ಕಾಗವಾಡ ಪಟ್ಟಣದ ಬಸವ ನಗರದಲ್ಲಿ ಏ.14: ಡಾ. ಬಿ.ಆರ್. ಅಂಬೇಡ್ಕರ್ ಅವರು ತೋರಿಸಿದ ಮಾರ್ಗ ಮತ್ತು ತತ್ವಗಳನ್ನು ಅನುಸರಿಸುವ ಮೂಲಕ ಉತ್ತಮ ಸಮಾಜದ ನಿರ್ಮಾಣ ಸಾಧ್ಯವೆಂದು ದಲಿತ ಮುಖಂಡರಾದ ಪ್ರಕಾಶ ಧೋಂಡಾರೆ ಹೇಳಿದರು.
ಅವರು ದಿ 14ರಂದು ಪಟ್ಟಣದ ಬಸವನಗರದಲ್ಲಿ ವಿವಿದ ದಲಿತ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡ ಡಾ.ಬಿ.ಆರ್.ಅಂಬೇಡ್ಕರ್‌ರವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ವಿದ್ಯೆ ಎನ್ನುವುದು ಸಮಾಜದಲ್ಲಿ ಏನೆಲ್ಲ ಸಾಧನೆ ಮಾಡಬಹುದು ಎಂಬುದಕ್ಕೆ ಅಂಬೇಡ್ಕರ್ ಅವರು ಜೀವಂತ ಉದಾಹರಣೆ. ಅವರ ಆದರ್ಶಗಳು ಮತ್ತು ತತ್ವಗಳು ನಮಗೆ ಪ್ರೇರಣೆಯಾಗಬೇಕು. ಇಂತಹ ಸಂದರ್ಭಗಳಲ್ಲಿ ಜಾತಿ, ಪಕ್ಷಪಾತವನ್ನು ಮರೆಯಬೇಕು,” ಎಂದ ಅವರು, ಜನತೆಗೆ ಉತ್ತಮ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಕರೆ ನೀಡಿದರು.
ಈ ವೇಳೆ.ಅಧ್ಯಕ್ಷರು, ಪ್ರಕಾಶ ಧೋಂಡಾರೆ, ಉಪಾಧ್ಯಕ್ಷರು, ವಿನೋದ ಹುಲಸಾರ,ಅರುಣ ಫರಾಂಡ, ವೀರೇಂದ್ರ ಜಾಡರ, ಜ್ಯೋತಿಕುಮಾರ ಪಾಟೀಲ, ರಾಘವೇಂದ್ರ ಖೋತ ,ವಿದ್ಯಾಧರ ಧೋಂಡಾರೆ,ಕಾಕಾ ಪಾಟೀಲ, ರಮೇಶ ಚೌಗಲೆ, ಚಿದಾನಂದ ಅವಟಿ,ಕಾಕಾ ಚೌಗಲೆ, ಪ್ರಕಾಶ ಮಿರ್ಜಿ,ನಾಥಾಗೌಡ ಪಾಟೀಲ,ಅನೀಲ ಧೋಂಡಾರೆ, ಸುರೇಶ ಕಾಂಬಳೆ, ಸುನೀಲ ಮಧಭಾವಿ,ಪ್ರಮೋದ ಹುಲಸಾರ, ಸಂದೀಪ್ ಕಾಂಬಳೆ, ರಾಜು ಧೋಂಡಾರೆ, ಪೀರಗೌಡ ಕಾಂಬಳೆ,ಭೀಮು ಕುರಣೆ, ಸತೀಶ ಬೀರನಗೆ ,,ದೀಪಕ ಕಾಂಬಳೆ, ಜನಾರ್ದನ ಧೋಡಾರೆ,ಮಾದವಾಂದ ಕಾಂಬಳೆ, ವಿನೋದ ದೇವನೆ,ಶೀಲಾದರ ಚೌವ್ಹಣ, ಜಗದೀಶ ಮಧಭಾವಿ,ಶಂಕರ ಕಾಂಬಳೆ,ಯಲ್ಲಪ್ಪಾ ಕಾಂಬಳೆ, ಹಾಗೂ ದಲಿತ ಸಮಾಜದ ಮುಖಂಡರು ಉಪಸ್ಥಿತರಿದ್ದರು


