ಇಂಢಿ : ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಕೊರತೆ ಇಲ್ಲ ರೈತರು ಹಾಗೂ ವ್ಯಾಪಾರಸ್ಥರು ರಸಗೊಬ್ಬರ ಇಲ್ಲ ಎಂದು ತೊಂದರೆಗೆ ಒಳಪಡಬಾರದು, ಮಾರಾಟಗಾರರು ರಸಗೊಬ್ಬರ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಸಹಾಯಕ ಕೃಷಿ ನೀರ್ದಶಕ ಮಹಾದೇವಪ್ಪ ಏವೂರ ಹೇಳಿದರು. ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದ ಗ್ರಾಮಪಂಚಾಯತ ಸಭಾ ಭವನದಲ್ಲಿ ರಸಗೊಬ್ಬರ ಮತ್ತು ಕೀಟನಾಶಕ ಮಾರಟಗಾರರ ಸಭೆಯನ್ನು ಕರೆದು ಮಾತನಾಡಿದ್ದರು.
ಮುಂಗಾರು ಹಂಗಾಮಿನಲ್ಲಿ ರೈತರಿಗೆ ಯಾವುದೇ ತೊಂದರೆ ಆಗದಂತೆ ರಸಗೊಬ್ಬರವನ್ನು ಪೂರೈಸಬೇಕು,ಕಳಪೆ ಮಟ್ಟದ ಗೊಬ್ಬರವನ್ನು ಮಾರಾಟ ಮಾಡಿದ್ದರೆ ಹಾಗೂ ರೈತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದರೆ ಅಂತವರ ವಿರುದ್ದ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ಹೇಳಿದ್ದರು.
ಎಫ್‌ಐಡಿ,ಕೆ ಕೀಸಾನ್,ಪಿಓಎಸ್ ಹಾಗೂ ಗೋದಾಮಿನ ಸ್ಟಾಕ್ ಹೊಂದಾಣಿಕೆ ಆಗಿರಬೇಕು,ರಸಗೊಬ್ಬರ ಮಾರಾಟಗಾರರ ಗೋದಾಮವನ್ನು ಪರಿಶೀಲಿಸಿದ್ದರು.ಎಫ್‌ಐಡಿ ಮುಖಾಂತರ ರಸಗೊಬ್ಬರವನ್ನು ಪೂರೈಸಬೇಕು,ಎಫ್‌ಐಡಿ ಇಲ್ಲದ ರೈತರು ಎಫ್‌ಐಡಿಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕೆಂದು ಹೇಳಿದರು.
ಈ ಸಂರ್ದಭದಲ್ಲಿ ಕೃಷಿ ತಾಂತ್ರಿಕ ಅಧಿಕಾರಿ ಮಾಹಾಂತೇಶ ಶಟ್ಟಣ್ಣನವರ,ಕೃಷಿ ಅಧಿಕಾರಿ ದಾನಪ್ಪ ಕತ್ನಳ್ಳಿ, ಮಾರಾಟಗಾರರು ಹಾಗೂ ಅನೇಕ ರೈತರು ಉಸ್ಥಿತರಿದ್ದರು.
