶ್ ಅವರು ಡಾ.ರಾಜು ಅವರ ಬಗ್ಗೆ ಹೇಳಿದರು. ರಾಜು ಅವರು ನಾನು ವಿಜಯನಗರದಲ್ಲಿ ಮನೆ ಮಾಡಿದಾಗಿನಿಂದಲೂ ಪರಿಚಯ. ನಂತರ ಹೋಗಿ ರಾಜು ಅವರಿಗೆ ಕಥೆ ಹೇಳಿದಾಗ ತುಂಬಾ ಇಷ್ಟಪಟ್ಟರು. ಈಗಿನ‌ ಕಾಲದಲ್ಲಿ ಇಂಥ ಸಿನಿಮಾಗಳು ಹೆಚ್ಚು ಹೆಚ್ಚು ಬರಬೇಕು. ಸಿನಿಮಾ ನೋಡಿದ ಕೆಲವರಾದರೂ ತಮ್ಮ‌ಮನಸು ಬದಲಾಯಿಸಿಕೊಂಡರೆ ನಮಗದೇ ಖುಷಿಯ ವಿಚಾರ. ಇದರಲ್ಲಿ ಸೆಂಟಿಮೆಂಟ್, ಕಾಮಿಡಿ ಹೀಗೆ  ಎಲ್ಲಾ ಥರದ ಮನರಂಜನಾತ್ಮಕ ಅಂಶಗಳೂ ಚಿತ್ರದಲ್ಲಿದೆ. ಏನಾದರಾಗಲಿ ನಾನು ನಿಮ್ಮ ಜೊತೆ ಇರುತ್ತೇನೆ ಎಂದು ನಮ್ಮ‌ ಜೊತೆ ನಿಂತರು. ಅವರು ಕೊಟ್ಟ  ದೈರ್ಯದಿಂದ ರಿಲೀಸ್ ಮಾಡುತ್ತಿದ್ದೇನೆ. ಅಲ್ಲದೆ ಕರವೇ ನಾರಾಯಣಗೌಡರೂ ನಮ್ಮ ಜೊತೆ ನಿಂತಿದ್ದಾರೆ. ನಮ್ಮ ಎಲ್ಲ ಸದಸ್ಯರಿಗೂ ಈ ಸಿನಿಮಾ ನೋಡಿ ಎಂದು ಹೇಳುತ್ತೇನೆ ಎಂದಿದ್ದಾರೆ. ಜತೆಗೆ  ಆ ಶಿರಡಿ ಸಾಯಿಬಾಬಾ ಕೂಡ ನಮ್ಮ‌ಜೊತೆ ಇದ್ದಾರೆ" ಎಂದು ಹೇಳಿದರು.

    ನಂತರ ಹಿರಿಯನಟ ರಮೇಶ್ ಭಟ್  "ಸಿನಿಮಾ ಬಗ್ಗೆ ನಾನೇನೂ ಹೇಳುವಂತಿಲ್ಲ. ಆಗಲೇ ಚಿತ್ರದಲ್ಲಿರುವ ಎಲ್ಲ ವಿಚಾರಗಳನ್ನು ಬಗ್ಗೆ ಮಾತಾಡಿದ್ದಾರೆ. ನಾನು ಇದರಲ್ಲಿ ಒಬ್ಬ ಲಾಯರ್ ಪಾತ್ರ ಮಾಡಿದ್ದೇನೆ. ಸಾಯಿಪ್ರಕಾಶ್ ಅವರ ಎಲ್ಲ ಚಿತ್ರಗಳಲ್ಲಿ ನಾನಿರಬೇಕು ಎನ್ನುವುದು ಅವರಿಚ್ಚೆ. ಹಾಗಾಗಿಯೇ ನಾನಿಲ್ಲಿದ್ದೇನೆ. ನಮ್ಮಂಥ ಕಲಾವಿದರಿಗೆ ಯಾರೂ ಕರೆಯಲ್ಲ‌. ಈ ಚಿತ್ರಕ್ಕೆ ಹೆಚ್ಚಿನ ಪ್ರಚಾರ ಕೊಡಿ" ಎಂದು ಮಾಧ್ಯಮದವರಿಗೆ ಕೇಳಿಕೊಂಡರು.

     ನಟ ಗಣೇಶ ರಾವ್ ಕೇಸರ್ಕರ್  "ಕರೊನಾ ಕಾಲದಲ್ಲು ನಾನು ಹಾಗೂ ಡಾ.ರಾಜು ಸೇರಿ  ಅನೇಕ ಮೆಡಿಕಲ್ ಕ್ಯಾಂಪ್ ಮಾಡಿದ್ದೇವೆ. ಆನಂತರವೂ ರಾಜು ಅವರು ನಮ್ಮ‌ ಜೊತೆಗಿದ್ದಾರೆ. ಅಷ್ಟೊಂದು ಸಿನಿಮಾ ಮಾಡಿದರೂ ಸಾಯಿಪ್ರಕಾಶ್ ಅವರು ನಮ್ಮ ಸಿನಿಮಾ ನೋಡಿ ಎಂದು ರಿಕ್ವೆಸ್ಟ್ ಮಾಡಿಕೊಳ್ಳುವುದು ನಿಜಕ್ಕೂ ಬೇಸರದ ಸಂಗತಿ" ಎಂದರು.

    ನಟಿ ಶ್ರೀರಕ್ಷಾ "ನಾನು ಸಾಯಿಪ್ರಕಾಶ್ ಅವರ ೨-೩ ಸಿನಿಮಾಗಳಲ್ಲಿ  ನಟಿಸಿದ್ದೇನೆ. ಇದರಲ್ಲೂ ಒಂದೊಳ್ಳೆ ಪಾತ್ರ ನೀಡಿದ್ದಾರೆ" ಎಂದು ಹೇಳಿದರು. ಅವರ ಪತಿ  ಶಿವಕುಮಾರ್ ಸೇರಿದಂತೆ ಹಲವಾರು ಕಲಾವಿದರು ತಮ್ಮ ಅನುಭವಗಳನ್ನು ಹಂಚಿಕೊಂಡರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್