ಬೆಳಗಾವಿ.ಕೂಡಲಸಂಗಮ ಪಂಚಮಸಾಲಿ ಪೀಠದ ಪೀಠಾಧಿಪತಿಗಳಾದ ಶ್ರೀ ಬಸವಜಯಮೃತ್ಯುಂಜಯ ಮಹಾಸ್ವಾಮಿಜಿಯವರ ಮೇಲೆ ಸುಳ್ಳು ಆರೋಪ ಖಂಡಿಸಿ ಪತ್ರಿಕಾಗೋಷ್ಠಿ
ಇತ್ತೀಚಿನ ಖಾಸಗಿ ಸುದ್ದಿವಾಹಿನಿಯಲಿ ಒಬ್ಬ ಮಹಿಳೆಯನ್ನು ಬಳಸಿಕೊಂಡು ಪೂಜ್ಯರ ಮೇಲೆ ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪ ಮಾಡಿ ಪೂಜ್ಯರ ತೋಜೋವಧೆ ಮಾಡಲಾಗಿತ್ತು. ಇದು ಪೂಜ್ಯರ ವಿರುದ್ಧ ಪಂಚಮಸಾಲಿ ಸಮಾಜದಲ್ಲಿ ಅಗೌರವವನ್ನುಂಟು ಮಾಡುವ ವ್ಯವಸ್ಥಿತ ಪಿತೂರಿಯಾಗಿತ್ತು.
ಪೂಜ್ಯರು ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿದ್ದ ಕಾರಣ ಇದು ಕೆಲವರಿಗೆ ಸಹನೆಯಾಗುತ್ತಿಲ್ಲ. ಸಮಾಜ ಮತ್ತು ಪೂಜ್ಯರ ಮನೋಭಲವನ್ನು ಕುಗ್ಗಿಸಲು ವ್ಯವಸ್ಥಿತ ಷಡ್ಯಂತ್ರ ನಡೆಸಲಾಗಿದೆ, ಈ ಸಂಚಿನ ಹಿಂದೆ ಒಬ್ಬ ರಾಜಕೀಯ ಪ್ರಭಾವಿ ನಾಯಕನಿದ್ದು ಅವರು ಯಾರು ಎಂಬುದು ಈಗಾಗಲೇ ಬಹಿರಂಗಗೊಂಡಿದೆ. ಈ ಪ್ರಕರಣದಲ್ಲಿ ಯಾವ ಮಹಿಳೆಯನ್ನು ಬಳಸಿಕೊಂಡು ಸುಳ್ಳು ಲೈಂಗಿಕ ದೌರ್ಜನ್ಯದ ಆರೋಪ ಮಾಡಲಾಗಿತ್ತೋ, ಈಗ ಅದೇ ಸಂತ್ರಸ್ತ ಮಹಿಳೆ ಸಾಮಾಜಿಕ ಜಾಲ ತಾಣದ ಮುಂದೆ ಬಂದು ಇದು ಎಲ್ಲ ಸುಳ್ಳು ಈ ಪ್ರಕರಣದಲ್ಲಿ ನನ್ನನ್ನು ಬಳಸಿಕೊಂಡು ಈ ರೀತಿ ಪೂಜ್ಯರ ತೇಜೋವಧೆ ಮಾಡುಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಯಾವುದೇ ರೀತಿ ಲೈಂಗಿಕ ದೌರ್ಜನ್ಯವಾಗಿಲ್ಲವೆಂದು ಮಹಿಳೆ ಸ್ಪಷ್ಟವಾಗಿ ತಿಳಿಸಿದ್ದಾರೆ.
ಪಂಚಮಸಾಲಿ ಸಮಾಜದ ಪೂಜ್ಯರ ಭಕ್ತ ಸಮುದಾಯ ಆಕ್ರೋಶಗೊಂಡಿದ್ದು ಇದನ್ನು ಖಂಡಿಸಿ ಈ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ಹಾಗೂ ಪೂಜ್ಯರಿಗೆ ನ್ಯಾಯ ಸಿಗಬೇಕು ಮತ್ತು ಈ ಪ್ರಕರಣದ ಹಿಂದೆ ಕೈವಾಡ ಇರುವ ವ್ಯಕ್ತಿಯನ್ನು ಬಂಧಿಸಬೇಕು ಎಂದು ಅಗ್ರಹಿಸಿ, ತಾಲೂಕಾಮಟ್ಟದಲ್ಲಿ ಬೃಹತ್ ಪ್ರತಿಭಟನೆ ಮಾಡಲು ಪಂಚಮಸಾಲಿ ಸಮುದಾಯ ಸಿದ್ದಗೊಂಡಿದೆ ಎಂದು ಗೋಕಾಕ ತಾಲೂಕಿನ ಘಟಕದ ಅಧ್ಯಕ್ಷರಾದ ಗಂಗಾಧರ ಬಡಕುಂದ್ರಿ (ವಕೀಲರು ) ಘಟಪ್ರಭಾ ಇವರು ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ಮೂಲಕ ತಿಳಿಸಿದ್ದಾರೆ.
ಈ ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಹಿರಿಯಾರಾದ ಕಲ್ಲಪ್ಪಕೊಂಕಣಿ, ಕೆಂಚಪ್ಪಾಪಾಟೀಲ,
ಮಾರುತಿ ಶಿಂದ್ರಿ, ಪಿಕೆಪಿಎಸ್ ಅಧ್ಯಕ್ಷರಾದ ಮುತ್ತಣ ಹತ್ತರವಾಟ, ಬಾಬು ಬಡಕುಂದ್ರಿ, ಅಪ್ಪಾಜಿ ಹುದ್ದಾರ, ಮಾರುತಿ ಇಂಗಳಿ, ಶಿವರಾಜ ಬಡಕುಂದ್ರಿ, ಪತ್ರಕರ್ತರಾದ ವಿವೇಕಾನಂದ ಹುದ್ದಾರ, ಭೀಮಪ್ಪಾ ಮದಿಹಳ್ಳಿ, ಶಿವಕುಮಾರ ಹತ್ತರವಾಟ, ಭೀಮಪ್ಪಾಬನನ್ನವರ ಹಾಗೂ ಕೆಂಪಣ್ಣಾಹತ್ತರವಾಟ ಉಪಸ್ಥಿತರಿದ್ದರು.


