LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

 ಶಿವಗಿರಿ ಸೊಸೈಟಿ ವತಿಯಿಂದ ಮಹಿಳಾ ಸ್ವ-ಸಹಾಯ ಗುಂಪುಗಳ ದಶಮಾನೋತ್ಸವ ಕಾರ್ಯಕ್ರಮ

ಮಹಿಳೆಯರು ಆರೋಗ್ಯದ ಕಡೆ ಗಮನ ಹರಿಸಿ: ಡಾ. ಸ್ಫೂರ್ತಿ ಮಾಸ್ತಿಹೋಳಿ

ಬೆಳಗಾವಿ:  ದೈನಂದಿನ ಜೀವನದ ಕೆಲಸ ಕಾರ್ಯಗಳ  ಒತ್ತಡದ ನಡುವೆ  ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕಾಳಜಿ ವಹಿಸಿ,  ಆರೋಗ್ಯಕರವಾದ ಸುಖಮಯವಾಗಿ ನಡೆಸಬೇಕು ಎಂದು ಹ್ಯಾಪಿ ಹಾರ್ಟ್ ಫೌಂಡೇಶನ್ ಮುಖ್ಯಸ್ಥರಾದ ಡಾ. ಸ್ಫೂರ್ತಿ ಮಾಸ್ತಿಹೋಳಿ  ಅವರು ಹೇಳಿದರು.

ನಗರದ ಹಳೆ ಪಿ ಬಿ  ರಸ್ತೆಯ ಶುಭಾರಂಭ ಸಾಂಸ್ಕೃತಿಕ ಭವನದಲ್ಲಿ  ಶಿವಗಿರಿ ಸೊಸೈಟಿ ವತಿಯಿಂದ ಮಹಿಳಾ ದಿನಾಚರಣೆ ಹಾಗು ಶಿವಗಿರಿ ಮಹಿಳಾ ಸ್ವ-ಸಹಾಯ ಗುಂಪುಗಳ ದಶಮಾನೋತ್ಸವ  ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬದುಕಿನಲ್ಲಿ ಹಲವಾರು ಸಮಸ್ಯೆಗಳಿಗೆ ಎದುರಾಗುತ್ತವೆ. ಎಷ್ಟೇ ಒತ್ತಡಗಳಿದ್ದರೂ ನಮ್ಮ ವೈಯಕ್ತಿಕ ಕೌಟುಂಬಿಕ ಜೀವನದ ಬಗ್ಗೆ ಕಾಳಜಿವಹಿಸಬೇಕು, ಯಾವುದೇ ತಲೆ ಬಾಗದೇ ಎಲ್ಲವನ್ನು ಎದುರಿಸಿ ಜೀವನದಲ್ಲಿ ಉತ್ತಮ ರೂಪಿಸಿಕೊಳ್ಳಬೇಕು. ಅದರೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಮಹಿಳೆಯರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ನೂರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ  ಪಾಲ್ಗೊಂಡು ಸಂಭ್ರಮಿಸಿದರು. ನಂತರ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ  ಸೊಸೈಟಿಯ ಅಧ್ಯಕ್ಷರಾದ ಸುಜನ್ ಕುಮಾರ್ ಬಿಲ್ಲವ ಸಂಘದ ಅಧ್ಯಕ್ಷರಾದ ಹಾಗು ಸೊಸೈಟಿಯ ಉಪಾಧ್ಯಕ್ಷರಾದ ಸುನಿಲ್ ಪೂಜಾರಿ ನಿರ್ದೇಶಕರಾದ ಸುಂದರ ಕೋಟ್ಯಾನ್ , ಸುರೇಶ್ ಜತನ್ ,ಬೇಬಿ ಪೂಜಾರಿ  , ರಮೇಶ್ ಬಸನಾಯ್ಕ್ , ಸೊಸೈಟಿಯ  ಸಲಹಾ ಸಮಿತಿ ಸದಸ್ಯರಾದ ಗಣೇಶ್ ಪೂಜಾರಿ,  ನೇತ್ರಾವತಿ ಸಬ್ನಿಸ್  , ಲಕ್ಷ್ಮೀ ಪೂಜಾರಿ, ಸೊಸೈಟಿಯ ಸಿಬ್ಬಂದಿಗಳು  ಇದ್ದರು. ವ್ಯವಸ್ಥಾಪಕರಾದ ಚಂದ್ರ ಹೆಚ್ ಪೂಜಾರಿ ನಿರೂಪಿಸಿ ವಂದಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆವಿ.ಶ್ರೀ.ಕೃ. ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜತಾಳಿಕೋಟೆ ತಾಲೂಕು ಕೂಡ ಶೀಘ್ರ ಬರಪೀಡಿತ ಪಟ್ಟಿಗೆ : ಶಾಸಕ ನಾಡಗೌಡತೇರದಾಳ ಹಾಗೂ ರಬಕವಿ /ಬನಹಟ್ಟಿ ತಾಲೂಕುಗಳು ಬರಗಾಲ ಪಟ್ಟಿಗೆ, ಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ.ರೋಗಿಗಳಿಗೆ ಹಾಲುಹಣ್ಣು ವಿತರಿಸಿ ಬಿಜೆಪಿ ಕಾರ್ಯಕರ್ತರಿಂದ ’ಸೇವಾ ಸಂಕಲ್ಪಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಫಾರಂ-2 ಇ-ಖಾತಾ ಮಾಡಿಕೊಡಲು ಆಗ್ರಹಸೆ.20ರಂದು ಬಳ್ಳಾರಿಯಲ್ಲಿ ಹಿಂದೂ ಮಹಾ ಗಣಪತಿ ಭವ್ಯ ಶೋಭಾಯಾತ್ರೆಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ ಸಿಎಂ ಕನಸು; ಜನರಿಗೆ ತೊಂದರೆ ನೀಡಿದರೆ ಕ್ರಮ: ನಾರಾ ಭರತ್ ರೆಡ್ಡಿ