Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

ನಾಗ್ಪುರದಲ್ಲಿ ಹಿಂಸಾಚಾರ ಪರಿಸ್ಥಿತಿ ನಿಯಂತ್ರಣಕ್ಕೆ; ಕರ್ಫ್ಯೂ ಮುಂದುವರಿಕೆ

ನಾಗ್ಪುರ(ಮಹಾರಾಷ್ಟ್ರ): ಭಾರಿ ಹಿಂಸಾಚಾರ ನಡೆದ ನಾಗ್ಪುರದಲ್ಲಿ ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೂ ನಗರದ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಕರ್ಫ್ಯೂ ಮುಂದುವರೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.


ಪರಿಸ್ಥಿತಿ ಪರಿಶೀಲಿಸಿದ ಬಳಿಕ ಮಾಹಿತಿ ನೀಡಿದ ಪೊಲೀಸ್​ ಕಮಿಷನರ್​ ರವೀಂದರ್​ ಕುಮಾರ್​ ಸಿಂಗಲ್​, "ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಗೆ 2,000 ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿದೆ. ಅದೇ ರೀತಿ, ಡಿಸಿಪಿ​ ನೇತೃತ್ವ ತಂಡದಲ್ಲಿ ತ್ವರಿತ ಪ್ರತಿಕ್ರಿಯ ತಂಡ (ಕ್ಯೂಆರ್​ಟಿ) ಮತ್ತು ಸಂಘರ್ಷ ನಿಯಂತ್ರಣ ಪೊಲೀಸರು (ಆರ್​ಸಿಪಿ) ಗಸ್ತು ನಡೆಸುತ್ತಿದ್ದಾರೆ" ಎಂದರು.


ಸೋಮವಾರ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಔರಂಗಜೇಬನ ಸಮಾಧಿ ತೆರವಿಗೆ ಆಗ್ರಹ ವಿಚಾರವಾಗಿ ಉಂಟಾದ ಪ್ರತಿಭಟನೆ ವೇಳೆ ಸಮುದಾಯವೊಂದರ ಪವಿತ್ರ ಧಾರ್ಮಿಕ ಗ್ರಂಥವನ್ನು ಸುಟ್ಟು ಹಾಕಲಾಗಿದೆ ಎಂಬ ಗಾಳಿ ಸುದ್ದಿ, ಸಂಘರ್ಷಕ್ಕೆ ಕಾರಣವಾಗಿತ್ತು. ನಾಗ್ಪುರದ ಮಹಲ್ ಪ್ರದೇಶದ ಚಿಟ್ನಿಸ್ ಪಾರ್ಕ್‌ನಲ್ಲಿ ಹಿಂಸಾಚಾರ ಭುಗಿಲೆದ್ದು, 34 ಪೊಲೀಸರು ಗಾಯಗೊಂಡಿದ್ದರು.


ಪರಿಸ್ಥಿತಿಯನ್ನು ಹತೋಟಿಗೆ ತರುವ ಉದ್ದೇಶದಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಜನರು ಮತ್ತು ವಾಹನಗಳ ಸಂಚಾರ ನಿರ್ಬಂಧಿಸಿ ಕರ್ಫ್ಯೂ ವಿಧಿಸಲಾಗಿದೆ. ಕೊತ್ವಾಲಿ, ಗಣೇಶ್‌ಪೇತ್, ತೆಹಸಿಲ್, ಲಕಡ್‌ಗಂಜ್, ಪಚ್‌ಪೋಲಿ, ಶಾಂತ್ ನಗರ, ಸಕರ್ದಾರ, ನಂದನ್‌ವನ್, ಇಮಾಂಬದ, ಯಶೋಧರ ನಗರ ಮತ್ತು ಕಪಿಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶಗಳಲ್ಲಿ ಕರ್ಪ್ಯೂ ಮುಂದುವರೆದಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಆಯೋಜನೆ: ಸಚಿವ ಸಂತೋಷ ಎಸ್. ಲಾಡ್ಸಮಾಜದ ಮುಖ್ಯ ವಾಹಿನಿಗೆ ವಿಕಲ ಚೇತನರು ಮುಂದೆ ಬರಬೇಕು : ಬಾಲಚಂದ್ರ ಜಾರಕಿಹೊಳಿಶ್ರೀ ಸಾಯಿ ಕಾಲೇಜಿನ ಶಿಬಿರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಕನ್ನಡ ಕಟ್ಟುವಲ್ಲಿ ಧಾರವಾಡದ ಧುರೀಣರ ಕೊಡುಗೆ ಅಪಾರ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್ವಿಧಾನ ಪರಿಷತ್ ಸದಸ್ಯ  ಸ್ಥಾನಕ್ಕೆ ಐದನೇ ಬಾರಿ ಆಯ್ಕೆಯಾದ ಶಶೀಲ್. ಜಿ. ನಮೋಶಿ ಅವರಿಗೆ ಹೊಸಪೇಟೆ ಯಲ್ಲಿ ಅದ್ಧೂರಿ ಸ್ವಾಗತ*ಬಿಜೆಪಿ ಮೋರ್ಚಾ ಪದಾಧಿಕಾರಿಗಳ ಮಹತ್ವದ ಸಭೆ*ಮಹಿಳಾ ಸಾಹಿತಿಗಳ ನಿರ್ಲಕ್ಷ್ಯ ಖಂಡನೀಯ-ಡಾ.ಸುಜಾತಾ ಚಲವಾದಿವಿಶ್ವವಿದ್ಯಾಲಯ ಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನವಿಶ್ವವಿದ್ಯಾಲಯ ಬಾಸ್ಕೆಟ್‌ಬಾಲ್ ತಂಡಕ್ಕೆ ತನ್ವೀರ್ ಆಯ್ಕೆಶ್ರೀ ವಿಶ್ವಗುರು ಸೌಹಾರ್ದ ಸೊಸೈಟಿ  ಅಧ್ಯಕ್ಷರಾಗಿ ಅರವಿಂದ ಬಡಕುಂದ್ರಿ, ಉಪಾಧ್ಯಕ್ಷರಾಗಿ ಬರಮಪ್ಪ ನಾಗನೂರ ಆಯ್ಕೆ.ಹತ್ತು ವರ್ಷಗಳಿಂದ ಪರಿಹಾರಕ್ಕಾಗಿ ಹೋರಾಟ: 95 ರೈತರಿಗೆ ₹54 ಕೋಟಿ ರೂ. ವಿತರಣೆ