Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀ ಡಾ.ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿಗಳ ಹುಟ್ಟುಹಬ್ಬ ಆಚರಣೆ

 
 
 , ಹೊಸಪೇಟೆ: ಇಂದು ನಗರದ ಡಾ.ಪುನೀತ್ ರಾಜಕುಮಾರ್ ವೃತ್ತದಲ್ಲಿ ಶ್ರೀ ಶಿವಶರಣ ಮಾದರ ಚೆನ್ನಯ್ಯ ಸೇವಾ ಸಮಿತಿ ವಿಜಯನಗರ ಜಿಲ್ಲೆ ವತಿಯಿಂದ ಶ್ರೀ ಡಾ.ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿಗಳ ಹುಟ್ಟು ಹಬ್ಬದ ಅಂಗವಾಗಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಮಾತಂಗ ಗುರುಪೀಠ ಹಂಪಿಯ ಶ್ರೀ ಪೂರ್ಣಾನಂದ ಭಾರತಿ ಸ್ವಾಮೀಜಿ ರವರ ದಿವ್ಯ ಸಾನಿಧ್ಯದಲ್ಲಿ ಮತ್ತು ಜಿಲ್ಲಾಧ್ಯಕ್ಷರಾದ ಹೆಚ್. ಶ್ರೀನಿವಾಸ ರವರ ನೇತೃತ್ವದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
 
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೇಂದ್ರ ಮಾಜಿ ಸಚಿವರಾದ ಎ.ನಾರಾಯಣಸ್ವಾಮಿ ರವರು ಮಾತನಾಡಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಶ್ರೀ ಮಾದರ ಚೆನ್ನಯ್ಯ ಸ್ವಾಮಿಜಿಗಳ ಹುಟ್ಟು ಹಬ್ಬವನ್ನು ಅನೇಕ ಕಾರ್ಯಕರ್ತರು ಆಚರಿಸುತ್ತಿದ್ದಾರೆ ವಿಶೇಷವಾಗಿ ವಿಜಯನಗರ ಜಿಲ್ಲೆಯಲ್ಲಿ ಅನ್ನ ಸಂತರ್ಪಣೆ ಮಾಡುವುದರ ಮೂಲಕ ಅರ್ಥಪೂರ್ಣವಾದಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಸ್ವಾಮೀಜಿ ರವರಿಗೆ ದೇವರು ಆರೋಗ್ಯ ಆಯಸ್ಸು, ಸಮಾಜವನ್ನು ಮುನ್ನಡೆಸುವಂತಹ ಶಕ್ತಿಯನ್ನು ದಯಪಾಲಿಸಲಿ ಎಂದು ಮತ್ತು ವಿಜಯನಗರ ಜಿಲ್ಲೆ ಮಾದರ ಚೆನ್ನಯ್ಯ ಸೇವಾ ಸಮಿತಿ ಬಲಿಷ್ಠಗೊಳ್ಳಲಿ ಎಂದು ಮಾತನಾಡಿದರು.
 
ಈ ಸಂದರ್ಭದಲ್ಲಿ ಹೊಸಪೇಟೆ ನಗರಸಭೆ ಅಧ್ಯಕ್ಷರಾದ ಎನ್ ರೂಪೇಶ್ ಕುಮಾರ್,ವಿಭಾಗೀಯ ಮುಖ್ಯಸ್ಥರಾದ ಎಚ್ ಪೂಜಪ್ಪ, ಮುಖಂಡರಾದ ಎಂ.ಸಿ.ವೀರ ಸ್ವಾಮಿ, ಕೆ. ಪಿ .ಉಮಾಪತಿ, ಎಚ್. ಶೇಷು, ಎಚ್.ಜಗನ್ನಾಥ ರಾಜಲು,ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಭರತ್ ಕುಮಾರ್. ಸಿ.ಆರ್. ಮತ್ತು ಎಚ್. ರವಿಕಿರಣ, ಎಚ್ಎಸ್. ವೆಂಕಪ್ಪ, ವಿಜಯ್ ಕುಮಾರ್, ಸೇಲ್ವಂ, ದುರ್ಗೇಶ್,ವಿಜಯ್ ಕುಮಾರ್, ಕರಿಯಪ್ಪ,ದುರ್ಗಪ್ಪ, ಉದಯ್ ಕುಮಾರ್, ವಿಜಯನಗರ ಜಿಲ್ಲೆ, ಶ್ರೀ ಶಿವಶರಣ ಮಾದಾರ್ ಚನ್ನಯ್ಯ ಸೇವಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಮಾದಿಗ ಸಮುದಾಯದ ಮುಖಂಡರು, ಯುವಕರು ಮತ್ತು ಮತ್ತಿತರರು ಭಾಗವಹಿಸಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
-ಬರವಣಿಗೆ ಸುಲಭ ಕೃತಿ ರೂಪದಲ್ಲಿ ಹೊರತರುವದು ಕಠಿಣ -ಸಾಹಿತಿ ಪಾರ್ವತಿ ತುಪ್ಪದ ಅಭಿಮತ ಸೊಳ್ಳೆ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರಕ್ಕೆ ಕರೆ: ನಂದಿನಿಶಿವಶರಣ ಹಡಪದ ಅಪ್ಪಣ್ಣ ಜಯಂತಿ; ಅರ್ಥಪೂರ್ಣ ಆಚರಣೆ ಸಿದ್ಧತೆಗೆ ತಹಶೀಲ್ದಾರ ವಿಶ್ವಜೀತ್ ಮೆಹೆತಾ ಸೂಚನೆಎಸ್‌ಎಸ್‌ಎಲ್‌ಸಿ ಸಾಧಕರಿಗೆ ಪ್ರತಿಭಾ ಪುರಸ್ಕಾರ; ಶೇ.100 ಫಲಿತಾಂಶ ಸಾಧಿಸಿದ ಶಿಕ್ಷಕರಿಗೆ ಸನ್ಮಾನನೀಟ್-2026: ಕಲ್ಯಾಣ ಕರ್ನಾಟಕದಲ್ಲಿ ಪ್ರಥಮ ಸ್ಥಾನ ಪಡೆದ ಬಳ್ಳಾರಿಯ ಸಾಯಿ ಶ್ರಾವ್ಯಸಿ ಎಂ  ಪ್ರವಾಸದಲ್ಲಿ ವೈದ್ಯಕೀಯ ಭದ್ರತಾ ಲೋಪ ಆರೋಪ: ಡಿಎಚ್‌ಒಗೆ ನೋಟಿಸಜನ್ಮದಿನದ ಪ್ರಯುಕ್ತ ಹೆಲ್ಮೆಟ್ ನೀಡುತ್ತಿರುವದು ಜನೋಪಯೋಗಿ ಕಾರ್ಯ  : ಶಾಸಕ ಪಾಟೀಲ ದಲಿತ ಸಮೀತಿಗೆ ಮಹಮ್ಮದ ನೇಮಕಎಚ್. ಎಚ್. ಗುನ್ನಾಪುರ ಉಪತಹಶೀಲ್ದಾರಾಗಿ ನೇಮಕಬಳ್ಳಾರಿಯಲ್ಲಿ ಎಐಎಂಐಎಂ ಸಂಘಟನೆ ಬಲಪಡಿಸಲು ಸದಸ್ಯತ್ವ ಅಭಿಯಾನ: ಲತೀಫ್‌ಖಾನ್ ಫಠಾನ್