LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ರೈತರ ಹೋರಾಟಕ್ಕೆ ಯಾರು ಮನ್ನಣೆ ನೀಡುತ್ತಿಲ್ಲ : ಚೂನಪ್ಪ ಪೂಜಾರಿ 

ಗುರ್ಲಾಪೂರ(28):- ಹಲವಾರು ರೈತ ಮುಖಂಡರು ಬೆಳಗಾವಿ ಬಾಗಲಕೋಟೆ  ಯಾದಗಿರಿ  ಮಂಡ್ಯ ಹಾಗೂ ರಾಜ್ಯದಾದ್ಯಂತ ಇರುವ  ಸಕ್ಕರೆ ಕಾರ್ಖಾನೆಗೆ  ಮುತ್ತಿಗೆ ಹಾಕಿ ಸಕ್ಕರೆ ಹೊರಗೆ ಹೋಗದ ಹಾಗೆ  ತಡೆದಿದ್ದಾರೆ. ಇದು ರೈತರ ಆಕ್ರೋಶದ ಕಾರ್ಯವಾಗಿದೆ, ಸಾವಿರಾರು ರೈತರು ಪ್ರತಿಭಟನೆ ಮಾಡಿ ಹೋರಾಟ ಮಾಡಿದರು  ಕೇಂದ್ರ ಸರ್ಕಾರವಾಗಲಿ ರಾಜ್ಯ ಸರ್ಕಾರವಾಗಲಿ ಮತ್ತು ಕಾರ್ಖಾನೆ ಮಾಲೀಕರಾಗಲಿ  ರೈತರು ಹೋರಾಟಕ್ಕೆ ಗೌರವ ಕೊಡದೆ  ಮಂಡೂತನ ಪ್ರದರ್ಶಿಸಿದ್ದಾರೆ. ತಿಂಗಳುಗಟ್ಟಲೆ  ಹೋರಾಟ ಮಾಡಿದರು  ಶಾಂತಿಯುತವಾಗಿ  ಸಾರ್ವಜನಿಕರಿಗೆ ಹಾಗೂ ಸಾರ್ವಜನಿಕ ಆಸ್ತಿ ಯಾವುದೇ ಹಾನಿ ಮಾಡದೆ  ಹೋರಾಟ ಮಾಡುತ್ತಿದ್ದೇವೆ, ನಮ್ಮ ಹೋರಾಟವನ್ನು  ಗೌರವಿಸಿ  ಕಬ್ಬಿಗೆ  ಕಾರ್ಖಾನೆ ಮಾಲೀಕರಿಂದ  4500ರೂ ಹಾಗೂ ರಾಜ್ಯ ಸರ್ಕಾರದ ಎಸ್ಎಪಿ 1000 ರೂ ಕೊಡಲೇಬೇಕೆಂದು     ಕರ್ನಾಟಕ ರಾಜ್ಯ  ರೈತ ಸಂಘಟನೆ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ  ಹೇಳಿದರು.
        ಅವರು ಬುಧವಾರದಂದು ಬೃಹತ್ ಹೋರಾಟದಲ್ಲಿ  ಮಾತನಾಡುತ್ತಾ  ಬೆಳಗಾವಿಯಲ್ಲಿ  ನಡೆದ ಮುಖ್ಯಮಂತ್ರಿಗಳ ಸಭೆಯಲ್ಲಿ  ನಮ್ಮ ಕಷ್ಟ ನಮ್ಮ ಸಾಲ ನಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ  ಮುಖ್ಯಮಂತ್ರಿ ಯವರಿಗೆ  ಹೇಳಿದರೆ, ಮುಖ್ಯಮಂತ್ರಿಗಳೇ ಸರ್ಕಾರದ ಸಾಲದ ಬಗ್ಗೆ, ಸರ್ಕಾರದ ಬಳಿ ಹಣವಿಲ್ಲವೆಂದು  ಹೇಳಿಕೊಳ್ಳುತ್ತಿದ್ದಾರೆ. ಈ ನಾಡಿಗೆ ಅನ್ನ ನೀಡುವ   ರೈತರ ಬಗ್ಗೆ  ಮುಖ್ಯಮಂತ್ರಿಗಳಿಗೆ  ಗೌರವವಿದ್ದರೆ  ರೈತರಿಗೆ ನ್ಯಾಯಯುತವಾಗಿ ಸಿಗಬೇಕಾದ 1000ರೂ ಎಸ್ಎಪಿ 
ಯನ್ನು ಕೊಡಲೇಬೇಕು. ಕಾರ್ಖಾನೆ ಮಾಲೀಕರಿಂದ 4500 ರೂ ಕೊಡಲೇಬೇಕು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ  ಕಾರ್ಖಾನೆ ಮಾಲೀಕರನ್ನು ಕರೆಸಿಕೊಂಡು  ಅವರ ಜೊತೆ ಮಾತುಕತೆ ನಡೆಸಿ  ಕಬ್ಬು ಬೆಳೆಗಾರರಿಗೆ  ನ್ಯಾಯೋಚಿತವಾದ  ಯೋಗ್ಯ ಬೆಲೆ ದೊರೆಯಲೇಬೇಕು . ನಮಗೆ ಮೋಸ ಮಾಡದೆ  , ನಮಗೆ ನ್ಯಾಯ ದೊರಕಿಸಿ ಕೊಡದಿದ್ದರೆ  ನಾಳೆ ನಾವು ಉಗ್ರ ಹೋರಾಟ ಮಾಡುತ್ತೇವೆ ಎಂದು   ಹೇಳಿದರು.
         ಹುಕ್ಕೇರಿ ಮಠಾಧೀಶರಾದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು  ಮಾತನಾಡಿ ರೈತರು ಯಾವಾಗಲೂ ಶಾಂತಿಯ ಮಂತ್ರವನ್ನು  ಹೇಳುವವರು, ಆದರೆ ಅವರನ್ನು ಕ್ರಾಂತಿಗೆ  ಏರಿಸುವುದು ಬೇಡ,  ಅವರು ಕ್ರಾಂತಿಗೆ ಇಳಿಯಬಾರದು  ಎಂದರೆ  ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಕೂಡಿಕೊಂಡು  ರೈತರನ್ನ ನೆಮ್ಮದಿಯಾಗಿ ಇಡು ವ ಕೆಲಸವನ್ನು   ಮಾಡಬೇಕು ಎಂದರು.
      ಗೌರವಾಧ್ಯಕ್ಷ  ಶಶಿಕಾಂತ್ ಗುರೂಜಿ ಮಾತನಾಡಿ  ನಾವು ಈ ಸ್ಥಳದಲ್ಲಿ  ಲಕ್ಷಾಂತರ ಜನ  ಸೇರಿದಾಗ ಮಾತ್ರ  ಸರ್ಕಾರಕ್ಕೆ ಭಯ ಹುಟ್ಟುತ್ತದೆ. ಅದಕ್ಕಾಗಿ ಎಲ್ಲಾ  ನಾಡಿನ ರೈತರು ಬೃಹತ್ ಹೋರಾಟಕ್ಕೆ ಪಾಲ್ಗೊಂಡು  ನಮ್ಮ ಹಕ್ಕನ್ನು  ಪಡದೇ ತೀರಬೇಕು . ನಾಳೆ ನಮಗೆ ನ್ಯಾಯ ಸಿಗಲೇಬೇಕು  ಇಲ್ಲದಿದ್ದರೆ , ಈ ಹೋರಾಟ ರಾಜ್ಯಾದ್ಯಂತ  ಹರಡುತ್ತದೆ ಎಂದರು.
      ರೈತರ ಬೃಹತ್ ಹೋರಾಟಕ್ಕೆ   ಸುತ್ತಮುತ್ತಲು ಊರಿನಿಂದ  ಹೆಣ್ಣು ಮಕ್ಕಳು  ರೊಟ್ಟಿ,  ಚಪಾತಿ, ಬುತ್ತಿ  ಹೊತ್ತುಕೊಂಡು  ಹುರುಪಿನಿಂದ ನಿಂದ ದಾವಿಸುತ್ತಿದ್ದಾರೆ. ಹಾಗೂ ಸಾಕಷ್ಟು ಪ್ರಮಾಣದ ಧನಸಹಾಯ, ದವಸಧಾನ್ಯ  ಹರಿದು ಬರುತ್ತಿದೆ. ಅಸಂಖ್ಯ ರೈತ ಬಾಂಧವರು ಪಾಲ್ಗೊಂಡಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಧರ್ಮಸ್ಥಳ ಸಂಸ್ಥೆಯ ಸೇವಾ ಕಾರ್ಯಗಳು ಮಾದರಿ-ನಾಯಕನಿಸರ್ಗ ಸಂಪತ್ತೇ ನಿಜವಾದ ಐಶ್ವರ್ಯ; ಬದುಕನ್ನು ಆಸ್ವಾದಿಸುವುದೇ ಶ್ರೀಮಂತಿಕೆ: ಅಮೃತಾನಂದ ಸ್ವಾಮೀಜಿರಾಗಾಆವಿವಿ, ವಿಧಾನಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ : ಕುಲಪತಿ ಡಾ.ಭಗವಾನ್ ಬಿ.ಸಿ*ಬುದ್ಧನ ತತ್ವಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ರಾಕೇಶ ಮೈಗೂರ*ಹೆತ್ತವರ ತ್ಯಾಗ, ಋಣ ಮರೆಯಬಾರದುನವದುರ್ಗೆಯರ ಆರಾಧನೆಯಿಂದ ಜೀವನ ಪರಿಪೂರ್ಣಏಷ್ಯನ್ ಪ್ಯಾರಾ ಗೇಮ್ಸ್ ಕಂಚಿನ ಪದಕ ವಿಜೇತ ಸ್ವಾತಿಕ್ ಪಾಟೀಲಗೆ ಬೆಳಗಾವಿಯಲ್ಲಿ ಅದ್ಧೂರಿ ಸ್ವಾಗತಬ್ಯಾಲೆಟ್ ಪೇಪರ್ ಮೇಲೆ 4 ಜನ ಎನ್ ಡಿ ಎ ಅಭ್ಯರ್ಥಿಗಳು ಜಯ: ಸಿದ್ದನಗೌಡರ ಇಂದು ಸ್ತನ ಕ್ಯಾನ್ಸರ್ ಜಾಗೃತಿ: ರಾಗಾಆವಿವಿ ವಿನೂತನ ಹೆಜ್ಜೆಮೋಳೆ-ಕಾತ್ರಾಳ ರಸ್ತೆ ಅಭಿವೃದ್ಧಿಗೆ 1 ಕೋಟಿ ಅನುದಾನ; ಕಾಮಗಾರಿಗೆ ಶಾಸಕ ರಾಜು ಕಾಗೆ ಚಾಲನೆ..!