ಚಿಕ್ಕೋಡಿ,: ವಿಜಯಪುರ- ಗೋಟೂರ ರಾಷ್ಟ್ರೀಯ ಹೆದ್ದಾರಿ ಚಿಕ್ಕೋಡಿ ಬೈಪಾಸ್ ರಸ್ತೆಯ ಭೂಸ್ವಾಧಿನ ಒಳಪಟ್ಟ ರೈತರಿಗೆ ನ್ಯಾಯಸಮ್ಮತ ಬೆಲೆ ನಿಗದಿ.ಚಿಕ್ಕೋಡಿ. ರಾಯಬಾಗ ಮತ್ತು ಹುಕ್ಕೇರಿ ತಾಲೂಕಿನ ಸಮಗ್ರ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಗುರುವಾರ ಚಿಕ್ಕೋಡಿ ಬಸವ ಸರ್ಕಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ರೈತರು ಬೃಹತ್ ಪ್ರತಿಭಟನೆ ನಡೆಸಿದರು.
ರೈತ ಸಂಘದ ಮುಖಂಡರಾದ ಚೂನಪ್ಪ ಪೂಜೇರಿ, ಶಶಿಕಾಂತ ಗೂರುಜಿ ಹಾಗೂ ಚಿಕ್ಕೋಡಿ ಚರಮೂರ್ತಿಮಠದ ಸಂಪಾದನ ಸ್ವಾಮೀಜಿ.ಜಿಂಚಣಿಯ ಸಿದ್ಧಸಂಸ್ಥಾನ ಮಠದ . ಶಿವಪ್ರಸಾದ ಸ್ವಾಮೀಜಿ ನೇತೃತ್ವದಲ್ಲಿ ಸುಮಾರು ಹತ್ತು ಸಾವಿರ ಅಧಿಕ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ರೈತರ ವಿವಿಧ ಬೇಡಿಕೆಗಳನ್ನು ರಾಜ್ಯ ಹಾಗೂ ಕೇಂದ್ರ ಸರಕಾರ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಚಿಕ್ಕೋಡಿ-ಸದಲಗಾ ಕ್ಷೇತ್ರದ ಮಹಾಲಕ್ಷ್ಮಿ ಏತ ನೀರಾವರಿ ಯೋಜನೆ. ರಾಯಬಾಗ ಕ್ಷೇತ್ರದ ಕರಗಾಂವ ಏತ ನೀರಾವರಿ ಯೋಜನೆ. ಶಿವಶಕ್ತಿ ಏತ ನೀರಾವರಿ ಯೋಜನೆ ಮತ್ತು ಹನುಮಾನ ಏತ ನೀರಾವರಿ ಯೋಜನೆ ಸರಕಾರ ಹಣ ಬಿಡುಗಡ ಮಾಡಬೇಕು. ರಾಷ್ಟ್ರೀಯ ಹೆದ್ದಾರಿಯ ಚಿಕ್ಕೋಡಿ ಬೈಪಾಸ್ ರಸ್ತೆ ನಿರ್ಮಾಣದಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಸಮ್ಮತ ಬೆಲೆ ನಿಗದಿ ಮಾಡಬೆಕು ಎಂದು ರೈತರು ಪಟ್ಟು ಹಿಡಿದರು.
ಬಸವ ಸರ್ಕಲದಲ್ಲಿ ಜಾನುವಾರ ಕಟ್ಟಿ ಪ್ರತಿಭಟನೆ: ಚಿಕ್ಕೋಡಿ. ರಾಯಬಾಗ ಮತ್ತು ಹುಕ್ಕೇರಿ ತಾಲೂಕಿನ ಸಾವಿರಾರು ರೈತರು ಎತ್ತು- ಎಮ್ಮೆಗಳೊಂದಿಗೆ ಎತ್ತಿನ ಬಂಡಿ ಜೊತೆ ಚಿಕ್ಕೋಡಿಗೆ ಆಗಮೀಸಿದರು. ಹೆದ್ದಾರಿಯ ಬಸವ ಸರ್ಕಲ್ ದಲ್ಲಿ -ಎತ್ತು- ಎಮ್ಮೆ ಕಟ್ಟಿ ಸರಕಾರದ ವಿರುದ್ಧ ರೈತರು ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಚೂನಪ್ಪ ಪೂಜೇರಿ, ಚಿಕ್ಕೋಡಿ ಹಾಗೂ ರಾಯಬಾಗ ತಾಲೂಕುಗಳ ಸಮಗ್ರ ನೀರಾವರಿ ಯೋಜನೆಯನ್ನು ಶೀಘ್ರ ಜಾರಿಗೆ ತರಬೇಕು. ಚಿಕ್ಕೋಡಿ ತಾಲೂಕಿನ ನೀರಾವರಿ ವಂಚಿತ ಪ್ರದೇಶಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಅಲ್ಲದೆ, ಚಿಕ್ಕೋಡಿ ಬೈಪಾಸ್ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಯುತ ಹಾಗೂ ಹೆಚ್ಚುವರಿ ಪರಿಹಾರವನ್ನು ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.
|
ಸರಕಾರ ರೈತರಿಗೆ 12 ಗಂಟೆ ವಿದ್ಯುತ್ ಪೂರೈಕೆ ಮಾಡಿದರೆ ರೈತರೇ ಸರಕಾರದ ಬಜೆಟ್ ಮಂಡನೆ ಮಾಡುತ್ತಾರೆ. ರೈತ ಉಳಿದರೇ ಮಾತ್ರ ಜಗತ್ತು ಉಳಿಯುತ್ತದೆ. ರೈತರನ್ನು ಕಡೆಗಣಿಸಬಾರದು. ರೈತರ ಏತ ನೀರಾವರಿ ಯೋಜನೆಗಳು ಅನುಷ್ಠಾನ ಆಗಬೇಕು. - ಶ್ರೀ ಶಿವಪ್ರಸಾದ ಸ್ವಾಮೀಜಿ ಚಿಂಚಣಿ |
ನ್ಯಾಯಯುತ ಭೂ ಪರಿಹಾರಕ್ಕೆ ಆಗ್ರಹ: ಹೆದ್ದಾರಿ ಕಾಮಗಾರಿ ಬಂದ್‌ಗೆ ರೈತರ ನಿರ್ಧಾರ:
ವಿಜಯಪುರ–ಗೋಟೂರ ರಾಷ್ಟ್ರೀಯ ಹೆದ್ದಾರಿಯ ಚಿಕ್ಕೋಡಿ ಬೈಪಾಸ್ ನಿರ್ಮಾಣಕ್ಕೆ ಭೂಸ್ವಾಧೀನಗೊಂಡ ರೈತರಿಗೆ ಬಿಡದಿ ಮಾದರಿಯಲ್ಲಿ ನ್ಯಾಯಯುತ ಭೂ ಪರಿಹಾರ ನೀಡುವವರೆಗೆ ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಎಚ್ಚರಿಕೆ ನೀಡಿದೆ. ಇದಕ್ಕೆ ಅಧಿಕಾರಿಗಳು ಸಮ್ಮತಿ ಕೊಟ್ಡಾಗ ರೈತರು ಪ್ರತಿಭಟನೆ ಹಿಂಪಡೆದರು.
ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ ಮಾತನಾಡಿ ಮುರಗುಂಡಿಯಿಂದ ಚಿಕ್ಕೋಡಿ ಹೆದ್ದಾರಿ ನಿರ್ಮಾಣ ಮಾಡಲಾಗುತ್ತದೆ. ಸರಕಾರ ನಿಗದಿ ಮಾಡಿರುವ ಬೆಲೆ ಕೊಡಲಾಗುತ್ತದೆ. ಬೈಪಾಸಗೆ ಹೆಚ್ಚಿನ ಪರಿಹಾರ ಬೇಕಾದರೇ ಜಿಲ್ಲಾಧಿಕಾರಿ ಬಳಿ ಅರ್ಜಿ ಸಲ್ಲಿಸಬೇಕು. ಸಬ್ ರಜಿಸ್ಟಾರ ನಿಗದಿ ಮಾಡಿರುವ ಬೆಲೆ ಕೊಡಲಾಗುತ್ತದೆ. ಕೇಂದ್ರ ಸರಕಾರಕ್ಕೆ ಪ್ರಸ್ತಾಪವನ್ನು ಕಳಿಸಲಾಗುತ್ತದೆ.ಹನುಮಾನ ಏತ ನೀರಾವರಿ ಡಿಪಿಆರ್ ಸರಕಾರಕ್ಕೆ ಸಲ್ಲಿಸಲಾಗುತ್ತದೆ. ಶಿವಶಿಕ್ತಿ.ಸುಲ್ತಾನಪೂರ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸರಕಾರದ ಹಂತದಲ್ಲಿದೆ ಎಂದರು.
|
ಬೆಂಗಳೂರಿನ ಬಿಡದಿಯಲ್ಲಿ 1.60 ಕೋಟಿ ಭೂ ಪರಿಹಾರ ಕೊಡಲು ಸರಕಾರ ಮುಂದಾದರು ರೈತರು ಇಂಚೂ ಭೂಮಿ ಕೊಡಲು ಸಿದ್ಧರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಚಿಕ್ಕೋಡಿ ಜಿಲ್ಲೆಯಾಗಲು ತುದಿಗಾಲಲ್ಲಿ ಇದೆ. ಇಲ್ಲಿಯ. ರೈತರಿಗೆ ಯೋಗ್ಯ ಬೆಲೆ ಸಿಗುತನಕ ಹೆದ್ದಾರಿ ಕಾಮಗಾರಿ ಬಂದ್ ಮಾಡುತ್ತೇವ. - ಶಶಿಕಾಂತ ಗೂರೂಜಿ ರೈತ ಸಂಘದ ಗೌರವ ಅಧ್ಯಕ್ಷರು. |
