ಕಾಗವಾಡ: ಪಟ್ಟಣ ಪಂಚಾಯತಿಯಲ್ಲಿ ಖಾತಾ ಬದಲಾವಣೆಗೆ ಏಜೆಂಟರಿಂದ ಹತ್ತರಿಂದ ಹದಿನೈದು ಸಾವಿರ ಬೇಡಿಕೆಗಳನ್ನಿಟ್ಟು ಖಾತಾ ಬದಲಾವಣೆ ಮಾಡುತ್ತಿದ್ದು,ಇದರಿಂದ ಬಡ ದಲಿತರಿಗೆ ಅನ್ಯಾಯವಾಗುತ್ತಿದ್ದು,ಶೀಘ್ರವಾಗಿ ಇದು ಸಂಪೂರ್ಣ ನಿಷೇಧಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಇದರ ವಿರುದ್ದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವದೆಂದು ಯುವ ಮುಖಂಡ ವಿಶಾಲ ದೊಂಡಾರೆ ಹೇಳಿದರು.
ಅವರು ಗುರುವಾರ ದಿ.13 ರಂದು ಕಾಗವಾಡ ಪಟ್ಟಣ ಪಂಚಾಯತ ಎದರು ಹಮ್ಮಿಕೊಂಡ ಪ್ರತಿಭಟನೆ ಹಮ್ಮಿಕೊಂಡು ಮಾತನಾಡುತ್ತಿದ್ದರು, ಅವರು ಮುಂದೆ ಮಾತನಾಡುತ್ತಾ,ಪಟ್ಟಣ ಪಂಚಾಯತ್ ನಲ್ಲಿ ಖಾತಾ ಬದಲಾವಣೆ ಮಾಡುತ್ತೇನೆಂದು ಬಡವರರಿಂದ ಏಜೆಂಟರು ಬಡವರಿಂದ ಹಣದ ಬೇಡಿಕೆ ಇಡುತ್ತಿದ್ದು,ಇದರಿಂದ ಜನರು ಹೈರಾಣಾಗುತ್ತಿದ್ದು ಇದರ ಬಗ್ಗೆ ಅಧಿಕಾರಿಗಳು ಕಡಿವಾಣ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೆ ವೇಳೆ ಮಾತನಾಡಿದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಗಣೇಶ ಕಲ್ಯಾಣಶೆಟ್ಟಿ ಮಾತನಾಡಿ,ಹಣದ ಬೇಡಿಕೆ ವಿಚಾರ ಇಲ್ಲಿಯವರೆಗೆ ನನ್ನ ಗಮನಕ್ಕೆ ಬಂದಿಲ್ಲ ಹಾಗೆನಾದರೂ ಕಂಡು ಬಂದಲ್ಲಿ ಅದರ ಬಗ್ಗೆ ಶಿಸ್ತು ಕ್ರಮ ಜರುಗಿಸಲಾಗುವದು ಎಂದು ಹೇಳಿದರು.
ಬಸವನಗರ ಮೂಲಸೌಕರ್ಯಗಳಿಂದ ವಂಚಿತವಾಗಿದ್ದು ರಸ್ತೆ,ವಿದ್ಯುತ್, ಕುಡಿಯುವ ನೀರು ಸಮರ್ಪಕವಾಗಿ ಒದಗಿಸಿಕೊಡಬೇಕೆಂದು ಮಹಿಳೆಯರು ಮನವಿ ಮಾಡಿಕೊಂಡರು.
ಉಪತಹಶಿಲ್ದಾರ ಅಣ್ಣಾಸಾಬ ಕೋರೆ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ವಿಶಾಲ ಧೋಡಾರೆ, ಸುನೀಲ ಮದಭಾವಿ,ಯಲ್ಲಪ್ಪ ಕಾಂಬಳೆ,ಅಕ್ಷಯ ಮೇತ್ರೆ ನಿತಿನ್ ಕಾಂಬಳೆ,ರಾಹುಲ್ ಕಾಂಬಳೆ, ಅಕ್ಷಯ ದೇವನೆ,ಅಮೊಲ ಕಾಂಬಳೆ,ಸತೀಶ ಬೀರನಗೆ,ಅಪ್ಪಾಜಿ ಕಾಂಬಳೆ,ಸಂಜು ಕಾಂಬಳೆ,ಬಬಲು ಕಾಂಬಳ,ದೀಪಾಲಿ ಕಾಂಬಳೆ,ಲಲಿತಾ ಕಾಂಬಳೆ,ಅಕ್ಕಾತಾಯಿ ಡವರೆ,ಸೇರಿದಂತೆ ಅನೇಕರು ಇದ್ದರು.