‘
ಬಳ್ಳಾರಿ,ನ.03 ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಮೇರಾ ಯುವ ಭಾರತ (ಮೈ ಭಾರತ) ಬಳ್ಳಾರಿ ಕೇಂದ್ರದ ಆಶ್ರಯದಲ್ಲಿ, ನಗರದ ಬಳ್ಳಾರಿ ಇನ್ಸಿ÷್ಟ್ಟಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ‘ವಿಕಸಿತ ಭಾರತ ಯುವ ನಾಯಕರು ಸಂವಾದ-2047’ ಅಂಗವಾಗಿ ಆಯೋಜಿಸಲಾಗಿದ್ದ ‘ವಿಕಸಿತ ಭಾರತ ಯುವ ಸಂಸತ್ತು' ಕಾರ್ಯಕ್ರಮವು ಸೋಮವಾರ ನಡೆಯಿತು.
ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸಮಾವೇಶದಲ್ಲಿ ಪ್ರಸ್ತುತ ರಾಷ್ಟಿçÃಯ ಮಹತ್ವದ ವಿಷಯವಾದ ‘ಒಂದು ರಾಷ್ಟç ಒಂದು ಚುನಾವಣೆ’ ಕುರಿತು ಯುವ ಸಂಸತ್ತು ಚರ್ಚಾ ಸ್ಪರ್ಧೆ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಐಟಿಎಂ ಇಸಿಇ ವಿಭಾಗದ ಮುಖ್ಯಸ್ಥ ಡಾ. ಸದ್ಯೋಜಾತ ಕೆ. ಎಂ. ಅವರು, ಭಾರತೀಯ ಪ್ರಜಾಪ್ರಭುತ್ವವನ್ನು ಸುದೃಢಗೊಳಿಸುವಲ್ಲಿ ಚುನಾವಣೆಗಳ ಪಾತ್ರ ಅಪಾರ. ಯುವಜನರು ಜವಾಬ್ದಾರಿಯುತ ಮತದಾನ ಹಾಗೂ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಸ್ಪಷ್ಟ ಅರಿವು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿ, ಏಕಕಾಲದಲ್ಲಿ ಚುನಾವಣೆ ನಡೆಸುವ ಪರಿಕಲ್ಪನೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ. ಯು. ಶ್ರೀನಿವಾಸ ಮೂರ್ತಿ ಅವರು ಮಾತನಾಡಿ, ‘ಒಂದು ರಾಷ್ಟç, ಒಂದು ಚುನಾವಣೆ’ ಪರಿಕಲ್ಪನೆಯಿಂದ ದೇಶದಲ್ಲಿ ಚುನಾವಣಾ ವೆಚ್ಚ ಗಣನೀಯವಾಗಿ ತಗ್ಗಲಿದ್ದು, ಆಡಳಿತದಲ್ಲಿ ನಿರಂತರತೆ ಹಾಗೂ ಸ್ಥಿರತೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ದೀಪಕ್ ಪಿ. ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
*ರಾಜ್ಯ ಮಟ್ಟಕ್ಕೆ ಮೂವರು ವಿದ್ಯಾರ್ಥಿಗಳ ಆಯ್ಕೆ:*
ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ವಿಷಯ ಪ್ರಸ್ತುತಿ, ಆಳವಾದ ಚಿಂತನೆ ಹಾಗೂ ಸ್ಪಷ್ಟ ಸಂವಹನದ ಮೂಲಕ ತಮ್ಮ ದೃಷ್ಟಿಕೋನಗಳನ್ನು ಮಂಡಿಸಿದರು. ತೀರ್ಪುಗಾರರ ಮೌಲ್ಯಮಾಪನದ ನಂತರ ವಿಜೇತರನ್ನು ಘೋಷಿಸಲಾಯಿತು.
ಪ್ರಥಮ ಬಹುಮಾನ: ಪಿ. ದೀಪಕ್ (ಕಿಷ್ಕಿಂದ ವಿಶ್ವವಿದ್ಯಾಲಯ)
ದ್ವಿತೀಯ ಬಹುಮಾನ: ಈರಣ್ಣ ಗೌಡ (ಬಿಬಿಸಿ, ಬಳ್ಳಾರಿ)
ತೃತೀಯ ಬಹುಮಾನ: ಹೆಚ್. ಧರಣಿ ಕುಮಾರ ಗೌಡ (ವೀರಶೈವ ಕಾಲೇಜು, ಬಳ್ಳಾರಿ)
ಮೊದಲ ಮೂರು ಸ್ಥಾನ ಪಡೆದ ಈ ವಿದ್ಯಾರ್ಥಿಗಳು ಮುಂದಿನ ರಾಜ್ಯಮಟ್ಟದ ಯುವ ಸಂಸತ್ತು ಸ್ಪರ್ಧೆಯಲ್ಲಿ ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಬಿಐಟಿಎಂ ಉಪಪ್ರಾಂಶುಪಾಲ ಡಾ. ಬಿ. ಎಸ್. ಖೇಣೇದ್, ಪ್ರೊ. ಡಿ. ಆರಾಧನಾ, ಬಸವರಾಜ ಬಿಸಲಹಳ್ಳಿ ಉಪಸ್ಥಿತರಿದ್ದು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಡಾ. ನಾಗರಾಜ ಬಣಕಾರ ಸಮಗ್ರ ಕಾರ್ಯಕ್ರಮ ನಿರ್ವಹಿಸಿದರು.