ತಾಳಿಕೋಟೆ, ವಿದ್ಯಾಭಾರತಿ ಕರ್ನಾಟಕದ ವಿಜಯಪುರ ಜಿಲ್ಲಾ ಉಪಾಧ್ಯಕ್ಷರಾಗಿ ತಾಳಿಕೋಟೆಯ ಅಮರ್‌ಸಿಂಗ್(ಬಾಬು) ಹಜೇರಿ ಅವರನ್ನು ನೇಮಕ ಮಾಡಲಾಗಿದೆ.
ತಾಳಿಕೋಟೆಯ ಸ್ಥಳೀಯ ಜ್ಞಾನಭಾರತಿ ವಿಸ್ವಸ್ಥ ಸಮಿತಿ ಕಾರ್ಯದರ್ಶಿಯಾಗಿ ಹಾಗೂ ಲಕ್ಷ್ಮಣಸಿಂಗ್ ಅಮರ್ ಸಿಂಗ್ ಹಜೇರಿ ವಿದ್ಯಾಭಾರತಿ ಪ್ರೌಢಶಾಲೆಯ ಅಧ್ಯಕ್ಷರಾಗಿ ಅಮರ್‌ಸಿಂಗ್(ಬಾಬು) ಹಜೇರಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.
ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ವಿದ್ಯಾಭಾರತಿ ಕರ್ನಾಟಕದ ವಿಜಯಪುರ ಜಿಲ್ಲಾ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ವಿದ್ಯಾಭಾರತಿ ಕರ್ನಾಟಕ ವಿಜಯಪುರ ಜಿಲ್ಲಾ ಅಧ್ಯಕ್ಷರಾದ ಪ್ರಭು ಕಡಿ ಅವರು ತಿಳಿಸಿದ್ದಾರೆ.