Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೆಎಮ್‌ಇಆರ್‌ಸಿ ಹಣದಿಂದ ಹರಗಿನಡೋಣಿ ಗ್ರಾಮಕ್ಕೆ ಕುಡಿಯುವ ನೀರಿನ ಕೆರೆ ನಿರ್ಮಿಸಿ

ಬಳ್ಳಾರಿ,ಮಾ.10.: ಕೆಎಮ್‌ಇಆರ್‌ಸಿ ಹಣದಿಂದ ಹರಗಿನಡೋಣಿ ಗ್ರಾಮಕ್ಕೆ ಕುಡಿಯುವ ನೀರಿನ ಕೆರೆ ನಿರ್ಮಿಸಬೇಕೆಂದು ಮತ್ತು ಇನ್ನಿತರ ಸೌಲಭ್ಯಗಳಿಗೆ ಒತ್ತಾಯಿಸಿ ಬಳ್ಳಾರಿ ನಗರದ ಗಾಂದಿಭವನದಿAದ ಬೃಹತ್ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಪ್ರತಿಭಟನಾ ಧರಣಿ ಮಾಡಿ ಸಹಾಯಕ ಆಯುಕ್ತರಿಗೆ (ಎಸಿ) ಮನವಿ ಪತ್ರ ಸಲ್ಲಿಸಲಾಯಿತು.

ಈ ಪ್ರತಿಭಟನೆಯನ್ನು ಉದ್ದೇಶಿಸಿ ಗಣಿಭಾದಿತ ಪರಿಸರ ಮತ್ತು ಜನ ಬದುಕಿನ ಪುನಃಶ್ಚೇತನ ಹೋರಾಟ ಸಮಿತಿಯ ರಾಜ್ಯ ಸಂಚಾಲಕಿ ಡಿ.ನಾಗಲಕ್ಷಿö್ಮ ಮಾತನಾಡುತ್ತಾ, “ಕಳೆದ ೨೦ ವರ್ಷದ ಹಿಂದೆ ಸುಮಾರು ೬-೭ ವರ್ಷಗಳು ಅಸಾಮಾನ್ಯ ಬೃಹತ್ ಅಕ್ರಮ ಗಣಿಗಾರಿಕೆಯಿಂದ ಬಳ್ಳಾರಿ ಜಿಲ್ಲೆ ಸೇರಿದಂತೆ ವಿಜಯನಗರ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಸುಮಾರು ೧೧ ತಾಲೂಕಿನ ಜನರ ಬದುಕು ಮೂರಾಬಟ್ಟೆ ಆಗಿದೆ. ಪರಿಸರ ಸಂಪೂರ್ಣ ವಿನಾಶವಾಗಿದೆ. ಅಕ್ರಮ ಗಣಿಗಾರಿಕೆಯಿಂದ ಗಣಿಭಾದಿತ ಪ್ರದೇಶದಲ್ಲಿ ವಿದ್ವಂಸಗೊAಡಿದ್ದ ಜನರ ಬದುಕು ಮತ್ತು ಪರಿಸರ ಪುನಶ್ಚೇತನಗೊಳಿಸಲು ರಾಜ್ಯ ಅಥವಾ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿಲ್ಲ. ಆಗ ಅಕ್ರಮ ಗಣಿಗಾರಿಕೆಯ ಬಗ್ಗೆ ಕೂಲಂಕುಶ ಸಂಶೋಧನೆ ನಡೆಸಿ ಕರ್ನಾಟಕ ಲೋಕಾಯುಕ್ತ ಸಿದ್ಧಪಡಿಸಿದ್ದ ತನಿಖಾ ವರದಿಯೊಂದಿಗೆ ಸಮಾಜ ಪರಿವರ್ತನಾ ಸಮುದಾಯದ     ಎಸ್ ಆರ್ ಹಿರೇಮಠ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಬೇಕು” ಎಂದು ಹೇಳಿದರು.

ಗಣಿಭಾದಿತ ಪರಿಸರ ಮತ್ತು ಜನ ಬದುಕಿನ ಪುನಃಶ್ಚೇತನ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಆರ್. ಸೋಮಶೇಖರ್ ಗೌಡ ಮಾತನಾಡುತ್ತಾ, “ಗಣಿಬಾಧಿತ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನಕ್ಕೆ ಸರ್ವೋಚ್ಚ ನ್ಯಾಯಾಲಯವು ಬೃಹತ್ ಕಾರ್ಯ ಯೋಜನೆಯನ್ನು ರೂಪಿಸಿ, ಹಣಕಾಸಿನ ಸ್ವತಂತ್ರ ಮೂಲವನ್ನು ಒದಗಿಸಿ ಕೊಟ್ಟಿತು. ಅದೇ ಸಿಈಪಿಎಂಐಜೆಡ್ (ಕಾಂಪ್ರಹೆನ್ಸಿವ್ ಎನ್‌ವಿರಾನ್ಮೆಂಟಲ್ ಪ್ಲಾನ್ ಫಾರ್ ಮೈನಿಂಗ್ ಇಂಪ್ಯಾಕ್ಟ್ ಝೋನ್). ಇದರ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರಕ್ಕೆ ವಹಿಸಿಕೊಟ್ಟಿತು. ಈ ಆದೇಶದ ಪ್ರಕಾರ ರಾಜ್ಯ ಸರ್ಕಾರ ಯೋಜನೆಯ ಅನುಷ್ಠಾನಕ್ಕೆ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ನಿಯಮಿತ [ಕರ್ನಾಟಕ ಮೈನಿಂಗ್ ಎನ್‌ವಿರಾನ್ಮೆಂಟ್ ರೆಸ್ಟೋರೇಶÀನ್ ಕಾರ್ಪೋರೇಶನ್ (ಕೆಎಂಇಆರ್‌ಸಿ)] ಎಂಬ ಸಂಸ್ಥೆಯನ್ನು ಸ್ಥಾಪಿಸಿದೆ. ಈ ಇಂದು ಸಂಸ್ಥೆಯ ಬಳಿಯಲ್ಲಿ ಸುಮಾರು ೩೫ ಸಾವಿರ ಕೋಟಿಗೂ ಮೀರಿ ಹಣಕಾಸು ಸಂಪನ್ಮೂಲವಿದೆ. ಇದನ್ನು ಬಳಸಿಕೊಂಡು ಕೆಎಂಇಆರ್‌ಸಿ ಸಂಸ್ಥೆಯು ಗಣಿಬಾಧಿತ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಕಾರ್ಯವನ್ನು ಜಾರಿಗೊಳಿಸುತ್ತಿದೆ. ಈ ಸಂಸ್ಥೆ ಮತ್ತು ಕರ್ನಾಟಕ ಸರ್ಕಾರ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವುದಕ್ಕೆ ಗಣಿಬಾಧಿತ ಪ್ರದೇಶಗಳ ಇಂದಿನ ಪರಿಸ್ಥಿತಿ ಸಾಕ್ಷಿಯಾಗಿವೆ.

ಬಳ್ಳಾರಿ ಜಿಲ್ಲೆ ತಾಲೂಕಿನ ಹರಗಿನಡೋಣಿ ಗ್ರಾಮವೂ ಸಹ ಇದಕ್ಕೆ ಹೊರತಾಗಿಲ್ಲ. ಹರಗಿನಡೋಣಿ ಗ್ರಾಮದ ಜನತೆಯ ಬಹುದಿನಗಳ ಬೇಡಿಕೆ ಕುಡಿಯುವ ನೀರಿಗಾಗಿ ಕೆರೆ ನಿರ್ಮಾಣವಾಗಬೇಕೆಂಬುದು ಇದೆ. ಹಾಗೆಯೇ ಗ್ರಾಮದಲ್ಲಿ ಸುಸಜ್ಜಿತ ಶಾಲೆ, ಸುಸಜ್ಜಿತ ಚರಂಡಿ ವ್ಯವಸ್ಥೆ, ರಸ್ತೆ ನಿರ್ಮಾಣ, ಗಣಿ ಕಾರ್ಮಿಕರಿಗೆ ಅರಣ್ಯ ಪರಿಸರ ರಕ್ಷಣೆಯ ಕೆಲಸ, ಮಹಿಳೆಯರಿಗೆ, ಯುವಕರಿಗೆ ಕೌಶಲ್ಯ ಆಧಾರಿತ ತರಬೇತಿ ಜೊತೆಗೆ ಉದ್ಯೋಗ ನೀಡಿ ಈ ಮೂಲಕ ಪರಿಸರ ರಕ್ಷಣೆಯೊಂದಿಗೆ ಜನರ ಬದುಕನ್ನು ಹಸನ ಮಾಡಲು ಕಾರ್ಯ ಪ್ರವೃತ್ತ ಆಗಬೇಕಿದೆ” ಎಂದರು.

ಈ ಪ್ರತಿಭಟನೆಯನ್ನು ಬೆಂಬಲಿಸಿ ಎಐಯುಟಿಯುಸಿ ರಾಜ್ಯ ಅಧ್ಯಕ್ಷರಾದ ಕೆ. ಸೋಮಶೇಖರ್ ಅವರು ಮಾತನಾಡಿದರು. ಹಾಗೂ ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷರಾದ ಎ. ದೇವದಾಸ್ ರವರು ಪ್ರತಿಭಟನಾ ಧರಣಿಯ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಗಣಿಭಾದಿತ ಪರಿಸರ ಮತ್ತು ಜನ ಬದುಕಿನ ಪುನಃಶ್ಚೇತನ ಹೋರಾಟ ಸಮಿತಿಯ ಕಾರ್ಯದರ್ಶಿ ಚಂದ್ರ ಮತ್ತು ಊರಿನ ಮುಖಂಡರಾದ ಮಹಾರುದ್ರ ಗೌಡ, ಆರ್. ಶಿವರಾಮ ರೆಡ್ಡಿ, ಡಿ. ಈರಣ್ಣ, ಬುಗ್ಗೇಶ್, ಹೆಚ್. ರಾಜನಗೌಡ್ರು, ಬಿ. ಬಸವನಗೌಡ, ಬಿ. ಹೆಚ್. ನಿಂಗಮ್ಮ, ಕೆ. ಎಂ. ವೀರಭದ್ರಯ್ಯ ಸ್ವಾಮಿ, ರಮೇಶ್ ಗೌಡ, ಹೆಚ್. ಶಿವರಾಮ ಗೌಡ, ಹೆಚ್. ಹನುಮಂತಪ್ಪ, ಎ. ಗಂಗಾಧರ, ಕೆ. ಜಂಬಯ್ಯ, ಲಕ್ಷಿö್ಮದೇವಿ, ರ‍್ರೆಮ್ಮ ಟಿ. ಎಂ., ಎಂ. ಗೀತಾ, ಬಿ. ಎನ್. ಉಮಾದೇವಿ ಮತ್ತಿರರು ಭಾಗವಹಿಸಿದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*