ಪ್ರಜಾಪ್ರಭುತ್ವದಲ್ಲಿ ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳ ನಿರ್ವಹಿಸುವದೆ ಸಂವಿದಾನದ ಮೂಲ ಆಶಯ :ಶಾಸಕ ನಿಖಿಲ್ ಕತ್ತಿ

Pratibha Boi
ಪ್ರಜಾಪ್ರಭುತ್ವದಲ್ಲಿ ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳ ನಿರ್ವಹಿಸುವದೆ ಸಂವಿದಾನದ ಮೂಲ ಆಶಯ :ಶಾಸಕ ನಿಖಿಲ್ ಕತ್ತಿ
WhatsApp Group Join Now
Telegram Group Join Now

ಹುಕ್ಕೇರಿ : ಸಂವಿದಾನ ಶಿಲ್ಪಿ ಡಾ ಬಿ,ಆರ್ ಅಂಬೇಡ್ಕರ ಅವರು ದೇಶಕ್ಕೆ ನೀಡಿದ ಕೊಡುಗೆ ದೇಶದ ಅಭಿವೃದ್ದಿಗೆ ಮುನ್ನುಡಿ ಎಂದು ಶಾಸಕ ನಿಖಿಲ್ ಕತ್ತಿ ಹೇಳಿದರು.
ಅವರು ಪಟ್ಟಣದಲ್ಲಿ ಕೋರ್ಟ ಸರ್ಕಲ್ ಹತ್ತಿರವಿರುವ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ ಪ್ರತಿಮೆಗೆ ಮಾಜಿ ಸಂಸದ ರಮೇಶ ಕತ್ತಿ ಅವರ ಜೊತೆಗೆ ಮಾಲಾರ್ಪಣೆ ಅರ್ಪಿಸಿ ಗೌರವ ನಮನ ಸಲ್ಲಿಸಿ ಮಾತನಾಡಿದರು. ಪ್ರಜಾಪ್ರಭುತ್ವದಲ್ಲಿ ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳ ನಿರ್ವಹಿಸುವದೆ ಸಂವಿದಾನದ ಮೂಲ ಆಶಯ, ಎಂದರು.
ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ ಭಾರತ ರತ್ನ ಡಾ ಅಂಬೇಡ್ಕರ ಅವರ ವಿಚಾರಧಾರೆಗಳನ್ನು ಹಾಗೂ ಸಂವಿದಾನದ ಬಗ್ಗೆ ಅರಿತು ಸಮಾಜದಲ್ಲಿ ಪ್ರತಿಯೊಬ್ಬರೂ ಅರಿತು ಅಳವಡಿಸಿಕೊಂಡು ನಡೆಯುವದು ಜಯಂತಿಯ ಸಾರ್ಥಕತೆ ಎಂದರು.
ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಗಜಾನನ ಕ್ವಳಿ, ಪುರಸಭೆ ಸದಸ್ಯರಾದ ರಾಜು ಮುನ್ನೋಳಿ, ಮಹಾಂತೇಶ ತಳವಾರ, ಸಿದ್ದಪ್ಪಾ ಹಳಿಜೋಳ, ಸುನಿಲ ಪರ್ವತರಾವ್ ರೋಹನ ನೇಸರಿ, ಉದಯ ಹುಕ್ಕೇರಿ, ಸುನೀಲ ಬೈರನ್ನವರ, ಬಸವರಾಜ ಗಂಗನ್ನವರ, ಬಾಳಪ್ಪಾ ಪೂಜೇರಿ, ಶಶಿಕಾಂತ ಹೊನ್ನಳಿ, ರವಿ ಸನದಿ, ಮಲ್ಲಪ್ಪಾ ಮಾನೆ. ಕಾಡೇಶ ಹೊಸಮನಿ, ರವಿ ಈರಗಾರ, ಮತ್ತಿತರರು ಉಪಸ್ಥಿತರಿದ್ದರು,

 

WhatsApp Group Join Now
Telegram Group Join Now
Share This Article