Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ʻಕೈʼಗೆ ಶಕ್ತಿ ತುಂಬಿದ ಅಹಿಂದ: ಸಚಿವ ಸತೀಶ್‌ ಜಾರಕಿಹೊಳಿ

ಅಹಿಂದʼ ಬೆಳ್ಳಿ ಹಬ್ಬ ಹಾಗೂ ರಾಜ್ಯಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ

ಹುಬ್ಬಳ್ಳಿ:
ಅಹಿಂದ ಸಂಘಟನೆಯು ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಲಾಭ ತಂದುಕೊಟ್ಟಿದ್ದು, ಮುಂದೆಯೂ ಶೋಷಿತ ವರ್ಗಗಳ ಹಿತರಕ್ಷಣೆ ಮಾಡುವ ಮೂಲಕ ಪಕ್ಷವನ್ನು ಬಲಪಡಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.
ಇಲ್ಲಿನ ಗೋಕುಲ್ ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ಅಹಿಂದ ಕರ್ನಾಟಕ ಹೋರಾಟ 25 ವರ್ಷ ಪೂರೈಸಿದ ಹಿನ್ನೆಲೆ ಆಯೋಜಿಸಿದ್ದ ಅಹಿಂದ 25 ಹೋರಾಟ ಸಾಧನೆ, ಸಂಕಲ್ಪ ಕುರಿತಾಗಿ ರಾಜ್ಯಮಟ್ಟದ ವಿಚಾರ ಸಂಕಿರಣ' ವನ್ನು ಉದ್ಘಾಟಿಸಿ ಅವರು ಮಾತನಾಡಿ, ಅಹಿಂದ ಸಂಘಟನೆ ಗೆ ಹೊಸ ಕಾಯಕಲ್ಪ ನೀಡಬೇಕೆಂದು ಇಂದು ಹುಬ್ಬಳ್ಳಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕಳೆದ ಇಪ್ಪತ್ತು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಐತಿಹಾಸಿಕ ಸಮಾವೇಶ ಮಾಡಲಾಗಿತ್ತು.  ಆ ಸಮಾವೇಶದಿಂದ ಅನೇಕ ರಾಜಕೀಯ ಬದಲಾವಣೆಗಳಿಗೆ ನಾಂದಿ ಹಾಡಿದೆ. ಅಹಿಂದ ಎಂಬುದು ಒಂದು ಸಾಮಾಜಿಕ ಚಳವಳಿ ಅಷ್ಟೆ ಹೊರತು ಇದು ಕೇವಲ ರಾಜಕೀಯ ಶಕ್ತಿ ಪ್ರದರ್ಶನವಲ್ಲ ಎಂದು ಹೇಳಿದರು.
ನಮ್ಮ ಹೋರಾಟದ ಸ್ವರೂಪ ಬದಲಾವಣೆಯಾಗಲಿ: ಈ ಕಾರ್ಯಕ್ರಮದಿಂದ ನಾವು ಮುಖ್ಯಮಂತ್ರಿ ಆಗಬೇಕೆಂಬ ಉದ್ದೇಶ ನಮಗಿಲ್ಲ, ಈ ಹೋರಾಟದಿಂದ ನಮ್ಮ ನೂನ್ಯತೆಗಳನ್ನು ಸರಿಪಡಿಸಬೇಕಾಗಿದೆ.  ಇಂದು ನಮ್ಮ ಸರ್ಕಾರವಿದ್ದರೂ ನಾವು ಇಂದು ಅಹಿಂದ ವರ್ಗಕ್ಕೆ ಏನು‌ ಮಾಡಿಲ್ಲವೆಂದು ಅನೇಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದೇ ಕಾರಣದಿಂದ ಈ ಸಭೆ ಕರೆದಿದ್ದು, ಈ ಎಲ್ಲಾ ಸಮಸ್ಯೆಯನ್ನು ಸರಿಪಡಿಸಬೇಕಾಗಿದೆ.  ಮುಂದಿನ ದಿನಗಳಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಗಳು ನಮ್ಮನ್ನು ಹೇಗೆ ಆಳುತ್ತಿವೆ ಎಂಬುವುದರ ಬಗ್ಗೆ ಚರ್ಚಿಸಬೇಕಿದೆ.  ಈ ಎಲ್ಲಾ ಕಾರಣಗಳಿಂದ ನಮ್ಮ ಹೋರಾಟದ ಸ್ವರೂಪದ ಬದಲಾವಣೆ ಮಾಡಬೇಕಿದೆ ಎಂದರು.
ಶೇ.80 ರಷ್ಟು ಜನಸಂಖ್ಯೆ  ಅಹಿಂದಲ್ಲಿದೆ: ಸರ್ಕಾರದಿಂದ ಸಿಗುವ ಸೌಲಭ್ಯಗಳು ಅಹಿಂದ ನಿರಂತರವಾಗಿ ಸಮಾಜದಲ್ಲಿ ಚಾಲ್ತಿಯಲ್ಲಿ ಇರಬೇಕು. ಇದಕ್ಕೆ ಒಬ್ಬರು ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು ಇರಬೇಕು. ಅಂದಾಗ ಮಾತ್ರ ನಾವು ಬದಲಾವಣೆ ತರಲು ಸಾಧ್ಯ.  ನ್ನೂ ಹತ್ತು, ಹದಿನೈದು ವರ್ಷ ನಾವು ರಾಜಕೀಯ, ಸಾಮಾಜೀಕವಾಗಿ ಕೆಲಸ ಮಾಡಲು ಸಾಧ್ಯವಿದೆ ಎಂದ ಅವರು,  ಮನುವಾದಿಗಳ ಮನಸ್ಥಿತಿ ವಿರುದ್ದ ಬುದ್ದ, ಬಸವ, ಪೆರಿಯಾರ್ ಹೋರಾಟ ಮಾಡಿದರೂ ಇಂದಿನ ವ್ಯವಸ್ಥೆಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ನಿಮ್ಮನ್ನು ಗಟ್ಟಿಯಾಗಿ ಕಟ್ಟಲು ನಾವು ಇನ್ನೂ ಮುಂದು ವಿಭಿನ್ನ ಪ್ರಯತ್ನ ಗಳನ್ನು ತರುತ್ತೇವೆ. ಎಲ್ಲಾ ಜಿಲ್ಲೆಗಳಲ್ಲಿ ಈ ರೀತಿ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಮಾಡುತ್ತೇವೆ.  ಶೇ.80 ರಷ್ಟು ಜನಸಂಖ್ಯೆ  ಅಹಿಂದದಲ್ಲೇ ಇದ್ದಾರೆ ಎಂದರು. 
ಇಲ್ಲಿಂದಲೇ ಸಮಾನತೆ ಆರಂಭವಾಗಲಿ: ರಾಜ್ಯದಲ್ಲಿ ಅಹಿಂದ ನಾಯಕತ್ವ ಮತ್ತು ಸಂಘಟನೆ ಇಲ್ಲದೆ ಮುನ್ನಡೆಯುವುದು ಕಷ್ಟಕರವಾಗಿದೆ. ಶೋಷಿತ ಸಮುದಾಯಗಳ ಏಕತೆ, ಸಾಮಾಜಿಕ ನ್ಯಾಯ, ಶೈಕ್ಷಣಿಕ ಪ್ರಗತಿ ಮತ್ತು ಉದ್ಯೋಗಾವಕಾಶಗಳು ಅಹಿಂದ ರಾಜಕೀಯದ ಪ್ರಮುಖ ಆಧಾರಸ್ತಂಭಗಳಾಗಬೇಕು. ಮುಂದಿನ ದಿನಗಳಲ್ಲಿ ರಾಜಕೀಯ ಹೊರತು ಪಡಿಸಿ ನಾವು ಹಲವು ವಿದ್ವಾಂಸರು ಕರೆಸಿ ನಿಮಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ.  ನಾನು ಕೂಡಾ  ವೇದಿಕೆ ಕೆಳಗಡೆ ನಿಮ್ಮೊಂದಿಗೆ  ಕುಳಿತುಕೊಳ್ಳುವ ಮೂಲಕ ಇಲ್ಲಿಂದಲೇ ಸಮಾನತೆ ಪ್ರಾರಂಭಿಸೋಣ ಎಂದು ಹೇಳಿದರು.
ಯಾರು ಬಸವಣ್ಣನವರ ವಿಚಾರಗಳನ್ನು ಬೆಂಬಲಿಸುತ್ತಿದ್ದಾರೆ ಅವರಿಗೆ ನಾವು ಶಕ್ತಿ ತುಂಬಬೇಕು.  2028 ಗುರಿ ನಮ್ಮದಾಗಬೇಕು. ಜಾತಿ ನೋಡಿ ಇವರು ನಮ್ಮವರೇ ಇದ್ದಾರೆ ಅನ್ನುವುದು ತಪ್ಪು. ಅಂತರವನ್ನು ನಮ್ಮ ಕಡೆ ಕರೆ ತರುವ ಕೆಲಸವಾಗಬೇಕು. ಈ ಸಭೆ ಮೂಲಕ 2 ಜಿ ಆರಂಭಿಸಿದ್ದೇವೆ. ಮುಂದೆ 3 ಜಿ, 4 ಜಿ, 5 ಜಿ ಆರಂಭಿಸುತ್ತೇವೆ. ಅಹಿಂದ ವರ್ಗ ಸರ್ಕಾರದ ಸೇತುವೆ ಕೆಲಸವಾಗಬೇಕು. ಯಾರು ಕೆಲಸ ಮಾಡಲು ಸಿದ್ದರಿದ್ದರಿ ನಮ್ಮ ಜತೆ ನಿಲ್ಲಿ ಎಂದು ಕರೆ ನೀಡಿದರು.
ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ್ ದಾಸ್ ಮಾತನಾಡಿ, ಈ ಕಾರ್ಯಕ್ರಮಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರು ಕರೆದ ಕಾರಣ ಬಂದಿದ್ದೇನೆ. ಅವರ ಪ್ರೀತಿಯಿಂದ ಆಗಮಿಸಿದ್ದೇನೆ. ಜಗತ್ತಿನ ಯಾವುದೇ ದೇಶಗಳಲ್ಲಿ ಇರದಷ್ಟು ಜಾತಿಗಳು ಭಾರತ ದೇಶದಲ್ಲಿ ಇವೆ. ಇಲ್ಲಿ ಜಾತಿವ್ಯವಸ್ಥೆ ಪ್ರಮುಖವಾಗಿದೆ. ಅತೀ ಹೆಚ್ಚು ಅನಕ್ಷರಸ್ಥರು ಇಂದು ಹಿಂದುಳಿದ ಜಾತಿಗಳಲ್ಲಿಯೇ ಇದ್ದಾರೆ.  ಈ ವ್ಯವಸ್ಥೆ ವಿರುದ್ದ ಬುದ್ದ, ಬಸವಣ್ಣವರು ಕ್ರಾಂತಿಯ ಬೀಜ ಬಿತ್ತಿ  ಹೋರಾಡಿ ಎಲ್ಲರೂ ಸಮಾನರು ಎಂದು ಪ್ರತಿಪಾದಿಸಿದರು.  ಡಾ. ಬಿ.ಆರ್‌ ಅಂಬೇಡ್ಕರ್‌ ಅವರು ಸಂವಿಧಾನ ಮೂಲಕ ರೂಪ ಕೊಟ್ಟರು.  ಆದರೆ ಸಂವಿಧಾನ ಜಾರಿಗೆ ಬಂದ ನಂತರ ಸಾಕಷ್ಟು ಬದಲಾವಣೆಗಳು ಆಗಿವೆ. ಆಗಿಲ್ಲವೆಂದು ಹೇಳಲಿಕ್ಕೆ ಆಗಲ್ಲ, ಆದರೂ ದೇಶದಲ್ಲಿ ಇನ್ನೂ ಸಾಕಷ್ಟು ಸಮಸ್ಯೆಗಳು ಉಳಿದುಕೊಂಡಿವೆ ಎಂದರು.
 ಭಯೋತ್ಪಾದನೆ, ಕೋಮುವಾದ, ಭ್ರಷ್ಟಾಚಾರ ಇನ್ನೂ ನಮ್ಮನ್ನು ಕಾಡುತ್ತಿದೆ.  ಸಂವಿಧಾನ ರಕ್ಷಿಸುವ ಕೆಲಸ ಮಾಡಬೇಕು. ಇಡೀ ಸಾಮಾಜಿಕ ನ್ಯಾಯವನ್ನು ಹಾಳು ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ.  ಕೇವಲ ಹೋರಾಟ ಎಂದರೆ ಮೂರು ತಿಂಗಳಿಗೊಮ್ಮೆ ಕಾರ್ಯಕ್ರಮ ಮಾಡುವುದು ಅಲ್ಲ, ನೀವೆಲ್ಲ ನಿರಂತರವಾಗಿ ಸಂಘಟನೆಯಲ್ಲಿ ತೊಡಗಬೇಕು. ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಓದಬೇಕು.  ಸ್ಪಷ್ಟತೆ ಇಲ್ಲದೇ ಹೋರಾಟ ಮಾಡಿದರೆ ಹೋರಾಟಕ್ಕೆ ಫಲ ಸಿಗಲ್ಲ, ಬರೀ ಸತೀಶ್ ಜಾರಕಿಹೊಳಿ ಅಷ್ಟೇ ಹೋರಾಟ, ಸಂಘಟನೆ ಮಾಡಿದರೆ ಸಾಲದು, ಇಲ್ಲಿರುವ ಪ್ರತಿಯೊಬ್ಬರು ಹೋರಾಟಕ್ಕೆ ಧುಮುಕಬೇಕು ಎಂದು ಕರೆ ನೀಡಿದರು.
ಕೇವಲ ಮೀಸಲಾತಿ ಇಟ್ಟುಕೊಂಡು ಎಲ್ಲಾ ಜನರನ್ನು ಜಾಗೃತಿ ಮಾಡಲಿಕ್ಕೆ ಆಗಲ್ಲ, ಎಲ್ಲಾ ಜಾತಿಗಳ ಸಮಸ್ಯೆಯನ್ನು ತೆಗೆದುಕೊಂಡು ಮುನ್ನುಗಬೇಕು. ಹೋರಾಟದ ಹಾದಿಗಳು ಬದಲಾಗಬೇಕು.  ಎಲ್ಲ ಮಹಿಳೆಯರ, ಯುವಕರ ಹಿತ ಕಾಪಾಡಲು ಅಹಿಂದ ನಿಲ್ಲಬೇಕು. ಹೋರಾಟ ಕಟ್ಟಲು ನೈತಿಕತೆ ಬೇಕು. ನೈತಿಕತೆ ಇಲ್ಲದಿದ್ದರೆ ಹೋರಾಟಕ್ಕೆ ಅರ್ಥವಿಲ್ಲ ಎಂದು ಹೇಳಿದರು. 
ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ,  25 ವರ್ಷಗಳ ಹಿಂದೆ ಹುಟ್ಟಿದ ಅಹಿಂದ ಸಂಘಟನೆ ಇಂದು ಹೆಮ್ಮರವಾಗಿ ಬೆಳೆದಿದೆ. ಅಹಿಂದಕ್ಕೆ ಸಂವಿಧಾನವೇ ಶಕ್ತಿ. ಪ್ರತಿಯೊಬ್ಬರೂ ಪ್ರೀತಿಯಿಂದ ಇರಬೇಕು. ಅಂದಾಗ ಮಾತ್ರ ನಮ್ಮ ರಾಜ್ಯ ಅಭಿವೃದ್ಧಿ ಕಡೆಗೆ ಸಾಗಲು ಸಾಧ್ಯವಿದೆ. ಶಿಕ್ಷಣ ಪಡೆದಾಗ ಮಾತ್ರ ನಮಗೆ ಶಕ್ತಿ ದೊರಕು ಸಾಧ್ಯ. ಮಾನ್ಯ ನ್ಯಾಯಮೂರ್ತಿ ಅವರು ನೀಡಿದ ಸಂದೇಶಗಳನ್ನು ಪಾಲಿಸಿ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಅಧ್ಯಕ್ಷ ಕೆ.ಎಮ್, ರಾಮಚಂದ್ರಪ್ಪ ಮಾತನಾಡಿ, ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸರರು ಹಿಂದುಳಿದ ಸಮಾಜಗಳ ಸ್ಥಿತಿಗತಿ ಅರಿತು ನಮ್ಮ ಮಕ್ಕಳಿಗೆಗಾಗಿ ಅವರ ಅವಧಿಯಲ್ಲಿ 3000 ಸಾವಿರ ಹಾಸ್ಟೆಲ್ ಗಳನ್ನು ಆರಂಭಿಸಿದರು ಎಂದು ಹೇಳಿದರು. ಇದೇ ವೇಳೆ ಗಣ್ಯರಿಂದ  ಅಹಿಂದ ದಾರಿ, ಗುರಿ ಎಂಬ ಪುಸ್ತಕ ವನ್ನು ಬಿಡುಗಡೆಗೊಳಿಸಲಾಯಿತು.
ಈ ವೇಳೆ ಶಿಗ್ಗಾಂವಿ ಶಾಸಕ ಯಾಸೀರ್ ಖಾನ ಪಠಾಣ್,  ಅಪೆಕ್ಸ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ,  ವಿಧಾನ ಪರಿಷತ್ ಸದಸ್ಯ ಎಸ್.ಎಫ್. ಜಕ್ಕಪ್ಪನವರ್, ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ಅನಂತ ನಾಯಿಕ, ಬೆಳಗಾವಿ ಬೂಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ,   ಮಾಜಿ ಶಾಸಕ ರಾಜು ಆಲಗೂರ, ಪ್ರದೀಪ್ ರಾವುತ್, ಆದರ್ಶ ಯಲ್ಲಪ್ಪಾ, ದಾನಪ್ಪ ಕಬ್ಬೆರ್, ಮಂಜುನಾಥ ಬೋವಿ, ತೋಳಿ ಭರಮಣ್ಣ, ರಾಜಾ ನಾಯಿಕ, ಚಂದ್ರಶೇಖರ್, ಶಿವಣ್ಣ ಮುತ್ತಳ್ಳಿ ಸೇರಿದಂತೆ ಇತರರು ಇದ್ದರು. 
ಕಾರ್ಯಕ್ರಮಕ್ಕೆ ಕಳೆ ತಂದ ಕ್ರಾಂತಿಗೀತೆಗಳು:
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಅಹಿಂದ-25 ವಿಚಾರ ಸಂಕಿರಣ ಕೇವಲ ರಾಜಕೀಯ ಭಾಷಣಗಳಿಗೆ ಸೀಮಿತವಾಗದೆ, ಅಲ್ಲಿ ಮೊಳಗಿದ ಕ್ರಾಂತಿಗೀತೆಗಳು ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದಿವು.  ಹೋರಾಟಗಾರರನ್ನು ಹುರಿದುಂಬಿಸಲು ಮತ್ತು ಅಹಿಂದ ಚಳುವಳಿಯ ಸತ್ವವನ್ನು ಬಿಂಬಿಸಲು ಅಹಿಂದ ವರ್ಗಗಳ ಸಂಘಟನೆ ಮತ್ತು ಸಾಮಾಜಿಕ ಸಮಾನತೆಯ ಆಶಯವುಳ್ಳ ಜಾನಪದ ಶೈಲಿಯ ಕ್ರಾಂತಿಗೀತೆಗಳು ಸಭಿಕರನ್ನು ರಂಜಿಸಿದವು. ಮುಖ್ಯವಾಗಿ ಶರಣರು ಮತ್ತು ತತ್ವಕಾರರ ವಿಚಾರಗಳನ್ನು ಆಧರಿಸಿದ ಗೀತೆಗಳು ಅಹಿಂದ ಅಸ್ಮಿತೆಯನ್ನು ಎತ್ತಿ ಹಿಡಿದವು. 25 ವರ್ಷಗಳ ಹಿಂದೆ ಅಹಿಂದ ಚಳವಳಿ ಆರಂಭವಾದ ಅದೇ ಹುಬ್ಬಳ್ಳಿಯಲ್ಲಿ ಇಂದು ಮತ್ತೆ ಶೋಷಿತ ಸಮುದಾಯಗಳು ದೊಡ್ಡ ಮಟ್ಟದಲ್ಲಿ ಒಗ್ಗೂಡಿ ತಮ್ಮ ಶಕ್ತಿ ಪ್ರದರ್ಶಿಸಿತು.  ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಅಹಿಂದ ಚಳವಳಿಯ ಪ್ರಮುಖ ಸಂಘಟಕರಾದ ಕೆ.ಎಂ. ರಾಮಚಂದ್ರಪ್ಪ ಮತ್ತು ಇತರ ಮುಖಂಡರು ಭಾಗವಹಿಸಿ, ಮುಂಬರುವ ದಿನಗಳಲ್ಲಿ ಅಹಿಂದ ಚಳವಳಿಯನ್ನು ಗಟ್ಟಿಗೊಳಿಸುವ ಸಂಕಲ್ಪ ಮಾಡಿದರು. ಕೇವಲ ರಾಜಕೀಯ ಸಮಾವೇಶವಾಗದೆ, "ಹೋರಾಟ–ಸಾಧನೆ–ಸಂಕಲ್ಪ" ಎಂಬ ಘೋಷವಾಕ್ಯದಡಿ ಸಾಮಾಜಿಕ ನ್ಯಾಯ ಮತ್ತು ಜಾತಿ ಗಣತಿ ಜಾರಿ ಕುರಿತು ಗಂಭೀರ ವಿಚಾರ ಮಂಥನ ನಡೆಯಿತು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST