LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bijapur

ಅಂತರ್-ಶಾಲಾ ಕ್ರೀಡಾಕೂಟದ ಮುಕ್ತಾಯ ಸಮಾರಂಭ



ತಾಳಿಕೋಟಿ: ಸ್ಥಳೀಯ ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಗಳ ಅಂತರ್ ಶಾಲಾ ಕ್ರೀಡಾಕೂಟವು ಇತ್ತೀಚೆಗೆ ಮುಕ್ತಾಯಗೊಂಡಿತು.
    ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಘನಮಠೇಶ್ವರ ಸಿಬಿಎಸ್‌ಇ(ತಾಳಿಕೋಟಿ ಮತ್ತು ಮುದ್ದೇಬಿಹಾಳ), ಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮ ಪ್ರೌಢಶಾಲೆಗಳ ಅಂತರ್-ಶಾಲಾ ಖೋ-ಖೋ ಮತ್ತು ಕಬಡ್ಡಿ ಪಂದ್ಯಾವಳಿಗಳು ಉತ್ಸಾಹಭರಿತವಾಗಿ ಜರುಗಿದವು.
    ಒಂದೇ ಸಂಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲೆಗಳ ವಿದ್ಯಾರ್ಥಿಗಳಲ್ಲಿ ಸೌಹಾರ್ದತೆ, ತಂಡದ ಮನೋಭಾವ, ಶಿಸ್ತು ಹಾಗೂ ಕ್ರೀಡಾ ಸ್ಫೂರ್ತಿ ಬೆಳೆಸುವ ಉದ್ದೇಶದಿಂದ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ವಿವಿಧ ಪಂದ್ಯಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದರು.
   ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಆರ್. ಎಲ್. ಕೊಪ್ಪದ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ, ಸಮಯಪಾಲನೆ, ನಾಯಕತ್ವ ಗುಣ ಹಾಗೂ ತಂಡದ ಮನೋಭಾವವನ್ನು ಬೆಳೆಸುತ್ತವೆ. ಕ್ರೀಡೆ ಕೇವಲ ಗೆಲುವು-ಸೋಲಿಗೆ ಸೀಮಿತವಾಗಿರದೆ, ಜೀವನದ ಹಲವು ಮೌಲ್ಯಗಳನ್ನು ಕಲಿಸುತ್ತದೆ ಎಂದು ಹೇಳಿದರು.
  ಸಂಸ್ಥೆಯ ಅಧ್ಯಕ್ಷ ಎಸ್. ಎಂ. ಸಜ್ಜನ ಮಾತನಾಡಿ, ಪಂದ್ಯದಲ್ಲಿ ಗೆಲುವು ಸಾಧಿಸುವುದರ ಜೊತೆಗೆ ಸೋಲನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುವುದು ಹಾಗೂ ಎದುರಾಳಿಯನ್ನು ಗೌರವಿಸುವುದು ಮುಖ್ಯವಾಗಿದೆ ಎಂದರು. ಗೆಲುವು ಆತ್ಮವಿಶ್ವಾಸ ಹೆಚ್ಚಿಸಿದರೆ, ಸೋಲು ತಪ್ಪುಗಳನ್ನು ಅರಿತು ಮತ್ತಷ್ಟು ಉತ್ತಮವಾಗಿ ಗೆಲುವಿಗಾಗಿ ಪ್ರಯತ್ನಿಸಲು ಪ್ರೇರಣೆ ನೀಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು.

ವಿಜೇತ ತಂಡಗಳು: ಕಬಡ್ಡಿ ವಿಭಾಗದಲ್ಲಿ ಶ್ರೀ ಘನಮಠೇಶ್ವರ ಸಿಬಿಎಸ್‌ಇ ಮಿಣಜಗಿ ಕ್ರಾಸ್ ಶಾಲೆಯ ಚಾಲುಕ್ಯ ಹೌಸ್ ಪ್ರಥಮ ಸ್ಥಾನ ಪಡೆದುಕೊಂಡರೆ, ಕನಕ ಕನ್ನಡ ಮಾಧ್ಯಮ ಪ್ರೌಢಶಾಲೆಯ ಒಡೆಯರ್ ಹೌಸ್ ದ್ವಿತೀಯ ಸ್ಥಾನ ಗಳಿಸಿತು.
ಖೋ-ಖೋ ವಿಭಾಗದಲ್ಲಿ ಶ್ರೀ ಘನಮಠೇಶ್ವರ ಸಿಬಿಎಸ್‌ಇ ಮಿಣಜಗಿ ಕ್ರಾಸ್ ಶಾಲೆಯ ಹೊಯ್ಸಳ ಹೌಸ್ ಪ್ರಥಮ ಸ್ಥಾನ ಪಡೆದರೆ, ಕನಕ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿಜಯನಗರ ಹೌಸ್ ದ್ವಿತೀಯ ಸ್ಥಾನ ಪಡೆಯಿತು.
    ಪಂದ್ಯಾವಳಿಯ ಅಂತ್ಯದಲ್ಲಿ ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ಬಹುಮಾನಗಳನ್ನು ವಿತರಿಸಿ ಅಭಿನಂದಿಸಲಾಯಿತು.
   ಕಾರ್ಯಕ್ರಮದಲ್ಲಿ ನಿವೃತ್ತ ದೈಹಿಕ ಶಿಕ್ಷಕ ಎಸ್. ಸಿ. ಸಜ್ಜನ, ಆಡಳಿತಾಧಿಕಾರಿಗಳಾದ ವಿವೇಕಾನಂದ ಸಜ್ಜನ ಹಾಗೂ ಸಂಜನಾ ಸಜ್ಜನ, ಮುಖ್ಯಗುರು ಬಸವರಾಜ ಸಜ್ಜನ, ಸಿಬಿಎಸ್‌ಇ ಶಾಲೆಯ ಪ್ರಾಂಶುಪಾಲ ಜಯಚಂದ್ರನ್, ಕನ್ನಡ ಮಾಧ್ಯಮ ಪ್ರಾಂಶುಪಾಲರಾದ ಆರ್. ಎಸ್. ದೇಸಾಯಿ, ಬೆಸ್ಟ್ ಪಿಯು ಕಾಲೇಜಿನ ಪ್ರಾಂಶುಪಾಲ ಎಂ. ಮಾರೆಣ್ಣ, ಸಂಸ್ಥೆಯ ದೈಹಿಕ ಶಿಕ್ಷಕ ಶಿವಾನಂದ ಸುನದೊಳಿ ಸೇರಿದಂತೆ ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
   ಶಾಲೆಗಳ ಮುಖ್ಯಸ್ಥರು, ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಅಂತರ್-ಶಾಲಾ ಕ್ರೀಡಾಕೂಟ ಯಶಸ್ವಿಯಾಗಿ ಮುಕ್ತಾಯಗೊಂಡಿತು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹುಟ್ಟುಹಬ್ಬಕ್ಕೆ ಅರ್ಥಪೂರ್ಣ ಕೊಡುಗೆ: ಎರಡು ಚಿರತೆ, ಒಂದು ಸಿಂಹ ದತ್ತು ಪಡೆದ ರಾಹುಲ್ ಜಾರಕಿಹೊಳಿ!ನೈಜ ಭಾರತದ ಧ್ವನಿ ಗ್ರಾಮೀಣ ಪತ್ರಕರ್ತರು-ಸಚಿವ ಎಂ.ಬಿ. ಪಾಟೀಲಹುನಗುಂದದಲ್ಲಿ ಯಶಸ್ವಿಯಾಗಿ ಜರುಗಿದ ಗ್ರಾಮ ಆಡಳಿತಾಧಿಕಾರಿ (VAO) ನೇಮಕಾತಿ ಪರೀಕ್ಷೆಯುವಶಕ್ತಿಗೆ ಸರ್ಕಾರದ ಬಲ: ಪ್ರತಿ ಸಂಘಕ್ಕೆ ವಾರ್ಷಿಕ ₹10 ಲಕ್ಷ ಅನುದಾನ; ಕ್ರೀಡೆ, ಸಂಸ್ಕೃತಿ, ಸಾಮಾಜಿಕ ಸೇವೆ ಸೇರಿ ವಿವಿಧ ಚಟುವಟಿಕೆಗಳಿಗೆ ಅವಕಾಶಪರಿಸರ, ವನ್ಯಜೀವಿ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಲಿ : ಪಾಟೀಲರಾಯಬಾಗ: ಸರ್ಕಾರಿ ನಿವೃತ್ತ ನೌಕರರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಗ್ರಾಮ ಆಡಳಿತಾಧಿಕಾರಿ ಹುದ್ದೆ ನೇಮಕಾತಿ ಪರೀಕ್ಷೆ ಸುಸೂತ್ರಬೆನಕಟ್ಟಿ ಗ್ರಾಮದಲ್ಲಿ ಬಿಜೆಪಿಗೆ ಯುವಶಕ್ತಿಯ ಬಲ : ೩೫ ಕ್ಕೂ ಹೆಚ್ಚು ಕಾಂಗ್ರೆಸ್ ಬಿಜೆಪಿ ಸೇರ್ಪಡೆ ಬೆಳಗಾವಿ ಕನ್ನಡತನದ ನಿಲುವು: ಸಚಿವ ಸತೀಶ್ ಜಾರಕಿಹೊಳಿಗೆ ಕನ್ನಡ ಪರ ಸಂಘಟನೆಗಳಿಂದ ಸನ್ಮಾನಕರಿಸಿದ್ದೇಶ್ವರ ದೇವಸ್ಥಾನಕ್ಕೆ ಸಮುದಾಯ ಭವನ ಮಂಜೂರಾತಿಗೆ ಮನವಿ