LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಪುಸ್ತಕ ರೂಪದಲ್ಲಿ ಡೇರ್ ಡೆವಿಲ್‌ ಮುಸ್ತಾಫಾ ಸಿನಿಮಾ


     ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕಥೆ ಆಧಾರಿತ ಸಿನಿಮಾ 'ಡೇರ್ ಡೆವಿಲ್ ಮುಸ್ತಾಫಾ'. ಕಳೆದ ವರ್ಷ ಬಿಡುಗಡೆಯಾಗಿದ್ದ ಈ ಚಿತ್ರ ಪ್ರೇಕ್ಷಕರ ಪ್ರೀತಿ ಪಡೆದಿತ್ತು. ಶಶಾಂಕ ಸೋಗಾಲ್ ನಿರ್ದೇಶನದಲ್ಲಿ ಮೂಡಿಬಂದಿದ್ದ  ಚಿತ್ರವೀಗ ಪುಸ್ತಕ ರೂಪ ಪಡೆದಿದೆ.


     'ಡೇರ್ ಡೆವಿಲ್ ಮುಸ್ತಾಫಾ' ಸಿನಿಮಾ ಒಂದು ವರ್ಷ ಪೂರೈಸಿದೆ. ಈ ಹಿನ್ನೆಲೆ ನಿರ್ದೇಶಕ ಶಶಾಂಕ್ ಸೋಗಾಲ್ ಚಿತ್ರಕಥೆ ಹಾಗೂ ಆಯ್ದ ವಿಮರ್ಶೆಗಳನ್ನು ಪುಸ್ತಕ ರೂಪಕ್ಕೆ ಇಳಿಸಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನ ಸುಚಿತ್ರ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಿರ್ದೇಶಕಿ ಕಂ ನಟಿ ಸಿಂಧು ಎಸ್ ಮೂರ್ತಿ, ನಿರ್ದೇಶಕರಾದ ಅನೂಪ್ ಭಂಡಾರಿ, ನಿತಿನ್ ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.


     ಕನ್ನಡದಲ್ಲಿ ಸಿನಿಮಾ ಕುರಿತ ಕೃತಿಗಳು ಕಡಿಮೆ. ಅದರಲ್ಲಿಯೂ ಕೆಲವೇ ಕೆಲವು ಚಿತ್ರಕಥೆಯ ಪುಸ್ತಕಗಳಿವೆ. ಆ ಸಾಲಿಗೀಗ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ ಕೂಡ ಸೇರ್ಪಡೆಯಾಗಿದೆ. ಈ ಪುಸ್ತಕದಲ್ಲಿ  ಕಾಲೇಜು ದಿನಗಳನ್ನು ಮೆಲುಕು ಹಾಕುವಂತಹ ಸನ್ನಿವೇಶ. ಸಹಪಾಠಿಗಳ ನಡುವೆ ನಡೆಯುವ ಸಣ್ಣ ಪುಟ್ಟ ಜಗಳ, ಹಾಗು ಧರ್ಮಕ್ಕೂ ಮಿಗಿಲಾದದ್ದು


ಫ್ರೆಂಡ್ ಶಿಪ್ ಎಂಬ ಸಾರಾಂಶವನ್ನು ಸಮಾಜಕ್ಕೆ ಸಾರುವಂತಹ ವಿಷಯದ ಜೊತೆಗೆ ಸಿನಿಮಾ ಆಸಕ್ತರಿಗೆ ಪಠ್ಯವಾಗಬಲ್ಲ ಪುಸ್ತಕ ಅಂದರು ತಪ್ಪಿಲ್ಲ. ಒಂದು ಸಣ್ಣ ಕಥೆ ಎತ್ತಿಕೊಂಡು ಸ್ಕ್ರೀನ್ ಪ್ಲೇ, ಕಥೆ ಡೈಲಾಗ್ ಬರೆದು ದೃಶ್ಯ ರೂಪಕ್ಕೆ ಹೇಗೆ ಇಳಿಸಲಾಯಿತು.? ಸಣ್ಣ ಕಥೆ ಚಿತ್ರ ಕಥೆ ಆಗಿದ್ದೇಗೆ? ಕಥೆ ಸಿನಿಮಾವಾಗಿದ್ದೇಗೆ? ಎಂಬ ವಿಷಯಗಳು ಈ  ಪುಸ್ತಕ ಓದಿದರೆ ತಿಳಿಯುತ್ತದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್