LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಚಾಮಯ್ಯ ಸನ್ ಆಫ್ ರಾಮಾಚಾರಿ ಟ್ರೇಲರ್     









     'ಚಾಮಯ್ಯ ಸನ್ ಆಫ್ ರಾಮಾಚಾರಿ' ಚಿತ್ರದ ಎರಡನೇ ಪ್ರಚಾರ ಸಲುವಾಗಿಎರಡು ನಿಮಿಷದ  ಟ್ರೇಲರ್ ಬಿಡುಗಡೆ ಸಮಾರಂಭವು ಎಸ್‌ಆರ್‌ವಿ ಚಿತ್ರಮಂದಿರ ಕಿಕ್ಕಿರಿದ ಜನಸಂದಣಿಯಲ್ಲಿ

ನಡೆಯಿತು.   'ಕೋಟೆ ನಾಡಿನ ನಾಗರ ಹಾವು’ ಎಂಬ ಅಡಿಬರಹವಿದೆ. ಚಿತ್ರವನ್ನು ಜೋಳಿಗೆ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದ್ದು  ಪಲ್ಲಕ್ಕಿ ಬರವಣಿಗೆ, ನಿರ್ದೇಶನದ ಜೊತೆಗೆ ಒಂದು ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಾಧಾಕೃಷ ಪಲ್ಲಕ್ಕಿ ಬಂಡವಾಳ ಹೂಡಿದ್ದು, ಗೌತಮ್ ಪಲ್ಲಕ್ಕಿ ಮತ್ತು ವಿ.ಗೋವಿಂದರಾಜು ಸಹ ನಿರ್ಮಾಪಕರಾಗಿದ್ದಾರೆ.


     ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕರು "ಸಿನಿಮಾದ ಒಂದೆಳೆ ಸಾರಾಂಶವನ್ನು ಈಗಾಗಲೇ ಹೇಳಿದ್ದೇನೆ. ಕೆಲವು ಸನ್ನಿವೇಶದಲ್ಲಿ ಚಿತ್ರದುರ್ಗದ ಕೋಟೆಯನ್ನು ಬಳಸದೆ, ಹಿನ್ನೆಲೆಯಲ್ಲಿರುವ ಮಹಾನ್ ನಾಯಕರ ಕೋಟೆಗಳ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಹಾಗೂ ಇವರೆಲ್ಲರ ಚರಿತ್ರೆಗಳು ಸಣ್ಣದಾಗಿ ಬಂದು ಹೋಗುತ್ತವೆ.  ಜಲೀಲ್ (ಅಂಬರೀಷ್) ಮಗನಾಗಿ ಚೋಟಾ ಜಲೀಲ್ ಪೋಲೀಸ್ ಇನ್ಸ್‌ಪೆಕ್ಟರ್ ಆಗಿ ಕೊಲೆ ತನಿಖೆ ಮಾಡುವ ರೋಲ್ ನ ನಾನು ನಿಭಾಯಿಸಿದ್ದೇನೆ".

     "ಡಾ.ವಿಷ್ಣುವರ್ಧನ್ ಹುಟ್ಟುಹಬ್ದ, ಸೆಪ್ಟಂಬರ್ 18ರಂದು ತೆರೆಗೆ ತರುವ ಯೋಜನೆ ಇತ್ತು. ಆದರೆ ಈಗಾಗಲೇ 10 ಸಿನಿಮಾಗಳು ಚಿತ್ರಮಂದಿರ ಗೇಟ್‌ನಲ್ಲಿ ನಿಂತಿವೆ. ಆದಕಾರಣ ಸಿನಿಪಂಡಿತರು, ಸಾಹಸ ಸಿಂಹ ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಪ್ರದರ್ಶನ ಮಾಡಲು ಚಿಂತನೆ ನಡೆಸಲಾಗಿದೆ. ಮೈಸೂರು, ಚಿತ್ರದುರ್ಗ, ಶಿವಮೊಗ್ಗದಲ್ಲಿ ಹೆಚ್ಚು ಅಭಿಮಾನಿಗಳು ಇರುವುದರಿಂದ, ಒಂದು ದಿನದ ಗಳಿಕೆ ಹಣವನ್ನು ಅಭಿಮಾನಿ ಸಂಘದ ಸಮಾಜಮುಖಿ ಕಾರ್ಯಕ್ಕೆ ನೀಡಲಾಗುವುದು" ಎಂದು ಪಲ್ಲಕ್ಕಿ ಕೋರಿದರು.

     ರಾಮಾಚಾರಿ ಪಾತ್ರ ನಿರ್ವಹಿಸಿರುವ ಜಯಶ್ರೀರಾಜ್ ಚಿತ್ರೀಕರಣದ ಅನುಭವ ಹಂಚಿಕೊಂಡು "ಪಾತ್ರಕ್ಕಾಗಿ ಸಿದ್ದತೆ ಮಾಡಿಕೊಂಡು ಬದ್ದತೆಯಿಂದ ಪ್ರಯೋಗ ಮಾಡಿದ್ದೇನೆ" ಎಂದರು. ಪತ್ನಿಯಾಗಿ ಪ್ರೇಮಾಗೌಡ, ಚಾಮಯ್ಯನಾಗಿ ಪ್ರದೀಪ್ ಶಾಸ್ತ್ರೀ, ಮಗಳಾಗಿ ಚೈತ್ರಾ, ಮುಂದುವರಿದ ಪ್ರಿನ್ಸಿಪಾಲ್ (ಲೋಕನಾಥ್) ಆಗಿ ಪ್ರಕಾಶ್‌ಅರಸು. ಉಳಿದಂತೆ ಸೀನೂ ಮಾರ್ಕಳಿ, ವರಪ್ರಸಾದ ಶರ್ಮ, ವಿನುತ, ರಾಘವೇಂದ್ರ, ಸುಧಾಕರ, ಸೂರ್ಯತೇಜ, ಕಾರ್ತಿಕ್, ಗುರುಕಿರಣ್, ಸಂದೀಪ್ ಹಾಗೂ ವೃತ್ತಿ ರಂಗಕರ್ಮಿಗಳಿಗೆ ಅವಕಾಶ ಮಾಡಿಕೊಡಲಾಗಿದೆ.

      ಡಾ.ಕುಮಾರಚಲ್ಯಾ ಮತ್ತು ಹೈತೋ ಸಾಹಿತ್ಯದ ಗಜಲ್ ಗೀತೆಗಳಿಗೆ ಸ್ಯಾಂ ಸಂಗೀತ ಸಂಯೋಜಿಸಿದ್ದಾರೆ. ಹಿನ್ನೆಲೆ ಸಂಗೀತ ಪಳನಿಸೇನಾಪತಿ, ಛಾಯಾಗ್ರಹಣ ಎಂ.ಆರ್.ಸೀನು,  ಎಸ್‌ಎಫ್‌ಎಕ್ಸ್ ಗೋಪಿ, ಸಂಕಲನ ಶಿವಕುಮಾರ್ ಎ ನಿರ್ವಹಿಸಿದ್ದಾರೆ.















Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆವಿ.ಶ್ರೀ.ಕೃ. ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜತಾಳಿಕೋಟೆ ತಾಲೂಕು ಕೂಡ ಶೀಘ್ರ ಬರಪೀಡಿತ ಪಟ್ಟಿಗೆ : ಶಾಸಕ ನಾಡಗೌಡತೇರದಾಳ ಹಾಗೂ ರಬಕವಿ /ಬನಹಟ್ಟಿ ತಾಲೂಕುಗಳು ಬರಗಾಲ ಪಟ್ಟಿಗೆ, ಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ.ರೋಗಿಗಳಿಗೆ ಹಾಲುಹಣ್ಣು ವಿತರಿಸಿ ಬಿಜೆಪಿ ಕಾರ್ಯಕರ್ತರಿಂದ ’ಸೇವಾ ಸಂಕಲ್ಪಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಫಾರಂ-2 ಇ-ಖಾತಾ ಮಾಡಿಕೊಡಲು ಆಗ್ರಹಸೆ.20ರಂದು ಬಳ್ಳಾರಿಯಲ್ಲಿ ಹಿಂದೂ ಮಹಾ ಗಣಪತಿ ಭವ್ಯ ಶೋಭಾಯಾತ್ರೆಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ ಸಿಎಂ ಕನಸು; ಜನರಿಗೆ ತೊಂದರೆ ನೀಡಿದರೆ ಕ್ರಮ: ನಾರಾ ಭರತ್ ರೆಡ್ಡಿ