LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

*ವಾರ್ಡ್ 9 ರಲ್ಲಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಚಾಲನೆ ನೀಡಿದ: ದತ್ತಾ ವಾಸ್ಟರ್*

ಅಥಣಿ: ಸಹಕಾರ ಸಚಿವ ಲಕ್ಷ್ಮಣ ಸವದಿ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಅಥಣಿಯಲ್ಲಿ ಜನಪರ ಮತ್ತು ಅಭಿವೃದ್ಧಿ ಪರ ಯೋಜನೆಗಳನ್ನು ಅಧ್ಯಕ್ಷೆ ಶಿವಲೀಲಾ ಬುಟಾಳಿಯವರ ಸಹಕಾರದಿಂದ ಅನುಷ್ಠಾನಗೊಳಿಸುತ್ತಿದ್ದೇವೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್ ಹೇಳಿದರು. ಅವರು ಪುರಸಭೆ ವ್ಯಾಪ್ತಿಯ ವಾರ್ಡ 9 ರಲ್ಲಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.
ಅಥಣಿ ಅಭಿವೃದ್ಧಿಗಾಗಿ ವಿಶೇಷ ಅನುದಾನ ಮಂಜೂರು ಮಾಡಿಸುವ ಪ್ರಕ್ರಿಯೆಯನ್ನು ಈಗಾಗಲೇ ಸಹಕಾರ ಸಚಿವ ಲಕ್ಷ್ಮಣ ಸವದಿ ಸರಕಾರದ ಮಟ್ಟದಲ್ಲಿ ಮಾಡುತ್ತಿದ್ದು, ಕೆಲವೇ ತಿಂಗಳುಗಳಲ್ಲಿ ವಿಶೇಷ ಅನುದಾನ ಮಂಜೂರಾಗಲಿದೆ ಎಂದ ಅವರು ವಿಶೇಷ ಅನುದಾನದಲ್ಲಿ ರಸ್ತೆ ಸೇರಿದಂತೆ ಮೂಲ ಭೂತ ಸೌಲಭ್ಯಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು. 
ಇದೇ ಸಂದರ್ಭದಲ್ಲಿ ಸ್ಥಾಯಿ ಸಮಿತಿ‌ ಅಧ್ಯಕ್ಷ ದತ್ತಾ ವಾಸ್ಟರ್ ಇವರ ಜನ್ಮ‌‌ದಿನದ ಅಂಗವಾಗಿ ಅಧ್ಯಕ್ಷರು, ಸರ್ವಸದಸ್ಯರು ಮತ್ತು ಮದ್ದಿನ‌ ಮಡ್ಡಿ ಪ್ರಮುಖರು ಸತ್ಕರಿಸಿದರು. 
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳಿ, ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ, ಮಾಜಿ ಪುರಸಭೆ ಅಧ್ಯಕ್ಷ ದಿಲೀಪ ಲೋಣಾರೆ, ಪುರಸಭೆ ಸದಸ್ಯರಾದ ಲತಾ ತಿಪ್ಪಣ್ಣ ಭಜಂತ್ರಿ, ಮಲ್ಲೇಶ ಹುದ್ದಾರ, ರಾಜೇಂದ್ರ ಗುಡೊಡಗಿ, ವಿಲೀನರಾಜ ಯಳಮಲ್ಲೆ, ಸಯ್ಯದ್ ಅಮೀನ್ ಗದ್ಯಾಳ, ರೀಯಾಜ್ ಸನದಿ, ಕಲ್ಲೇಶ ಮಡ್ಡಿ, ರಾಜು ಬುಲಬಲೆ, ಬಸವರಾಜ ಹಳ್ಳದಮಳ, ರಮೇಶ ಪವಾರ, ರವಿ ಬಡಕಂಬಿ ಧುರೀಣರಾದ ಬೀಮಾ ನನ್ನಾವರೆ, ಕಳ್ಳೋಳಪ್ಪ ನನ್ನಾವರೆ, ರಂಜೀತ ವಾಘಮೋಡೆ, ಶ್ರವಣ ವಾಸ್ಟರ್, ಲಾಲದಾಸ್ ವಾಘಮೋಡೆ, ಸಿದ್ದು ಬಿಸೆ, ಸುನೀಲ ಇಂಗಳೆ, ಬಾಸು ವಾಘಮೊಡೆ, ದೊಂಡಿಬಾ ಮಾನೆ, ಮಯೂರ ಸಿಂಗೆ, ವಿನೋದ ವಾಘಮೋಡೆ, ಅರವಿಂದ ವಾಘಮೋರೆ, ತೇಜಸ್ ವಾಘಮೋರೆ, ಪುಂಡಲೀಕ ನನ್ನಾವರೆ, ಗುತ್ತಿಗೆದಾರ ತಿಪ್ಪಣ್ಣ ಭಜಂತ್ರಿ, ಸಂತೋಷ ಅವರಸಂಗ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಲ್ಲಮ್ಮ ದೇವಸ್ಥಾನದ ಭಕ್ತರಿಗೆ ಮೂಲಸೌಕರ್ಯ ಕಲ್ಪಿಸುತ್ತೇನೆಇಸ್ರೋ ರೋಬೋಟಿಕ್ಸ್ ಚಾಲೆಂಜ್‌ನಲ್ಲಿ ಐಐಐಟಿ ಧಾರವಾಡ ತಂಡಕ್ಕೆ ನಾಲ್ಕನೇ ಸ್ಥಾನ*ಕುಡಿಯುವ ನೀರನ್ನು ಕೃಷಿಗೆ ಬಳಸಬೇಡಿ: ಜಿಲ್ಲಾಧಿಕಾರಿ ಸ್ನೇಹಲ್ ಆರ್.ಕಬ್ಬು ಬೆಳೆಗಾರರ ಹೋರಾಟ- ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹಸಂಕೇಶ್ವರದಲ್ಲಿ ನೂತನ ಇಂದಿರಾ ಕ್ಯಾಂಟೀನ್ ಉದ್ಘಾಟನೆ: ಬಡವರ ಹಸಿವು ನೀಗಿಸಲು ಚಾಲನೆಕಿತ್ತೂರು ಉತ್ಸವ ವಿಚಾರ ಸಂಕಿರಣದಲ್ಲಿ ರಾಜ್ಯಮಟ್ಟದ ಇತಿಹಾಸ ತಜ್ಞರಿಂದ ಉಪನ್ಯಾಸ: ಡಾಕ್ಟರ್ ಸಂತೋಷ್ ಹಾನಗಲ್ಲ.ರಾಜ್ಯಮಟ್ಟಕ್ಕೆ ಭೂಮಿಕಾ ಮಡ್ಡಿ, ಸ್ಪೂರ್ತಿ ಹರನಾಳ ಆಯ್ಕೆಪಗಡೆಯಾಟಕ್ಕೆ ಕ್ರಿಕೆಟ್-ಹಾಕಿಯಂತೆ ಹೆಚ್ಚಿನ ಪ್ರಚಾರ ಸಿಗಲಿ: ಬಿಜೆಪಿ ಮುಖಂಡ ಮಡಿವಾಳಪ್ಪ ಬಿದರಗಟ್ಟಿಕಾಲೇಜು ವಿಭಾಗ : ಶೆಟಲ್ ಬ್ಯಾಡ್ಮಿಂಟನ್ ರಾಜ್ಯ ಮಟ್ಟಕ್ಕೆ ಆಯ್ಕೆ ಯರಗಟ್ಟಿ ಸರ್ಕಾರಿ ಕನ್ನಡ ಮಾದರಿ ಶಾಲೆಗೆ ಬಾಷ್ ಕಂಪನಿಯಿಂದ ?೧ ಕೋಟಿ ಅನುದಾನ