ಘಟಪ್ರಭಾ,ಅ,೨೬ : ಸ್ಥಳೀಯ ಮಲ್ಲಾಪೂರ ಪಿ.ಜಿ. ಗ್ರಾಮದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ೩೫೫ನೇ ಆರಾಧನಾ ಮಹೋತ್ಸವವನ್ನು ಶನಿವಾರ ದಿ. ೨೯ ರಿಂದ ಸೋಮವಾರ ದಿ. ೩೧-೮-೨೦೨೬ ರವರೆಗೆ ವಿಜೃಂಭನೆಯಿಂದ ಜರಗುವುದು. ಶ್ರೀ ೧೦೮ ವಿಶ್ವೇಶತೀರ್ಥ ಶ್ರೀಪಾದಂಗಳವರು ಪೇಜಾವರ ಮಠ ಅವರ ಅಮೃತ ಹಸ್ತದಿಂದ ಪ್ರತಿಷ್ಟಾಪಿಸಲ್ಪಟ್ಟ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ೩೫ನೇಯ ಆರಾಧನಾ ಮಹೋತ್ಸವದ ನಿಮಿತ್ಯ ಶನಿವಾರ ದಿ. ೨೯ ರಂದು ಮುಂಜಾನೆ ೮-೦೦ ಗಂಟೆಗೆ ಅಷ್ಟೋತ್ತರ ನಂತರ ೯-೦೦ ಗಂಟೆಯಿಂದ ೧೧-೦೦ ಗಂಟೆಯವರೆಗೆ ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಪೂಜೆ, ನೈವೇದ್ಯ ಸಂಜೆ ೬-೦೦ ಗಂಟೆಗೆ ಪಲ್ಲಕ್ಕಿ ಸೇವೆ ಬಳಿಕ ೯-೦೦ ಗಂಟೆಯವರೆಗೆ ಸಂಗೀತ ಸೇವೆ, ಭಜನೆ, ದೀಪಾಲಂಕಾರ, ಅಷ್ಟಾವಧಾನ ಸೇವೆ. ರವಿವಾರ ದಿ. ೩೦ ರಂದು ಮುಂಜಾನೆ ೭-೩೫ ಕ್ಕೆ ಅಷ್ಟೋತ್ತರ ೮-೩೦ ರಿಂದ ೧೧-೦೦ ಗಂಟೆಯವರೆಗೆ ಪಂಚಾಮೃತ ಅಭಿಷೇಕ ಅಲಂಕಾರ, ಮಹಾಪೂಜೆ ಹಾಗೂ ಸರಿಯಾಗಿ ೧೧-೩೦ ಗಂಟೆಯಿಂದ ೧೨-೩೦ ಗಂಟೆಯವರೆಗೆ ರಥೋತ್ಸವ ನಂತರ ಮಹಾನೈವೇದ್ಯ ಮತ್ತು ಮಂಗಳಾರತಿ ಇದರಲ್ಲಿ ಶ್ರೀಫಲ ಇತ್ಯಾದಿ ಕಾರ್ಯಕ್ರಮ ನಂತರ ೨-೦೦ ರಿಂದ ೪-೦೦ ಗಂಟೆಯವರೆಗೆ ಮಹಾಪ್ರಸಾದ. ಸಾಯಂಕಾಲ ೬-೦೦ ಗಂಟೆಯಿಂದ ೮-೦೦ ಗಂಟೆಯವರೆಗೆ ದೀಪೋತ್ಸವ, ಭಜನೆ ಮತ್ತು ಅಷ್ಟಾವಧಾನ ಸೇವೆ ಇತ್ಯಾದಿ. ಶ್ರೀ ಮಠದ ಮಹಿಳಾ ಭಜನಾ ಮಂಡಳಿಯವರಿಂದ ಆರಾಧನಾ ಮಹೋತ್ಸವದ ೩ ದಿನ ಸಾಯಂಕಾಲ ೬-೩೦ ಕ್ಕೆ ತಾರತಮ್ಯ ಪ್ರಕಾರ ಭಜನೆ ಜರಗುವುದು. ಸೋಮವಾರ ದಿ. ೩೧ ರಂದು ಮುಂಜಾನೆ ೭-೩೫ ಗಂಟೆಗೆ ಅಷ್ಟೋತ್ತರ ಬಳಿಕ ೮-೩೦ ಗಂಟೆಯಿಂದ ೧೧-೦೦ ಗಂಟೆಯವರೆಗೆ ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಪೂಜೆ ನಂತರ ೧೧-೩೦ ರಿಂದ ೧೨-೩೦ ಗಂಟೆಯವರೆಗೆ ಶ್ರೀ ಸತ್ಯನಾರಾಯಣ ಪೂಜೆ, ನೈವೇದ್ಯ ಮತ್ತು ಮಹಾಮಂಗಳಾರತಿ ಸಂಜೆ ೬-೦೦ ಗಂಟೆಗೆ ಪಲ್ಲಕ್ಕಿ ಸೇವೆ, ದೀಪೋತ್ಸವ, ಭಜನೆ ಅಷ್ಟಾವಧಾನ ಸೇವೆ ರಾತ್ರಿ ೯-೦೦ ಗಂಟೆಗೆ ಸಮಾರೋಪ ಸಮಾರಂಭ ಈ ರೀತಿ ಜರಗುವ ಕಾರ್ಯಕ್ರಮಕ್ಕೆ ಭಕ್ತಾಧಿಗಳು ಆಗಮಿಸಿ ರಾಯರ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಕಮೀಟಿ ಅಧ್ಯಕ್ಷರಾದ ಶ್ರೀಕಾಂತ ಬಾ. ಕುಲಕರ್ಣಿಯವರು ಈ ಮೂಲಕ ತಿಳಿಸಿದ್ದಾರೆ.