ಇಂಡಿ,ಜೂ,೦೯: ನಗರದಲ್ಲಿ ಕಳೆದ ಮೂರು ಅವಧಿಯಲ್ಲಿ ನೀರಾವರಿ ಕ್ಷೇತ್ರಕ್ಕೆ ಸುಮಾರು ೧.೧೦ ಹೆಕ್ಟರ ಲಕ್ಷ ಭೂಮಿಗಳಿಗೆ ನೀರಾವರಿ ಸೌಲಭ್ಯ ಒದಗಿಸಿದ್ದಾರೆ. ತಾಲೂಕಿನ ಎಲ್ಲ ಕೆರೆಗಳ ಭರ್ತಿ ತುಂಬಿಸಿ ಐ.ಬಿ.ಸಿ ಮತ್ತು ಐ.ಎಲ್.ಸಿ ಗಳ ಮೂಲಕ ನೀರು ಹರಿಸಲಾಗಿದೆ. ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ, ತೀಡಗುಂದಿ ಎಕ್ಟೇಟೆನಶನ್, ಜಲಧಾರೆ ಸೇರಿದಂತೆ ಹಲವಾರು ನೀರಾವರಿ ಕಾಮಗಾರಿ ಭರದಿಂದ ಸಾಗಲು ಕಾರಣಿ ಭುತರಾದ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು. ಒಂದು ವೇಳೆ ನೀಡದೆ ಇದ್ದಲ್ಲಿ ಪಕ್ಷದ ಹಾಗೂ ನಾಮನಿರ್ದೇಶನಗೊಂಡ ಎಲ್ಲ ಪದಾಧಿಕಾರಿಗಳು ಸಾಮೂಹಿಕವಾಗಿ ರಾಜಿನಾಮೇ ನೀಡಬೇಕಾಗುತ್ತದೆ ಎಂದು ಕರ್ನಾಕಟ ರಾಜ್ಯ ಲಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಇಂಡಿ-ಬಳ್ಳೋಳಿ ಬ್ಲಾಕ್ ಕಾಂಗ್ರೇಸ್ ಹಾಗೂ ನಾಮ ನಿರ್ದೇಶನಗೊಂಡ ಎಲ್ಲ ಪದಾಧಿಕಾರಿಗಳು ಏರ್ಪಡಿಸಿದ ಪತ್ರಿಕಾಗೊಷ್ಠೀಯ ನೇತೃತ್ವವ ವಹಿಸಿ ಮಾತನಾಡಿದರು. ನಮ್ಮ ಶಾಸಕರು ಎಂದು ಅಧಿಕಾರದ ಹಿಂದೆ ಬಿದ್ದವರಲ್ಲ ಏನಿದ್ದರು ಮತಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸಿದವರು.
ಕಳೆದ ಬಾರಿ ಮಂತ್ರಿ ಸ್ಥಾನ ಒಲಿದು ಬಂದರೂ ನಯವಾಗಿ ತಿರಸ್ಕರಿಸಿ ತಮ್ಮ ಭದ್ಧತೆಯನ್ನು ಮೇರೆದಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ನಿಗಮಗಳಿಗೆ ಅಧ್ಯಕ್ಷಸ್ಥಾನ ವರಿಷ್ಠರು ನೀಡಲು ಬಂದರೂ ಬೇಡ ಎಂದು ನನಗೆ ಎರಡನೇ ಅವಧಿಗೆ ಮಂತ್ರಿ ಸ್ಥಾನ ನೀಡಲು ವಿನಂತಿಸಿದ್ದರು. ಅದರಂತೆ ಇಂದು ವರಿಷ್ಠರ ನೀಡಿದ ಮಾತಿನಂತೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಇಲಿಯಾಸ ಬೋರಾಮಣಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶಿವಯೋಗೆಪ್ಪ ಚನ್ನಗೊಂಡ, ತಾಲೂಕಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಶಾಂತ ಕಾಳೆ, ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಅಜೀತ ಧನಶೆಟ್ಟಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬೂದಿಹಾಳ, ಕಾಂಗ್ರೇಸ್ ಎಸ್ ಟಿ ವಿಭಾಗದ ರಾಜ್ಯ ಉಪಾಧ್ಯಕ್ಷ ಸಣ್ಣಪ್ಪ ತಳವಾರ, ನಗರ ಘಟಕ ಕಾಂಗ್ರೇಸ ಅಧ್ಯಕ್ಷ ಶ್ರೀಕಾಂತ ಕೂಡಿಗನೂರ, ಮಹಿಳಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶ್ರೀಮತಿ ನೀರ್ಮಲಾ ತಳಕೇರಿ ಮುಂತಾದವರು ಮಾತನಾಡಿ ಈ ಕ್ಷೇತ್ರ ಸರ್ವತೋಮುಖ ಅಭಿವೃದ್ಧಿಗಾಗಿ ಸಚಿವ ಸ್ಥಾನ ನೀಡಬೇಕು. ಜಿಲ್ಲೆಯ ೮ ವಿಧಾನ ಸಭಾ ಕ್ಷೇತ್ರಗಳ ಶಾಸಕರು ಮಂತ್ರಿಯಾಗಿದದಾರೆ. ಇಂಡಿ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಸಚಿವ ಸ್ಥಾನ ಸಿಗದೆ ಇರುವದು ವಿಪರ್ಯಾಸ ಎಂದರು.
ಯಶವಂತರಾಯಗೌಡರು ಮೂರುಬಾರಿ. ಜಿಲ್ಲಾ ಪಂಚಾಯತ ಸದಸ್ಯರಾಗಿ ವಿರೋಧ ಪಕ್ಷದ ನಾಯಕರಾಗಿ, ಅಧ್ಯಕ್ಷರಾಗಿ, ಮೂರು ಬಾರಿ ಶಾಸಕರಾಗಿ ಅಪಾರ ಅನುಭವ ಹೊಂದಿದ್ದಾರೆ. ಇಂಡಿ ಮತಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷ ಹೆಸರು ಇದ್ದು ಇಲ್ಲದಂತಿರುವ ಈ ಕ್ಷೇತ್ರದಲ್ಲಿ ಗ್ರಾಮ ಪಂಚಾಯತ, ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ, ಪುರಸಭೆಗಳಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಅಧಿಕಾರದ ಗದ್ದಿಗೆ ಹಿಡಿಸುವಲ್ಲಿ ಇವರ ಶ್ರಮ ಸಾಖಷ್ಟು ಇದೆ. ಮಾಜದ ಕಟ್ಟ ಕಡೆ ವ್ಯಕ್ತಿಗೂ ನ್ಯಾಯ ದೊರಕಿಸಿ, ಸರ್ವರನ್ನು ಒಗ್ಗೂಡಿಸಿಕೊಂಡು ಸಮ ಸಮಾಜದ ಕಲ್ಪನೆಯನ್ನು ಸಾಕಾರಗೊಳಿಸಿದ್ದಾರೆ. ಗಡಿ ಭಾಗದ ಅಭಿವೃದ್ಧಿಗೆ ಹೊಂದಿ ಕೊಂಡಿರುವ ಬರ ಪೀಡಿತ ಹಾಗೂ ನೀರಾವರಿ ಯೊಜನೆಗಳ ತೀವ್ರ ಅಗತ್ಯವಿರುವ ಕ್ಷೇತ್ರವಾಗಿದೆ. ಈ ಭಾಗದ ಸರ್ವಾಂಗೀಣ ಅಭಿವೃದ್ಧಿಯಾಗ ಬೇಕಾದರೆ ಈ ಕ್ಷೇತ್ರಕ್ಕೆ ಸಚಿವ ಸ್ಥಾನ ಸೀಗಲೇಬೇಕು ಎಂಬುದು ಇಲ್ಲಿನ ಮತದಾರರ ದಶಕಗಳ ಬೇಡಿಕೆ. ಈ ಬಾರಿಯು ಅವಕಾಶ ತಪ್ಪಿದರೆ ಗಡಿ ಭಾಗದ ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದರು.
ಈ ಬಾರಿ ಸಚಿವಸ್ಥಾನ ನೀಡಬೇಕು ಇಲ್ಲದೆ ಹೊದರೆ ಇಂಡಿ ಬಂದ ಮಾಡಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಾದ ನಾವು ವಿವಿಧ ಹುದ್ದೆಗಳಿಗೆ ಹಾಗೂ ಸದಸ್ಯತ್ವ ಸ್ಥಾನಗಳಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡಬೇಕಾಗುತ್ತದೆ. ರಾಜ್ಯ ನಾಯಕರು ಹಾಗೂ ಹೈಕಮಾಂಡದ ನಾಯಕರು, ರಾಜ್ಯ ಹಾಗೂ ರಾಷ್ಟ್ರೀಯ ಅಧ್ಯಕ್ಷರು ನ್ಯಾಯಯುತವಾದ ಬೇಡಿಕೆಯನ್ನು ಇಡೇರಿಸಬೇಕು. ಭೀಮಣ್ಣ ಕವಲಗಿ. ಜಟ್ಟೆಪ್ಪ ರವಳಿ, ಮಲ್ಲಣಗೌಡ ಪಾಟೀಲ, ಜಾವಿದ ಮೋಮಿನ, ಅಯೂಬ ಬಾಗವಾನ, ಇಮ್ರಾನ ಮಕಾನದಾರ, ಪಾಪು ಕಿತ್ತಲಿ, ಸುಬಾಸ ಬಾಬರ, ರೈಸ್ ಅಷ್ಠೆಕರ, ಶೈಲಜಾ ಜಾಧವ ಸೇರಿದಂತೆ ಅನೇಕರು ಇದ್ದರು.
