ರಾಯಬಾಗ:
ಸೈಕಲ್ ಸವಾರಿಯಿಂದ ಉತ್ತಮ ಆರೋಗ್ಯ ಪಡೆದುಕೊಳ್ಳಲು ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಬೆಳಗಾವಿ ಕೆಎಂಎಫ್ ನಿರ್ದೇಶಕ, ವಿಧಾನಪರಿಷತ್ ಮಾಜಿ ಸದಸ್ಯ ವಿವೇಕರಾವ ಪಾಟೀಲ ಹೇಳಿದರು,
ಭಾನುವಾರ ತಾಲೂಕಿನ ಬೆಕ್ಕೇರಿ ಗ್ರಾಮದಲ್ಲಿ ಲಕ್ಕವ್ವದೇವಿ ಜಾತ್ರಾಮಹೋತ್ಸವ ಅಂಗವಾಗಿ ರಾಯಬಾಗ ಸೈಕ್ಲಿಂಗ್ ಕ್ಲಬ್ ಹಾಗೂ ಬಾಗಿ ಸೋಷಿಯಲ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸೈಕ್ಲೋಥಾನ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ನಿತ್ಯದ ಕಾರ್ಯಚಟುವಟಿಕೆಯಲ್ಲಿ ಸೈಕಲ್ ಬಳಕೆ ಮಾಡುವುದ ಉತ್ತಮ. ಇಂದಿನ ಯುವ ಜನಾಂಗ ಮತ್ತೆ ಸೈಕ್ಲಿಂಗ್ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸೈಕ್ಲೋಥಾನನಲ್ಲಿ 50 ಕ್ಕೂ ಹೆಚ್ಚು ಸೈಕಲ್ ಪಟುಗಳು ಭಾಗವಹಿಸಿದ್ದರು. ಈ ಸೈಕ್ಲೋಥಾನವು ಬೆಕ್ಕೇರಿ ಗ್ರಾಮದ ಲಕ್ಕವ್ವದೇವಿ ದೇವಸ್ಥಾನದ ಮೂಲಕ ಪ್ರಾರಂಭವಾಗಿ ರಾಯಬಾಗ ಪಟ್ಟಣದಾದ್ಯಂತ ಸಂಚರಿಸಿ ಮತ್ತೆ ಬೆಕ್ಕೇರಿ ಗ್ರಾಮದ ಲಕ್ಕವ್ವದೇವಿಯ ದೇವಸ್ಥಾನದಕ್ಕೆ ಬಂದು ತಲುಪಿತು. ಸೈಕ್ಲೋಥಾನದಲ್ಲಿ ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ವೃದ್ಧರು ಅತ್ಯಂತ ಉತ್ಸಾಹದಿಂದ ಭಾಗಿಯಾಗಿದ್ದರು. ಸೈಕ್ಲೋಥಾನಲ್ಲಿ ಭಾಗವಹಿಸಿದವರಿಗೆ ಮೆಡಲ್ಸ್ ಹಾಗೂ ಪ್ರಮಾಣ ಪತ್ರವನ್ನು ನೀಡಲಾಯಿತು.
ಬಾಗಿ ಸೋಷಿಯಲ್ ಕ್ಲಬ್ ಅಧ್ಯಕ್ಷ ರಾಜು ಅಳಾಜ, ವಿಶ್ವನಾಥ ಅಳಾಜ, ಹನುಮಂತ ಟಕ್ಕನವರ, ಜಿತೇಂದ್ರ ಶೆಟ್ಟಿ, ಬಸಪ್ಪ ನಾಗೌಡರ, ಬಸು ನನದಿ, ಮನೋಹರ ನಾನಾಪಗೋಳ, ಭೀಮು ನಾನಾಪಗೋಳ, ರಮೇಶ ಕುಲಕರ್ಣಿ ಹಾಗೂ ಜಿಲ್ಲೆಯ ಸೈಕಲ್ ಪಟುಗಳು ಭಾಗವಹಿಸಿದ್ದರು.