LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಕಬಂಧ ಟ್ರೇಲರ್ ಬಿಡುಗಡೆ

     ಕುಂಜರ ಫಿಲಂಸ್‍ ಬ್ಯಾನರ್‍ ಅಡಿ ಪ್ರಸಾದ್‍ ವಸಿಷ್ಠ ಮತ್ತು ಮಿತ್ರರು  ನಿರ್ಮಿಸಿರುವ ‘ಕಬಂಧ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಕಲಾವಿದರ ಸಂಘದ ಡಾ. ಅಂಬರೀಷ್‍ ಆಡಿಟೋರಿಯಂನಲ್ಲಿ ನೆರವೇರಿತು.


     ಖ್ಯಾತ ನಿರ್ಮಾಪಕಿ ಶೈಲಜಾ ನಾಗ್‍ ಚಿತ್ರದ ಟ್ರೇಲರ್‍ ಬಿಡುಗಡೆ ಮಾಡಿದರು. ಅವರು ಮಾತನಾಡಿ "ಟ್ರೇಲರ್ ಬಹಳ ಆಸಕ್ತಿಕರವಾಗಿದೆ. ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಇವತ್ತಿನ ಚಿತ್ರರಂಗದ ಪ್ರತಿಸ್ಥಿತಿ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇವತ್ತು ಸಿನಿಮಾ ಮಾಡುವುದು ದೊಡ್ಡ ಸವಾಲಲ್ಲ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವುದು ನಿಜವಾದ ಸವಾಲು. ಅದರಲ್ಲಿ ಹೇಗೆ ಗೆಲ್ಲುವುದು ಎಂಬುದು ಬಹಳ ಮುಖ್ಯ ಮತ್ತು ಆ ಬಗ್ಗೆ ಸಾಕಷ್ಟು ಪ್ರಯತ್ನ ಮಾಡಿ, ಜನರಿಗೆ ಚಿತ್ರವನ್ನು ತಲುಪಿಸುವ ಕೆಲಸ ಮಾಡಿ’ ಎಂದು ಚಿತ್ರತಂಡದವರಿಗೆ ಕಿವಿಮಾತು ಹೇಳಿದರು.



     'ಕಬಂಧ' ನಿರ್ದೇಶಕ ಸತ್ಯನಾಥ್‍  "ಎರಡು ವರ್ಷಗಳ ಹಿಂದೆ ಶುರುವಾದ ಚಿತ್ರವಿದು. ಮೊದಲು ಕಿಶೋರ್‍ ಅವರನ್ನು ಭೇಟಿ ಮಾಡಿ ಅವರಿಗೆ ಕಥೆ ಹೇಳಿದೆವು. ಅವರು ಒಪ್ಪಿದ ಮೇಲೆ ಎಲ್ಲವನ್ನೂ ಸಿದ್ಧ ಮಾಡಿಕೊಂಡು ತುಮಕೂರು ಮತ್ತು ದೇವರಾಯನದುರ್ಗ ಸುತ್ತ 55 ದಿನಗಳ ಚಿತ್ರೀಕರಣ ಮಾಡಿದ್ದೇವೆ. ಶೇ. 80ರಷ್ಟು ರಾತ್ರಿ ಭಾಗದ ಚಿತ್ರೀಕರಣವಾಗಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿಯುತ್ತಾ ಬಂದಿವೆ. ಇನ್ನೆರಡು ತಿಂಗಳುಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ’ .


     "ಕಬಂಧ' ಇದೊಂದು ವ್ಯವಸಾಯದ ಸುತ್ತ ನಡೆಯುವ ಕಥೆ. ಇವತ್ತಿನ ವೇಗದ ಜೀವನಶೈಲಿಯಲ್ಲಿ ಪ್ಲಾಸ್ಟಿಕ್‍ ಮತ್ತು ಟಾಕ್ಸಿಕ್‍ ಅಂಶಗಳು ನಮ್ಮ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಆದರೆ, ನಾವು ಆ ವಿಷಯವಾಗಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ವಿಷಯವಾಗಿ ಕಥೆ ಮಾಡಿಕೊಂಡಿದ್ದೇವೆ. ಕಬಂಧ, ರಾಮಾಯಣದಲ್ಲಿ ಬರುವ ಒಬ್ಬ ರಾಕ್ಷಸನ ಹೆಸರು. ಅವನ ಬಾಹುಗಳಿಂದ ಬಿಡಿಸಿಕೊಳ್ಳುವುದು ಕಷ್ಟ. ಅದಕ್ಕೇ ಕಬಂಧ ಬಾಹು ಎನ್ನಲಾಗುತ್ತದೆ. ಅದೇ ರೀತಿ ಈ ವಿಷಕಾರಿ ವಸ್ತುಗಳೆಂಬ ಕಬಂಧ ಬಾಹುಗಳಿಗೆ ಹೇಗೆ ಸಿಕ್ಕಿಕೊಂಡಿದ್ದೇವೆ ಎಂದು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ಇದೊಂದು ನೈಜ ಘಟನೆ ಆಧಾರಿತ ಚಿತ್ರ. ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ ಇದು. ಇದನ್ನು ಸೈಕಲಾಜಿಕಲ್‍ ಹಾರರ್‍ ಚಿತ್ರ ಎನ್ನಬಹುದು’ ಎಂದರು.


     ಚಿತ್ರದ ನಾಯಕ ಪ್ರಸಾದ್‍ ವಸಿಷ್ಠ  "ಇಂತಹ ಕಥೆಗಳನ್ನು ಸಿನಿಮಾಗೆ ಅಳವಡಿಸುವುದು ಕಷ್ಟ. ಈ ಚಿತ್ರದಲ್ಲಿ ನಾನು ನಚಿಕೇತ ಎಂಬ ಜಮೀನ್ದಾರಿ ಕುಟುಂಬದ ಯುವಕನಾಗಿ ಕಾಣಿಸಿಕೊಂಡಿದ್ದೇನೆ. ಅವನ ಸುತ್ತಮುತ್ತ ನಡೆಯುವ ಕಥೆ ಇದು" ಎಂದರು.


ಸಮಾರಂಭದಲ್ಲಿ ನಟ ಪ್ರಶಾಂತ್ ಸಿದ್ದಿ, ಪ್ರಿಯಾಂಕಾ ಮಳಲಿ, ಛಾಯಾಗ್ರಾಹಕ ವಿಷ್ಣುಪ್ರಸಾದ್‍, ಸಂಕಲನಕಾರ ಸತ್ಯಜಿತ್‍ ಸಿದ್ಧಕಟ್ಟಿ ಮುಂತಾದವರು ಹಾಜರಿದ್ದು ಚಿತ್ರ ಮತ್ತು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.



Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್