ಬಳ್ಳಾರಿ. 01 : ಸಮಾಜ ಕಲ್ಯಾಣ ಇಲಾಖೆಯ ಭೂ ಒಡೆತನ ಯೋಜನೆ ಅಡಿಯಲ್ಲಿ ಯೋಜನೆಯ ನಿಯಮಗಳನ್ನು ಉಲ್ಲಂಘಿಸಿ ಭೂಮಿ ಖರೀದಿ ಮತ್ತು ಹಂಚಿಕೆ ಮಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಊಳೂರು ಸಿದ್ದೇಶ್ ಆರೋಪಿಸಿದರು.
ಈ ವಿಷಯದ ಕುರಿತು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದೇಶ್,,
ಸರ್ಕಾರದ ನಿಯಮಾವಳಿಗಳ ಪ್ರಕಾರ ಭೂ ಒಡೆತನ ಯೋಜನೆ ಕುರಿತು ವ್ಯಾಪಕ ಪ್ರಚಾರ ಮಾಡಬೇಕು ಮತ್ತು ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕು ಅದು ಬಿಟ್ಟು ಕೇವಲ ಆಕ್ಷೇಪಣೆಗಳನ್ನು ಮಾತ್ರ ಸ್ವೀಕರಿಸಿ ಯೋಜನೆ ಜಾರಿಗೊಳಿಸಲು ಹುನ್ನಾರ ನಡೆಸಿದ್ದಾರೆ ಇದರಿಂದ ಈ ಯೋಜನೆಯಲ್ಲಿ ಅಕ್ರಮದ ವಾಸನೆ ಕಾಣುತ್ತಿದೆ ಸಂಬಂಧ ಪಟ್ಟ ಇಲಾಖೆ ಈ ಯೋಜನೆಯ ಕುರಿತು ಉನ್ನತ ತನಿಖೆಗೆ ಆದೇಶ ಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಮೂಲಕ 2024-25ನೇ ಸಾಲಿನಲ್ಲಿ ಜಾರಿಗೊಳಿಸಲಾದ ಭೂ ಒಡೆತನ ಯೋಜನೆಯಲ್ಲಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಫಲಾನುಭವಿಗಳ ಆಯ್ಕೆ ಹಾಗೂ ಜಮೀನು ಖರೀದಿ ಮಾಡಲಾಗಿದೆ ಮತ್ತು ಜಮೀನು ಹಂಚಿಕೆ ಮಾಡಿದ ರೈತರ ಸಮರ್ಪಕ ದಾಖಲೆಗಳನ್ನು ಪಡೆದಿರುವುದಿಲ್ಲ ಸುಮಾರು 25 ಕಿಲೋಮೀಟರು ವ್ಯಾಪ್ತಿಯ ಒಳಗಿನ ರೈತರಿಗೆ ಜಮೀನನ್ನು ವಿತರಿಸಬೇಕು ವಿತರಿಸಿದರು ಸಹ ಹೊಸ ಸ್ಥಳ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು ಈವಾವುಗಳನ್ನು ಪಾಲಿಸದೆ ಅಂದಿನ ನಿರ್ದೇಶಕರು ಮತ್ತು ಇತರ ಅಧಿಕಾರಿಗಳು ಅಕ್ರಮ ನಡೆಸಿದ್ದಾರೆ ಎಂಬ ಅನುಮಾನ ಇದೆ ಎಂದರು.
ಇದಕ್ಕೆ ಇಂದು ಕೊಡುವಂತೆ ಅರ್ಜಿ ಸಲ್ಲಿಸಿದ 11 ರೈತರ ಸಹಿಗಳು ಒಬ್ಬರೇ ಸಹಿ ಮಾಡಿದಂತೆ ತೋರುತ್ತದೆ ಎಂದು ಅನುಮಾನವನ್ನು ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮರಿ ಗೌಡ, ರಘು ಕುಮಾರ್, ಮಂಜುನಾಥ್ ಇದ್ದರು.