ಬೈಲಹೊಂಗಲ.ಸರಕಾರಿ ಪದವಿ ಪೂರ್ವ ಕಾಲೇಜು, ಬೈಲಹೊಂಗಲದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೋವರ್ಸ್ ಘಟಕ ಮತ್ತು ಭಾರತೀಯ ಸಂಸ್ಕೃತಿ ವಿದ್ಯಾ ಕೇಂದ್ರ (ರಿ) ಬೆಳವಡಿ ಇವರ ಸಂಯುಕ್ತ ಆಶ್ರಯದಲ್ಲಿ ಕಾಲೇಜು ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ಗುರು ಡಾ: ಸಂತೋಷ ಯಕ್ಕುಂಡಿ ಅವರು ವಿದ್ಯಾರ್ಥಿಗಳಿಗೆ ಯೋಗ ತರಬೇತಿಯನ್ನು ನೀಡಿದರು. ಪ್ರಾಚಾರ್ಯರಾದ ಎನ್.ಎಂ. ಕುದರಿಮೋತಿ ಅವರು ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿಗಳಾದ ಮಹಾಂತೇಶ ಘೋಡಗೇರಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ಉಪನ್ಯಾಸಕರಾದ ಬಿ ಎಂ ಕೊಳವಿ, ಎಚ್‌ಪಿ ಭಜಂತ್ರಿ, ಬಿ ಸಿ ಅಡಕಿ, ಆರ್ ಬಿ ಹುನಗುಂದ, ಎಸ್ ಪಿ ದಾಸಪ್ಪನವರ, ಶ್ರೀಮತಿ ಎಂ ಆರ್ ಬಾಗೇವಾಡಿ ಭಾಗವಹಿಸಿದ್ದರು.